ಚಾಮರಾಜನಗರ: ಬೋನಿಟ್ಟರೂ ಬೀಳದ ಚಿರತೆ ಪತ್ತೆಗೆ ಡ್ರೋಣ್ ಬಳಕೆ!
ಚಾಮರಾಜನಗರ, ಡಿಸೆಂಬರ್ 30: ಅರಣ್ಯ ಇಲಾಖೆ ಇಟ್ಟಿರುವ ಬೋನಿಗೆ ಬೀಳದೆ ಆಟಾಟೋಪ ಮೆರೆಯುತ್ತಿರುವ ಚಿರತೆಯ ಸೆರೆಹಿಡಿಯಲು ಅರಣ್ಯ ಹರಸಾಹಸ ಪಡುತ್ತಿದ್ದು, ಅನ್ಯ ಮಾರ್ಗವಿಲ್ಲದೆ ಅರಣ್ಯ ಇಲಾಖೆ ಚಿರತೆಯ ಜಾಡು ಹಿಡಿಯಲು ದ್ರೋಣ್‌ನ ಮೊರೆ ಹೋಗಬೇಕಾದ ಪರಿಸ್ಥಿತಿ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಗ್ರಾಮಗಳಲ್ಲಿ ನಿರ್ಮಾಣವಾಗಿದೆ.
ಮಲೆಮಹದೇಶ್ವರ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಬರುವ ಬಫರ್ ಜೋನ್ ವಲಯದ ಗಂಗನ ದೊಡ್ಡಿ, ಬಸಪ್ಪನ ದೊಡ್ಡಿ, ಉಡುತೊರೆ ಜಲಾಶಯ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಚಿರತೆಯೊಂದು ಯಾರ ಕಣ್ಣಿಗೂ ಬೀಳದೆ ಕಾಡಿನೊಳಗಿದ್ದುಕೊಂಡೇ ಊರಿಗೆ ಬಂದು ಸಾಕು ನಾಯಿಗಳು ಸೇರಿದಂತೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ. ಈ ಚಿರತೆಯ ಉಪಟಳದಿಂದ ಬೇಸತ್ತಿರುವ ಗ್ರಾಮಸ್ಥರು ಅರಣ್ಯ ಇಲಾಖೆಯ ಮೊರೆ ಹೋಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಇದನ್ನು ಸೆರೆ ಹಿಡಿಯಲು ಸರ್ವ ಪ್ರಯತ್ನ ಪಟ್ಟರೂ ಅದು ಮಾತ್ರ ಚಳ್ಳೆಹಣ್ಣು ತಿನ್ನಿಸುತ್ತಿದೆ.

ಇದೀಗ ಚಿರತೆ ಕಾಣಿಸಿಕೊಂಡಿರುವ ಪ್ರದೇಶದ ವ್ಯಾಪ್ತಿಯ ಗ್ರಾಮಗಳ ರೈತರು ಕೃಷಿಯನ್ನೇ ಅವಲಂಭಿಸಿದ್ದು, ಚಿರತೆ ಈ ವ್ಯಾಪ್ತಿಯಲ್ಲಿ ಓಡಾಡುತ್ತಿರುವ ವಿಷಯ ಅರಿತ ಬಳಿಕ ಮನೆಯಿಂದ ಹೊರಗೆ ಹೋಗುವುದಕ್ಕೆ ಭಯಪಡುವಂತಾಗಿದೆ. ಹೀಗಿರುವಾಗ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡಲು ಧೈರ್ಯ ಬರುತ್ತಿಲ್ಲ. ಇಷ್ಟೇ ಅಲ್ಲದೆ ಯಾವಾಗ ದಾಳಿ ಮಾಡಿ ಕೊಟ್ಟಿಗೆಯಲ್ಲಿ ಕಟ್ಟಿರುವ ಸಾಕು ಪ್ರಾಣಿಗಳನ್ನು ತಿಂದು ಹಾಕಿಬಿಡುತ್ತದೆಯೋ ಎಂಬ ಭಯವೂ ರೈತರನ್ನು ಕಾಡುತ್ತಿದೆ.
ಬೋನಿಟ್ಟರೂ ಬೀಳದ ಚಾಲಾಕಿ ಚಿರತೆ
ಚಿರತೆಗೆ ಬೋನಿಟ್ಟರೂ ಅದು ಬೀಳುತ್ತಿಲ್ಲ. ಜೊತೆಗೆ ಯಾವ ಪ್ರದೇಶದಲ್ಲಿ ಅಡ್ಡಾಡುತ್ತಿದೆ ಎಂಬುದನ್ನು ಪತ್ತೆ ಹಚ್ಚುವುದೇ ಸವಾಲ್ ಆಗಿದೆ. ಹೀಗಾಗಿ ಮೊದಲಿಗೆ ಅದು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಿ ಆ ಭಾಗದಲ್ಲಿ ಸೆರೆ ಹಿಡಿಯಲು ಪ್ರಯತ್ನ ಮಾಡಬೇಕಾಗುತ್ತದೆ. ಹೀಗಾಗಿ ಗಂಗನ ದೊಡ್ಡಿ, ಬಸಪ್ಪನ ದೊಡ್ಡಿ, ಉಡುತೊರೆ ಜಲಾಶಯ ಮೊದಲಾದ ಕಡೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿಯ ತಂಡ ರಚನೆ ಮಾಡಿ ಡ್ರೋಣ್ ಕ್ಯಾಮೆರಾ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಚಿರತೆ ಎಲ್ಲಿದೆ ಎಂಬುದು ಗೊತ್ತಾಗದ ಕಾರಣ ಜನರಲ್ಲಿ ಆತಂಕ ಮುಂದುವರೆದಿದೆ.

ಚಿರತೆ ಚಾಣಾಕ್ಷ್ಯತನ ಮೆರೆಯುತ್ತಿದ್ದು ಹನೂರು ತಾಲೂಕಿನ ಗಂಗನ ದೊಡ್ಡಿ ಹಾಗೂ ಬಸಪ್ಪನ ದೊಡ್ಡಿ ಮತ್ತು ಉಡುತೊರೆ ಜಲಾಶಯ ಸುತ್ತ ಮುತ್ತಲಿನ ಹಳ್ಳದ ಸಮೀಪದಲ್ಲಿಯೇ ರೈತರ ಕಬ್ಬಿನ ಗದ್ದೆ ಬಳಿ ಜನರ ಕಣ್ಣಿಗೆ ಬೀಳುವುದರೊಂದಿಗೆ ಜಮೀನುಗಳಲ್ಲಿ ಕಟ್ಟಿ ಹಾಕಲಾದ ನಾಯಿ, ಮೇಕೆ, ಕುರಿ ಮೇಲೆ ದಾಳಿ ಮಾಡಿ ಕೊಂದು ತಿನ್ನುತ್ತಿದೆ. ಆದರೆ ಅರಣ್ಯ ಇಲಾಖೆ ಹುಡುಕಾಟ ನಡೆಸುವ ವೇಳೆ ಯಾರಿಗೂ ಕಾಣಿಸದೆ ಅಡಗಿಕೊಳ್ಳುತ್ತಿರುವುದು ರೈತರ ನಿದ್ದೆಗೆಡಿಸಿದೆ
ಅರಣ್ಯ ಇಲಾಖೆಯಿಂದ ಚಿರತೆಯ ಹುಡುಕಾಟ
ಇದೀಗ ರೈತರು ಚಿರತೆಗೆ ಹೆದರಿ ಅರಣ್ಯ ಇಲಾಖೆಯ ಕಾರ್ಯಪಡೆಯ ಸೂಚನೆ ಮೇರೆಗೆ ರಾತ್ರಿ ವೇಳೆ ಸಾಕು ಪ್ರಾಣಿಗಳನ್ನು ಸುರಕ್ಷಿತ ಸ್ಥಳದಲ್ಲಿ ಕಟ್ಟಿ ಹಾಕುತ್ತಿರುವುದಲ್ಲದೆ, ಒಬ್ಬೊಬ್ಬರೇ ರೈತರು ಜಮೀನಿತ್ತ ಓಡಾಡುವುದನ್ನು ಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಚಿಕ್ಕ ಮಕ್ಕಳು, ವಯಸ್ಸಾದವರತ್ತ ನಿಗಾವಹಿಸುತ್ತಿದ್ದಾರೆ. ಎಲ್ಲರೂ ಯಾವುದೇ ಭಯವಿಲ್ಲದೆ ಜಮೀನಿನ ಕಡೆಗೆ ಹೋಗಿ ಖುಷಿಯಾಗಿ ಕೆಲಸ ಮಾಡುತ್ತಾ ಇದ್ದರಾದರೂ ಚಿರತೆಯ ಉಪಟಳದ ಬಳಿಕ ರೈತರು ಭಯದಲ್ಲಿಯೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಚಿರತೆ ಕಳೆದ ಹಲವಾರು ತಿಂಗಳಿನಿಂದಲೇ ಆಗೊಮ್ಮೆ ಈಗಮ್ಮೆ, ಅಲ್ಲೊಮ್ಮೆ ಇಲ್ಲೊಮ್ಮೆ ಎಂಬಂತೆ ಕಾಣಿಸಿಕೊಂಡು ನಾಯಿ, ಮೇಕೆ, ಕುರಿಗಳನ್ನು ಟಾರ್ಗೆಟ್ ಮಾಡಿ ಬೇಟೆಯಾಡುತ್ತಿದೆ. ಗಂಗನ ದೊಡ್ಡಿ ಗ್ರಾಮದ ಸುತ್ತಮುತ್ತಲಿನ ಐದಾರು ಕಿ.ಮೀ ವ್ಯಾಪ್ತಿಯಲ್ಲಿ ಅಡ್ಡಾಡುತ್ತಿರುವ ಚಿರತೆ ಸಾಕುಪ್ರಾಣಿಗಳನ್ನು ಕೊಂದು ತಿನ್ನುವುದರ ಜೊತೆಗೆ ಗ್ರಾಮಸ್ಥರಿಗೂ ಪದೇ ಪದೇ ದರ್ಶನ ನೀಡಿ ಬೆಚ್ಚಿ ಬೀಳುವಂತೆ ಮಾಡುತ್ತಿದೆ. ಸಾರ್ವಜನಿಕರ ದೂರಿನ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ತಂಡಗಳನ್ನು ರಚಿಸಿಕೊಂಡು ಹುಡುಕಾಟದಲ್ಲಿದ್ದಾರೆ.
'ಈಗಾಗಲೇ ಬೋನಿಗೆ ಬೀಳದ ಚಿರತೆಯ ನೆಲೆಯನ್ನು ಡ್ರೋಣ್ ಮೂಲಕ ಹುಡುಕಾಟ ಮಾಡಲಾಗುತ್ತಿದೆ. ಜೊತೆಗೆ ಚಿರತೆ ಪತ್ತೆಗೆ ಫೈಬರ್‌ಗೇಜ್ ಹಾಗೂ ತುಮಕೂರು ಗೇಜ್ ಪಂಜರವನ್ನು ಅಳವಡಿಸಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಇಲಾಖೆ ಸಿಬ್ಬಂದಿ ರಾತ್ರಿ ಹಗಲು ತಂಡ ರಚನೆ ಮಾಡಿಕೊಂಡು ಗ್ರಾಮಗಳಲ್ಲಿ ಕಾವಲು ಕಾಯುತ್ತಿರುವುದಾಗಿ' ಬಫರ್‌ಜೋನ್ ವಲಯ ಅರಣ್ಯಾಧಿಕಾರಿ ಪ್ರವೀಣ್ ಮಾಹಿತಿ ನೀಡಿದ್ದಾರೆ. ಅದು ಏನೇ ಇರಲಿ ಚಿರತೆ ಬೋನಿಗೆ ಬೀಳುವ ತನಕ ಈ ವ್ಯಾಪ್ತಿಯ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ. ಆದ್ದರಿಂದ ಆದಷ್ಟು ಬೇಗ ಚಿರತೆ ಬೋನಿಗೆ ಬೀಳಲಿ ಎಂದು ಗ್ರಾಮದ ಜನ ಬೇಡಿಕೊಳ್ಳುತ್ತಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications