ಬುರ್ಖಾ ಧರಿಸಿದ್ರೆ ಸತ್ಮೇಲೆ ಶವಕ್ಕೆ ಏನು ಆಗುವುದಿಲ್ಲ, ತುಂಡುಡುಗೆ ಹಾಕಿದ್ರೆ ನರಕಕ್ಕೆ ಹೋಗ್ತೀರಿ: ಭಾರೀ ವೈರಲ್
ಚಾಮರಾಜನಗರ, ಮಾರ್ಚ್, 24: ಈಗಾಗಲೇ ರಾಜ್ಯದಲ್ಲಿ ಧರ್ಮ ದಂಗಲ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳು ಬುರ್ಖಾ ವಿಚಾರವಾಗಿ ಮಾತನಾಡಿ ಸಂಚಲನ ಸೃಷ್ಟಿಸಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಹಾಗಾದ್ರೆ ಅಷ್ಟಕ್ಕೂ ನಡೆದಿದ್ದು ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಚಾಮರಾಜನಗರದ ಖಾಸಗಿ ಶಾಲೆಯೊಂದಲ್ಲಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಓರ್ವ ವಿದ್ಯಾರ್ಥಿನಿ ಭಾಗವಹಿಸಿದ್ದು, ಈ ವೇಳೆ ಆಕೆ ತಯಾರಿಸಿರುವ ವಿಷಯ ಮಾದರಿ ಮತ್ತು ವಿವರಣೆಯ ವಿಡಿಯೋ ಭಾರೀ ವೈರಲ್ ವೈರಲ್ ಆಗುತ್ತಿದೆ. ವಿದ್ಯಾರ್ಥಿನಿ ಎರಡು ಗೊಂಬೆಗಳನ್ನು ಶವದ ರೀತಿ ಮಲಗಿಸಿದ್ದು, ಇದರಲ್ಲಿ ಒಂದನ್ನು ಕಪ್ಪು ಬಟ್ಟೆಯಿಂದ ಮುಚ್ಚಿದ್ದು, ಮತ್ತೊಂದು ಗೊಂಬೆಯನ್ನು ಚೇಳಿನ ಚಿತ್ರ ಇರುವ ಬಟ್ಟೆಯಿಂದ ಮುಚ್ಚಿದ್ದಳು. ಅಲ್ಲದೆ, ಇದಕಗ್ಕೆ ವಿರಣೆಯನ್ನು ಕೂಡ ನೀಡಿ ಸಂಚಲನ ಸೃಷ್ಟಿಸಿದ್ದಾಳೆ.

"ಬುರ್ಖಾ ಧರಿಸಿದರೆ ಸತ್ತ ಮೇಲೆ ಶವಕ್ಕೆ ಏನು ಆಗುವುದಿಲ್ಲ. ತುಂಡು ಉಡುಗೆ ತೊಟ್ಟರೆ ನರಕಕ್ಕೆ ಹೋಗುವುದರ ಜೊತೆಗೆ ನಿಮ್ಮ ದೇಹವನ್ನ ಹಾವು, ಚೇಳು ತಿನ್ನುತ್ತವೆ" ಎಂದು ವಿದ್ಯಾರ್ಥಿನಿ ವಿವರಣೆ ನೀಡಿದ್ದಾಳೆ. ಈ ದೃಶ್ಯಗಳನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಣಾದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಸರವಣಪ್ರಸಾದ್ ಬಾಲಸುಬ್ರಮಣಿಯನ್ ಎಂಬುವವರು ಟ್ವೀಟ್‌ನಲ್ಲಿ ಪೋಸ್ಟ್ ಮಾಡಿ, "ಕರ್ನಾಟಕದ ಚಾಮರಾಜನಗರದಲ್ಲಿನ ಶಾಲೆಗಳಲ್ಲಿ ವಿಜ್ಞಾನ ಪ್ರದರ್ಶನವನ್ನು ನಡೆಸಲಾಯಿತು. ಇದರಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯೊಬ್ಬಳ ವಿಜ್ಞಾನ ಸೃಷ್ಟಿ ಈ ರೀತಿಯಿದೆ. ಬುರ್ಖಾ ಧರಿಸಿದ್ರೆ ಸಮಾಧಿ ಹೂವುಗಳಿಂದ ತುಂಬಿರುತ್ತದೆ. ನೀವು ತುಂಡು ಉಡುಗೆ ತೊಟ್ಟರೆ, ಸಾವಿನ ನಂತರ ಸಮಾಧಿಯಲ್ಲಿ ಚೇಳು ಮತ್ತು ಹಾವುಗಳು ಇರುತ್ತವೆ ಮತ್ತು ನರಕ್ಕೆ ಹೋಗುತ್ತೀರಿ ಎಂದು ವಿದ್ಯಾರ್ಥಿನಿ ಹೇಳುತ್ತಿದ್ದಾಳೆ," ಎಂದು ಬರೆದಿದ್ದಾರೆ.
ಅಷ್ಟೇ ಅಲ್ಲದೆ, ಸರವಣಪ್ರಸಾದ್ ಬಾಲಸುಬ್ರಮಣಿಯನ್ ಅವರು ಈ ವಿಡಿಯೋವನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಡಿಜಿಪಿಗೆ ಟ್ಯಾಗ್ ಮಾಡಿದ್ದಾರೆ. ಇದು ಕರ್ನಾಟಕದಲ್ಲಿನ ಅದ್ಭುತ ಶಾಲಾ ಶಿಕ್ಷಣ. ನೀವು ಆ ಶಾಲೆಯ ಯೂಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿದರೆ ಇದೇ ರೀತಿಯ ತುಂಬಾ ವೀಡಿಯೊಗಳನ್ನು ನೋಡಬಹುದು," ಅಂತಲೂ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಈ ಪೋಸ್ಟ್ಗೆ ಹಲವರು ಕಾಮೆಂಟ್ ಮಾಡಿದ್ದು, "ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಇದೆಂತಾ ಅಜ್ಞಾನದ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
A science exhibition for schools was held in Chamraj Nagar, Karnataka. This is the science creation of a student who participated in it.
— Saravanaprasad Balasubramanian (Modi ka Pariwar) (@BS_Prasad) March 24, 2025
If you wear a burqa, the grave will be full of flowers. If you wear half-dressed clothes, after death, there will be scorpions and snakes in… pic.twitter.com/mZdC36coje
ವಿದ್ಯಾರ್ಥಿನಿ ಮಾತನಾಡಿರುವ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಮಾತನಾಡಿದ್ದು, ವಿಡಿಯೋ ಪರಿಶೀಲನೆಗಾಗಿ ಬಿಇಒ ಹಾಗೂ ಡಿಡಿಪಿಐ ಕಚೇರಿಯ ಅಧಿಕಾರಿಗಳು ಎರಡು ತಂಡ ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications