ಪ್ರಸಾದದಲ್ಲಿ ವಿಷ: ತಮಿಳುನಾಡಿನ ಕಾಳಪ್ಪನ ಮೇಲೆ ಅನುಮಾನ

Recommended Video

      Chamarajanagar temple tragedy : ದೇಗುಲದ ಪ್ರಸಾದ ತಯಾರಿಸಿದ ಅಡುಗೆಯವನಿಗೆ ಮೊದಲೇ ಅನುಮಾನ ಬಂದಿತ್ತು!

      ಚಾಮರಾಜನಗರ, ಡಿಸೆಂಬರ್ 15: ಜಿಲ್ಲೆಯ ಸುಳವಾಡಿ ಗ್ರಾಮದ ಮಾರಮ್ಮ ದೇವಾಲಯದ ಪ್ರಸಾದಕ್ಕೆ ವಿಷ ಬೆರೆಸಿರುವ ಅನುಮಾನ ವ್ಯಕ್ತವಾಗಿದ್ದು, ಬಹುತೇಕರು ಈ ಕೃತ್ಯಕ್ಕೆ ತಮಿಳುನಾಡಿನ ಕಾಳಪ್ಪನೇ ಕಾರಣ ಎಂಬ ಅನುಮಾನಿಸುತ್ತಿದ್ದಾರೆ.

      ಚಾಮರಾಜನಗರ ಜಿಲ್ಲೆಯ ಸುಳವಾಡಿ ಗ್ರಾಮದ ಮಾರಮ್ಮ ದೇವಾಲಯದ ವಿಷಪೂರಿತ ಪ್ರಸಾದ ಸೇವಿಸಿ 11 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಈ ಘಟನೆ ನಡೆಯಲು ದ್ವೇಷವೇ ಕಾರಣ ಎನ್ನಲಾಗುತ್ತಿದೆ.

      ತಮಿಳುನಾಡು ಮೂಲದ ಕಾಳಪ್ಪ ಎಂಬುವರು ಮಾರಮ್ಮ ದೇವಾಲಯವನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕೆಂದು ಕೆಲವು ದಿನಗಳ ಹಿಂದಷ್ಟೆ ಆಡಳಿತ ಮಂಡಳಿ ಹಾಗೂ ಪ್ರಧಾನ ಅರ್ಚಕರ ಬಳಿ ಗಲಾಟೆ ಮಾಡಿದ್ದರು. ಈತ ಬ್ರಹ್ಮೇಶ್ವರಿ ದೇವಾಲಯಕ್ಕೆ ಸಂಬಂಧಪಟ್ಟವನಾಗಿದ್ದಾನೆ.

      Chamarajanagar temple food poison all eyes in Tamilnadus Kalappa

      ಅದೇ ವ್ಯಕ್ತಿಯೇ ಈಗ ಪ್ರಸಾದದಲ್ಲಿ ವಿಷ ಬೆರೆಸಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಾರಮ್ಮ ದೇವಾಲಯದ ವಿವಾದ ನ್ಯಾಯಾದಲ್ಲಿದ್ದು ಇತ್ತೀಚೆಗಷ್ಟೆ ತೀರ್ಪು ಕಾಳಪ್ಪನ ವಿರುದ್ಧವಾಗಿ ಬಂದಿತ್ತು.

      ಮಾರಮ್ಮ ದೇವಾಲಯದಲ್ಲಿ ನಾಲ್ಕು ಸಿಸಿಟಿವಿಗಳಿದ್ದು, ಅವುಗಳ ತನಿಖೆ ನಡೆಸಲಾಗುತ್ತಿದೆ. ಜೊತೆಗೆ ದೇವಾಲಯಕ್ಕೆ ಇಂದು ಗುಪ್ತಚರ ಇಲಾಖೆ ಅಧಿಕಾರಿಗಳು ಆಗಮಿಸಿದ್ದು, ಬೆಳಿಗ್ಗಿನಿಂದಲೂ ದೇವಾಲಯದ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರನ್ನು ಮಾತನಾಡಿಸಿ ಮಾಹಿತಿ ಪಡೆಯುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+