ಬಂಡೀಪುರದಲ್ಲಿ ಪ್ರವಾಸಿಗರ ಬಡಿದಾಟ: "ಆ" ಒಂದೇ.. ಒಂದು ಟ್ವೀಟ್‌ನಿಂದ ಘಟನೆ ಬೆಳಕಿಗೆ!
ಚಾಮರಾಜನಗರ, ಆಗಸ್ಟ್, 07: ಬಂಡೀಪುರದಲ್ಲಿ ಪ್ರವಾಸಿಗರ ನಡುವೆ ಜಟಾಪಟಿ ನಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಕೇರಳ ಮೂಲದ ಅರ್ಜುನ್ ಎಂಬವವರಿಗೆ ಬೆಂಗಳೂರು ಮೂಲದ ನಾಲ್ವರು ಯುವಕರು ಅಡ್ಡಹಾಕಿ ಜಟಾಪಟಿ ಥಳಿಸಿದ್ದ ವೀಡಿಯೋವನ್ನು ಥರ್ಡ್‌ಐ ಎಂಬ ಖಾತೆದಾರ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಟ್ಯಾಗ್ ಮಾಡಿ ಹಂಚಿಕೊಂಡಿದ್ದರು. ಟ್ವೀಟ್ ಗಮನಿಸಿದ ಎಡಿಜಿಪಿ ಅಲೋಕ್ ಕುಮಾರ್ ಚಾಮರಾಜನಗರ ಪೊಲೀಸ್ ಸಿಬ್ಬಂದಿ ಜೊತೆಹೆ ಮಾತನಾಡಿ ಕ್ರಮಕ್ಕೆ ಸೂಚಿಸಿದ್ದರು. ಅದರಂತೆಯೇ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ನಾಲ್ವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.

ಟ್ವಿಟರ್‌ನಲ್ಲಿ ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಟ್ವಿಟರ್‌ನಲ್ಲಿ ಥರ್ಡ್ ಐ ಖಾತೆದಾರ ವಿಡಿಯೋ ಹಂಚಿಕೊಂಡಿರುವುದಕ್ಕೆ ನೆಟ್ಟಿಗರು ಮಿಶ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಯಾವ ಪ್ರವಾಸಿಗರೂ ಸುಖಾಸುಮ್ಮನೆ ಕಾರು ಅಡ್ಡಹಾಕಿ ಬೈಯ್ಯುವುದಿಲ್ಲ, ಕೇರಳ ಮೂಲದ ವ್ಯಕ್ತಿ ಏನೋ ಕಿರಿಕ್ ಮಾಡಿದ್ದರಿಂದ ಕುಪಿತಗೊಂಡು ಹೊಡೆದಿದ್ದಾರೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಒಂದು ದೃಷ್ಟಿಕೋನದಿಂದ ತನಿಖೆ ನಡೆಸದೇ ಯುವಕರು ಯಾಕೆ ಆ ರೀತಿ ಮಾಡಿದರು ಎಂಬುದನ್ನೂ ತನಿಖೆ ನಡೆಸಬೇಕಿದೆ ಎಂದು ಒತ್ತಾಯಿಸಿದ್ದಾರೆ.
ದೂರಿನಲ್ಲಿ ಏನಿದೆ?
ಕಳೆದ ಜೂನ್ 17ರಂದು ಬೆಂಗಳೂರಿನಿಂದ ಕೇರಳಕ್ಕೆ ತೆರಳುವಾಗ ಯುವಕರ ಜೀಪ್‌ಗೆ ಓವರ್ ಟೇಕ್ ಮಾಡಲು ಸ್ಥಳವಕಾಶ ಸಿಗದ ಹಿನ್ನೆಲೆಯಲ್ಲಿ ಏಕಾಏಕಿ ನನ್ನ ಕಾರಿಗೆ ಅಡ್ಡಹಾಕಿ ಹೊಡೆದಿದ್ದಾರೆ. ಡ್ಯಾಶ್ ಬೋರ್ಡ್ ಕ್ಯಾಮರಾ ಒಡೆದು ಹಾಕಲು ಯತ್ನಿಸಿದ್ದಾರೆ, ಕೆಲಸದ ಒತ್ತಡ ಇದ್ದಿದ್ದರಿಂದ ತಡವಾಗಿ ದೂರು ಕೊಡುತ್ತಿರುವುದಾಗಿ ಅರ್ಜುನ್ ಹೇಳಿದ್ದಾರೆ.












Click it and Unblock the Notifications