ಬಂಡೀಪುರದಲ್ಲಿ ಕಾಡಿನ ರಾಜನನ್ನೇ ಅಟ್ಟಾಡಿಸಿಕೊಂಡು ಗುಮ್ಮಿದ ಗಜರಾಜ, ವಿಡಿಯೋ ವೈರಲ್
ಚಾಮರಾಜನಗರ, ಮಾರ್ಚ್, 06: ಕಾಡುಗಳಲ್ಲಿ ಪ್ರಾಣಿಗಳ ನಡುವೆ ಕಾಳಗ ನಡೆಯುತ್ತಲೇ ಇರುತ್ತದೆ. ಆದರೆ ಇದೀಗ ನಡೆದಿರುವ ಆನೆ ಮತ್ತು ಹುಲಿ ನಡುವೆ ನಡೆದಿರುವ ಸಮರವಂತೂ ಡಿಫೆರೆಂಟ್ ಆಗಿದ್ದು, ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ಘಟನೆ ನಡೆದದ್ದು ಎಲ್ಲಿ ಅಂತೀರಾ? ಇಲ್ಲಿದೆ ಮಾಹಿತಿ.
ಕಾಡಿನರಾಜ ಎಂದೇ ಕರೆಯಿಸಿಕೊಳ್ಳುವ ಹುಲಿಯನ್ನು ಆನೆಯೊಂದು ಅಟ್ಟಾಡಿಸಿ ಓಡಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದಲ್ಲಿ ನಡೆದಿದ್ದು, ಈ ದೃಶ್ಯವನ್ನು ಕಣ್ಣಾರೆ0 ಕಂಡ ಸಫಾರಿಗರಂತೂ ರೋಮಾಂಚಿತರಾಗಿದ್ದಾರೆ.

ಸಂಜೆ ಸಫಾರಿಯಲ್ಲಿ ಈ ಘಟನೆ ನಡೆದಿದೆ. ಆನೆಯೊಂದು ತನ್ನ ಮರಿ ಜೊತೆ ತೆರಳುತ್ತಿದ್ದಾಗ ಎದುರು ಬಂದ ಹುಲಿರಾಯ ಮರಿ ಮೇಲೆ ಹೊಂಚು ಹಾಕಿದೆ. ಕೂಡಲೇ ಎಚ್ಚೆತ್ತ ಆನೆ ಹುಲಿಯನ್ನು ಅಟ್ಟಾಡಿಸಿಕೊಂಡು ಹೋಗಿದೆ. ಸದ್ಯ, ಈ ವಿಡಿಯೋ ಇದೀಹ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಮತ್ತೊಮ್ಮ ಪ್ರಶಸ್ತಿ: ಈ ಕುರಿತು ಬಂಡೀಪುರದಲ್ಲಿ ಸಿಎಫ್ಒ ರಮೇಶ್ ಕುಮಾರ್ ಮೂಲಕ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರ ನಡೆಸುವ ಸಮೀಕ್ಷೆಯಲ್ಲಿ ಬಂಡೀಪುರ ಎರಡನೇ ಅತ್ಯುತ್ತಮ ವನ್ಯಧಾಮ ಎಂದು ಎಂಬ ಹಿರಿಮೆಗೆ ಪಾತ್ರವಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ, ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಮಿನಿಸ್ಟ್ರಿ ಆಫ್ ಎನ್ವಿರಾನ್‌ಮೆಂಟ್ ಆಯಂಡ್ ಫಾರೆಸ್ಟ್ ಸಂಸ್ಥೆಯು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ, ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗೆ ಕೈಗೊಂಡ ಕ್ರಮಗಳು, ಪ್ರವಾಸಿಗರು, ಶುಚಿತ್ವ, ಸಿಬ್ಬಂದಿ ಮುಂತಾದ ಅಂಶಗಳ ಮಾನದಂಡಗಳ ಪರಿಗಣಿಸಿ ಸಮೀಕ್ಷೆ ನಡೆಸುತ್ತದೆ ಎಂದು ಅವರು ವಿವರಿಸಿದ್ದಾರೆ.
ಕೇರಳದ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೊದಲ ಸ್ಥಾನ, ಬಂಡಿಪುರ ಎರಡನೇ ಸ್ಥಾನ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೂರನೇ ಸ್ಥಾನ ಲಭಿಸಿದೆ.












Click it and Unblock the Notifications