ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದ ಮೊದಲ ಮಹಿಳಾ ಸ್ಪೀಕರ್ ಸಮಾಧಿ ನೋಡಿದ್ದೀರಾ?

By ಬಿ.ಎಂ.ಲವಕುಮಾರ್
|
Google Oneindia Kannada News

ಚಾಮರಾಜನಗರ, ಡಿಸೆಂಬರ್ 14: ರಾಜ್ಯದ ಮೊದಲ ಮಹಿಳಾ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಜಿಲ್ಲೆಯ ದಿವಂಗತ ಕೆ.ಎಸ್.ನಾಗರತ್ನಮ್ಮ ಅವರನ್ನು ಜನ ಸೇರಿದಂತೆ ಸರ್ಕಾರ ಮರೆತಂತಿದೆ. ಇದಕ್ಕೆ ಶಿಥಿಲಾವಸ್ಥೆಯಲ್ಲಿ ಅವರ ಸಮಾಧಿ ಸಾಕ್ಷಿಯಾಗಿದೆ.

ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿ ಗ್ರಾಮದವರಾದ ನಾಗರತ್ನಮ್ಮನವರು ರಾಜಕೀಯವಾಗಿ ಗುರುತಿಸಿಕೊಂಡು ಉಕ್ಕಿನ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದವರು.

Fisrt woman speake's tomb in Gundlupet is a perfect example for negligence of district administration

ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದ ಕಾಲದಲ್ಲಿ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ನಾಗರತ್ನಮ್ಮನವರು ಸಚಿವೆಯಾಗಿ, ಸ್ಪೀಕರ್ ಆಗಿ ಜನಸೇವೆ ಮಾಡಿದವರು.

ಇವರ ರಾಜಕೀಯ ಹಿನ್ನೆಲೆಯನ್ನು ಕೆದಕಿ ನೋಡಿದರೆ ಅವರ ರಾಜಕೀಯ ಸಾಧನೆ ಅಚ್ಚರಿ ಮೂಡಿಸುತ್ತದೆ. ಜತೆಗೆ ತಾಲೂಕಿನ ಅಭಿವೃದ್ಧಿಗಾಗಿ ಮಾಡಿದ ಕಾರ್ಯಗಳು ಕಣ್ಮುಂದೆ ನಿಲ್ಲುತ್ತದೆ.

1957, 1962, 1967, 1972, 1979, 1983, 1989ರಲ್ಲಿ ನಡೆದ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ 7 ಬಾರಿ ಶಾಸಕರಾಗಿ 2 ದಶಕಗಳ ಕಾಲ ರಾಜಕಾರಣ ಮಾಡಿದ ಸಾಧಕಿಯಾಗಿದ್ದಾರೆ. 1972 ರಿಂದ 1978 ರವರೆಗೆ ಕರ್ನಾಟಕದ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸುವ ಮೂಲಕ ರಾಜ್ಯದ ಮೊಟ್ಟ ಮೊದಲ ಮಹಿಳಾ ಸ್ಪೀಕರ್ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. 1985ರಲ್ಲಿ ಪ್ರತಿಪಕ್ಷದ ನಾಯಕಿಯಾಗಿ, 1989ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪರವರ ಸಚಿವ ಸಂಪುಟದಲ್ಲಿ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ.

Fisrt woman speake's tomb in Gundlupet is a perfect example for negligence of district administration

ಇವರ ಅಧಿಕಾರವಧಿಯಲ್ಲಿ ಗುಂಡ್ಲುಪೇಟೆ ಹಲವು ರೀತಿಯ ಅಭಿವೃದ್ಧಿಯನ್ನು ಕಂಡಿದ್ದಾಗಿ ಹೇಳುವ ಜನ, ನಲ್ಲೂರು ಜಲಾಶಯ ನಿರ್ಮಾಣ ಹಾಗೂ ಶಿವಪುರ ಗ್ರಾಮದಲ್ಲಿ ಕಲ್ಕಟ್ಟಕೆರೆ ನಿರ್ಮಿಸಿದನ್ನು ನೆನಪಿಸಿಕೊಳ್ಳುತ್ತಾರೆ. ಕೆ.ಎಸ್.ನಾಗರತ್ನಮ್ಮ ಅಭಿಮಾನದಿಂದಾಗಿ ಕಬ್ಬಳ್ಳಿ ಸಾಹುಕಾರ್ ಕೆ.ಸಿ.ಸುಬ್ಬಣ್ಣ ಹೆಸರಿನಲ್ಲಿ ಪಟ್ಟಣದಲ್ಲಿ ಸಾರ್ವಜನಕರ ಆಸ್ಪತ್ರೆಯನ್ನು ತೆರೆಯಲಾಯಿತು. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದಾಗಿ ಕೆ.ಎಸ್.ನಾಗರತ್ನಮ್ಮ ಬಾಲಕಿಯರ ಪ್ರೌಢಶಾಲೆ ಹಾಗೂ ಪದವಿ ಪೂರ್ವಕಾಲೇಜನ್ನು ಸ್ಥಾಪಿಸಲಾಗಿದೆ.

ಇವರು ಕಾಂಗ್ರೆಸ್‍ನ್ನು ಪ್ರತಿನಿಧಿಸುತ್ತಿದ್ದರಲ್ಲದೆ, ಕ್ಷೇತ್ರವು ಕಾಂಗ್ರೆಸ್‍ನ ಹಿಡಿತದಲ್ಲೇ ಇತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಜನ 'ಅಮ್ಮಾ' ಎಂದೇ ಕರೆಯುತ್ತಿದ್ದರು. ಅವರು ನಿಧನರಾದ ಬಳಿಕ ನೆನಪಿಗಾಗಿ ಕಬ್ಬಳ್ಳಿಯಲ್ಲಿ ಸಮಾಧಿಯನ್ನು ನಿರ್ಮಿಸಲಾಗಿದೆ. ಆದರೆ ಈ ಸಮಾಧಿ ಇಂದು ದುಸ್ಥಿತಿಗೆ ತಲುಪಿದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದರೂ ಇವರ ಸಮಾಧಿಯತ್ತ ಯಾರೂ ಕೂಡ ಗಮನಹರಿಸಿದಂತೆ ಕಾಣುತ್ತಿಲ್ಲ ಪರಿಣಾಮ ಸಮಾಧಿ ಸುತ್ತಲೂ ಗಿಡಗಂಟಿಗಳು ಬೆಳೆದು ಕೊಂಡೆಯಾಗಿದೆ. ರಾತ್ರಿಯಾಯಿತೆಂದರೆ ಪುಂಡ ಪೋಕರಿಗಳಿಗೆ ಅನೈತಿಕ ಚಟುವಟಿಕೆಗೆ ತಾಣವಾಗಿಯೂ ಮಾರ್ಪಾಡಾಗಿದೆ.

ಇನ್ನಾದರೂ ಸಂಬಂಧಿಸಿದವರು ಇತ್ತಗಮನಹರಿಸಿ ದುಸ್ಥಿತಿಗೊಳಗಾಗಿರುವ ಸಮಾಧಿಯನ್ನು ರಕ್ಷಿಸುವ ಕೆಲಸವನ್ನು ಮಾಡಬೇಕಾಗಿದೆ.

English summary
K.S.Nagaratnmamma, first woman speaker of Karnataka Legislative assebly was a legendary lady, who was from Gundlupet in Chamarajanagara district. She was 7 time MLA from Gundlupet constituency and represented INC. Her tomb is still in Gundlupet and it is the best example for negligence of district administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X