ಗುಂಡ್ಲುಪೇಟೆ: ಅನುಕಂಪದ ಅಲೆ ಮೇಲೆ ಗೀತಾ ಜಯಭೇರಿ

Posted By:
Subscribe to Oneindia Kannada

ಗುಂಡ್ಲುಪೇಟೆ, ಏಪ್ರಿಲ್ 13:ಅನುಕಂಪದ ಅಲೆ ಮೇಲೆ ನಡೆದ ಗುಂಡ್ಲುಪೇಟೆ ಉಪ ಸಮರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ಗೀತಾ ಮಹದೇವ ಪ್ರಸಾದ್ ಅವರು 12077 ಮತಗಳ ಅಂತರರಿಂದ ಬಿಜೆಪಿಯ ಪ್ರತಿಸ್ಪರ್ಧೆ ನಿರಂಜನ್ ಕುಮಾರ್ ರನ್ನು ಸೋಲಿಸಿದ್ದಾರೆ.

ದಿವಂಗತ ಎಚ್ ಎಸ್ ಮಹದೇವ ಪ್ರಸಾದ್ ಅವರ ಮೇಲೆ ಕ್ಷೇತ್ರದ ಜನತೆ ಇಟ್ಟಿರುವ ನಂಬಿಕೆ ಇನ್ನಷ್ಟು ಬಲಗೊಂಡಿದ್ದು, ಈ ಗೆಲುವು ಪತಿಗೆ ಅರ್ಪಿಸುತ್ತೇನೆ ಎಂದು ನೂತನ ಶಾಸಕಿ ಗೀತಾ ಅವರು ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.

ಸೆಂಟ್‍ ಜಾನ್ಸ್ ಶಾಲೆಯಲ್ಲಿ ನಡೆದ ಗುಂಡ್ಲುಪೇಟೆ ಉಪ ಚುನಾವಣೆ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸುತ್ತಿದ್ದಂತೆ ಮತ ಎಣಿಕೆ ಕೇಂದ್ರದತ್ತ ಭಾರೀ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ ವಿಜಯೋತ್ಸವಕ್ಕೆ ಚಾಲನೆ ನೀಡಿದರು.

Geetha

ಮತಗಳು:
* ಕಾಂಗ್ರೆಸ್-ಗೀತಾಮಹದೇವಪ್ರಸಾದ್-90,258 (ಗೆಲುವು)
* ಬಿಜೆಪಿ - ನಿರಂಜನ್‍ಕುಮಾರ್-79,381 (ಸೋಲು)
* ಗೆಲುವಿನ ಅಂತರ- 10,877
ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು.ಚುನಾವಣಾ ಆಯೋಗ ಮೆರವಣಿಗೆ ಇನ್ನಿತರೆ ಸಮಾರಂಭಗಳನ್ನು ನಿಷೇಧಿಸಿದ್ದರೂ ಕಾರ್ಯಕರ್ತರ ನಿಯಂತ್ರಿಸಲು ಯಾರೂ ಕಂಡು ಬರಲಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka Congress rejoiced on Thursday as it won the Gundlupet assembly constituency seat. In a closely fought contest, Congress' candidate Geetha Mahadevprasad emerged victorious with BJP's Niranjan Kumar trailing from the start of counting.
Please Wait while comments are loading...