Get Updates
Get notified of breaking news, exclusive insights, and must-see stories!

ಚಾಮರಾಜನಗರದಲ್ಲಿ 'ಕೈ' ಗೆಲ್ಲಲು ಮತ್ತು ಕಮಲ ಮುದುಡಲು ಕಾರಣವೇನು?

ಚಾಮರಾಜನಗರ, ಜೂನ್. 05: ತೀವ್ರ ಕುತೂಹಲ ಕೆರಳಿಸಿದ್ದ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಆಪ್ತ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್. ಸಿ. ಮಹಾದೇವಪ್ಪ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಗೆಲುವಿನ ನಗೆ ಬೀರಿದ್ದಾರೆ. 1,88,706 ಮತಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿದ್ದಾರೆ.

ಮಂಗಳವಾರ (ಜೂನ್. 04) ನಡೆದ ಮತ ಎಣಿಕೆಯಲ್ಲಿ ಎದುರಾಳಿ ಬಿಜೆಪಿ ಅಭ್ಯರ್ಥಿ ಬಾಲರಾಜ್ ವಿರುದ್ಧ ಸುನೀಲ್ ಬೋಸ್ ಗೆಲುವಿನ ನಗೆ ಬೀರಿ ಸಂಸತ್ ಪ್ರವೇಶ ಮಾಡಿದ್ದಾರೆ. 1991 ರಲ್ಲಿ ಡಾ.ಎಚ್. ಸಿ. ಮಹಾದೇವಪ್ಪ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿ.ಶ್ರೀನಿವಾಸಪ್ರಸಾದ್ ವಿರುದ್ಧ ಪರಾಭವಗೊಂಡಿದ್ದರು. ಈಗ, ಅದೇ ಕ್ಷೇತ್ರದಲ್ಲಿ ಪುತ್ರ ಸುನೀಲ್ ಬೋಸ್ ಗೆದ್ದು ಸಂಸತ್‌ಗೆ ಪ್ರವೇಶಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ 7,51,671 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್ 5,62,965 ಮತಗಳನ್ನು ಪಡೆದಿದ್ದಾರೆ.

Chamarajanagar Lok Sabha Election Results What s the Reason to Congress Win and BJP lose

ಹಾಗಾದರೇ, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಸುನೀಲ್ ಬೋಸ್ ಗೆಲುವಿಗೆ ಕಾರಣವಾದ ಅಂಶಗಳೇನು? ಕಳೆದ ಬಾರಿ ಬಿಜೆಪಿ ವಶಪಡಿಸಿಕೊಂಡಿದ್ದ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಾರಣಗಳೇನು ಎಂಬ ಅಂಶಗಳನ್ನು ಇಲ್ಲಿ ನೋಡೋಣ.

ಕಾಂಗ್ರೆಸ್ ಗೆಲುವಿಗೆ ಕಾರಣಗಳೇನು?

1. ಏಳು ಶಾಸಕರಿಗೂ ಟಾಸ್ಕ್ ಕೊಟ್ಟಿದ್ದು ವರದಾನ.

2. ಮನೆ ಮನೆಗೆ ಭೇಟಿ‌ ಕೊಡುವ ಮೂಲಕ ವ್ಯಾಪಕ ಪ್ರಚಾರ.

3. ಗ್ಯಾರಂಟಿ ಯೋಜನೆ ಜಾರಿಯ ಉಪಯೋಗದ ಬಗ್ಗೆ ಜಾಗೃತಿ.

4. ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೆಚ್ಚಿನ ಓಡಾಟ.

5. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳು ಕಾಂಗ್ರೆಸ್ ‌ತಕ್ಕೆಯಲ್ಲಿರುವುದು.

6. ಮೈಸೂರು ಚಾಮರಾಜನಗರ ಭಾಗದಲ್ಲಿ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್.ಸಿ.ಮಹದೇವಪ್ಪನವರ ಕಸರತ್ತು.

ಬಿಜೆಪಿಗೆ ಹೀನಾಯ ಸೋಲಿಗೆ ಕಾರಣಗಳೇನು?

1. ಜಿಲ್ಲೆಯಲ್ಲಿ ಪ್ರಬಲ‌ ನಾಯಕರ ಹಾಗೂ ಸ್ಟಾರ್ ಪ್ರಚಾರಕರ ಕೊರತೆ.

2. ಕಾಂಗ್ರೆಸ್ ಗ್ಯಾರಂಟಿ ಮುಂದೆ ಮುಗ್ಗರಿಸಬೇಕಾದದ್ದು.

3. ಮೋದಿ ಅಲೆಗೆ ಸೀಮಿತವಾಗಿ, ಸರಿಯಾದ ಪ್ರಚಾರ ಮಾಡದಿರುವುದು.

4. ಹಿಂದಿನ ಸಂಸದರ ಅಭಿವೃದ್ಧಿ ಕುಂಠಿತವನ್ನು ವಿರೋಧ ಪಕ್ಷ ಅಸ್ತ್ರ ಮಾಡಿಕೊಂಡಿದ್ದು.

5. ಸ್ಥಳೀಯ ಮುಖಂಡರು ಕೊನೆಯ ಕ್ಷೇಣದಲ್ಲಿ ಪಕ್ಷ ತೊರೆದದ್ದು ಹಾಗೂ ಸಂಸದರು ತಟಸ್ಥವಾದದ್ದು.

6. ಎಂಟರಲ್ಲಿ ಏಳು ಶಾಸಕರು ಕಾಂಗ್ರೆಸ್‌ನವರೇ ಇದ್ದದ್ದು.

Chamarajanagar Lok Sabha Election Results What s the Reason to Congress Win and BJP lose

ಏಪ್ರಿಲ್ 26ರಂದು ಮೊದಲ ಹಂತದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆದಿದ್ದು, 76.82% ಮತದಾನವಾಗಿದೆ. ಬರೋಬ್ಬರಿ 14 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಸ್. ಬಾಲರಾಜು, ಕಾಂಗ್ರೆಸ್‌ನಿಂದ ಸುನೀಲ್ ಬೋಸ್, ಬಿಎಸ್‌ಪಿಯಿಂದ ಎಂ. ಕೃಷ್ಣಮೂರ್ತಿ ಕಣಕ್ಕಿಳಿದಿದ್ದರು. ಸಿಎಂ ಸಿದ್ದರಾಮಯ್ಯ ಅವರ ವರುಣಾ ವಿಧಾನಸಭಾ ಕ್ಷೇತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡಲಿದ್ದು ತವರಿನಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕಾದ ಪ್ರತಿಷ್ಠೆ ಎದುರಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+