ಬಾಕ್ಸಿಂಗ್‍ನಲ್ಲಿ ಸ್ಪೇನ್ ಮಣಿಸಿದ ಚಾಮರಾಜನಗರ ಯೋಧ

By: ಬಿಎಂ ಲವಕುಮಾರ್
Subscribe to Oneindia Kannada

ಚಾಮರಾಜನಗರ, ಆಗಸ್ಟ್ 13: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಯೋಧರೊಬ್ಬರು ಸ್ಪೇನ್ ವಿರುದ್ಧ ನಡೆದ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿ ದೇಶಕ್ಕೆ ಕೀರ್ತಿತಂದಿದ್ದಾರೆ.

ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಹೊನ್ನೇಗೌಡನಹಳ್ಳಿ ಗ್ರಾಮದ ಎಚ್.ವಿ.ಮಹದೇವಪ್ಪ ಹಾಗೂ ಮಲ್ಲಿಗಮ್ಮನವರ ಪುತ್ರ ಎಚ್.ಎಂ.ಶಿವಶಂಕರಪ್ಪ 2003ರಲ್ಲಿ ಭಾರತೀಯ ಗಡಿ ಭದ್ರತಾಪಡೆಗೆ ಪೇದೆಯಾಗಿ ಸೇವೆಗೆ ಸೇರಿದ್ದು, ಸದ್ಯ ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭಾನುವಾರ ಅಮೆರಿಕಾದ ಲಾಸ್ ಏಂಜಲೀಸ್‍ನಲ್ಲಿ ನಡೆದ ಸ್ಪರ್ಧೆಯಲ್ಲಿ ಸ್ಪೇನ್ ಬಾಕ್ಸರ್ ವಿರುದ್ಧ ಸ್ಪರ್ಧಿಸಿ ಜಯಗಳಿಸಿದ್ದಾರೆ.

Chamarajanagar soldier defeated Spain in boxing

2004 ರಿಂದ 2007ರ ವರೆಗೆ ಬಾಕ್ಸಿಂಗ್ ತರಬೇತಿ ಪಡೆದು 2008-09ರಲ್ಲಿ ಅಖಿಲ ಭಾರತ ಪೊಲೀಸ್ ಅಕಾಡೆಮಿಯ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕಗಳಿಸಿದ್ದರು. ನಂತರ 2010ರಿಂದ 15ರವರೆಗೆ ನಡೆದ ಎಲ್ಲಾ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. 2012ರಲ್ಲಿ ಬ್ರೆಜಿಲ್‍ನಲ್ಲಿ ನಡೆದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ, 2016ರಲ್ಲಿ ಯುಎಸ್‍ಎ ವರ್ಜೀನಿಯಾದ ವಾಷಿಂಗ್‍ಟನ್‍ನಲ್ಲಿ ನಡೆದ ವಿಶ್ವ ಪೊಲೀಸ್ ಕ್ರೀಡಾಕೂಟದಲ್ಲಿ ಅತಿಹೆಚ್ಚು ಭಾರದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿಯ ಪದಕ ಪಡೆದುಕೊಂಡಿದ್ದರು.

Chamarajanagar soldier defeated Spain in boxing

ಇದೀಗ ಆಗಸ್ಟ್ 13ರ ಭಾನುವಾರ ಅಮೇರಿಕಾದ ಲಾಸ್ ಏಂಜಲೀಸ್‍ನಲ್ಲಿ ಸ್ಪೇನ್ ವಿರುದ್ದ ನಡೆದ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳಿಸಿ ದೇಶಕ್ಕೆ ಕೀರ್ತಿತಂದಿದ್ದಾರೆ. ಇವರ ಪತ್ನಿ ಸಂಧ್ಯಾರಾಣಿ, ಪುತ್ರಿ ಲೇಖನಾ ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿದ್ದಾರೆ.

Chamarajanagar soldier defeated Spain in boxing

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A soldier from Gundlupet taluk of Chamarajanagar district won the gold medal at the boxing event against Spain held at Los Angeles, America.
Please Wait while comments are loading...