ಮಾರಮ್ಮ ದೇಗುಲದಲ್ಲಿ ವಿಷಪ್ರಸಾದ: 7 ಮಂದಿ ವಿರುದ್ಧ ಎಫ್ ಐಆರ್

ಚಾಮರಾಜನಗರ, ಡಿಸೆಂಬರ್ 16 : ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನದಲ್ಲಿನ ವಿಷ ಪ್ರಸಾದ ದುರಂತ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಏಳು ಜನರ ಮೇಲೆ ಶಂಕೆ ವ್ಯಕ್ತಪಡಿಸಿ, ಎಫ್ ಐಆರ್ ದಾಖಲಿಸಿದ್ದಾರೆ.ವಿಷಪ್ರಸಾದ ಸೇವಿಸಿ ಅಸ್ವಸ್ಥರಾದ ರಾಜಮ್ಮ‌ ಎಂಬುವವರ ಹೇಳಿಕೆಯನ್ನು ಆಧರಿಸಿ ದೂರು ದಾಖಲಿಸಿಕೊಳ್ಳಲಾಗಿದೆ.

ಚಿನ್ನಪ್ಪಿ (55), ಮಾದೇಶ್, ವೀರಣ್ಣ, ಲೋಕೇಶ್ (26), ಮಹದೇವ್ ಪೂಜಾರಿ (45), ಪುಟ್ಟಸ್ವಾಮಿ, ಮಹದೇವಸ್ವಾಮಿ ಎಂಬುವರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ. ದುರಂತದ ತೀವ್ರತೆ ಗೊತ್ತಿದ್ದು, ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಆರೋಪಿಗಳೆಲ್ಲರ ಉದ್ದೇಶವೂ ಒಂದೇ ಎಂಬ ಶಂಕೆಯ ಮೇಲೆ ಐಪಿಸಿ ಸೆಕ್ಷನ್ 34, 204 ಅಡಿ ದೂರು ದಾಖಲಾಗಿದೆ.

Chamarajanagar

ಈ ಕುರಿತು ಪ್ರತಿಕ್ರಿಯಿಸಿರುವ ಚಾಮರಾಜನಗರ ಎಸ್ಪಿ ಧರ್ಮೇಂದ್ರ ಕುಮಾರ್ ಮೀನ, ಪ್ರಕರಣದ ಸ್ವರೂಪ, ಪ್ರಾಣ ಹಾನಿ ಆಧರಿಸಿ ವಿವಿಧ ಐಪಿಸಿ ಸೆಕ್ಷನ್ ಅಡಿ ಸಹ ಪ್ರಕರಣ ದಾಖಲಿಸಬಹುದು. ಏಳು ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಲಾಗುತ್ತಿದೆ. ಈವರೆಗೆ ಪ್ರಕರಣ ಸಂಬಂಧ ಯಾವುದೇ ವರದಿಗಳು ಬಂದಿಲ್ಲ. ಎಫ್ ಎಸ್ ಐಎಲ್ ಹಾಗೂ ಸಿಎಫ್ ಟಿಆರ್ ಐಗೆ ಪ್ರಸಾದದ ಮಾದರಿ ‌ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+