Get Updates
Get notified of breaking news, exclusive insights, and must-see stories!

ಚಾಮರಾಜನಗರ: ಕರ್ನಾಟಕಕ್ಕೆ ಕೆಟ್ಟದಾಗದಿರಲಿ ಎಂದು ಕಿವಿ, ಬಾಯಿ, ಕಣ್ಣು ಮುಚ್ಚಿ ಪ್ರತಿಭಟನೆ

ಚಾಮರಾಜನಗರ, ಅಕ್ಟೋಬರ್‌, 02: ಗಾಂಧಿ ಜಯಂತಿ ಹಿನ್ನೆಲೆ ಮಹಾತ್ಮ ಸಾರಿದ ಸಂದೇಶವನ್ನು ಸಾರಿ ಕಾವೇರಿಗಾಗಿ ಇಂದು ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳು ಮೌನ ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಗಾಂಧಿ ಚಿತ್ರ ಹಿಡಿದು ರಸ್ತೆ ತಡೆ ನಡೆಸಿ ಕಿವಿ, ಕಣ್ಣು, ಬಾಯಿಯನ್ನು ಮುಚ್ಚಿಕೊಂಡು ಮೌನ ಪ್ರತಿಭಟನೆ ನಡೆಸಿದರು.

Cauvery dispute: Protested by covering ears, mouth and eyes in Chamarajanagar

ಅಹಿಂಸೆ ಮೂಲಕ ಮಹಾತ್ಮ ಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅದರಂತೆ ಗಾಂಧಿ ಜಯಂತಿ ದಿನದಂದು ಜೀವನದಿ ಕಾವೇರಿಗಾಗಿ ಇಂದು ನಾವು ಮೌನ ಪ್ರತಿಭಟನೆ ನಡೆಸುತ್ತಿದ್ದೇವೆ. ಕರ್ನಾಟಕಕ್ಕೆ ಕೆಟ್ಟದ್ದಾಗುವುದನ್ನು ನಾವು ನೋಡುವುದಿಲ್ಲ, ಕೇಳುವುದಿಲ್ಲ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಿ ರಾಜ್ಯದ ಜನರಿಗೆ ಸರ್ಕಾರ ಒಳ್ಳೆಯ ಸಂದೇಶ ಸಾರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಇನ್ನು ಪ್ರತಿಭಟನೆ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ತಾಸು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಮೈಸೂರಿನಲ್ಲಿ ಮಹಾತ್ಮಾಗಾಂಧಿಯ ನೆನಪುಗಳು

ಸಾಂಸ್ಕೃತಿಕ ನಗರಿ ಮೈಸೂರಿಗೆ ಮಹಾತ್ಮಾಗಾಂಧಿ ಎರಡು ಬಾರಿ ಬಂದಿದ್ದರು. ಅವರು ಓಡಾಡಿದ ಹೆಜ್ಜೆ ಗುರುತುಗಳು ಇವತ್ತಿಗೂ ನಗರದಲ್ಲಿ ನೆನಪಾಗಿ ಉಳಿದಿವೆ. ಅವರು ಯಾವಾಗ ಬಂದಿದ್ದರು ಮತ್ತು ಎಲ್ಲೆಲ್ಲಿ ಓಡಾಡಿದ್ದರು ಎನ್ನುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.

ಇವತ್ತು ದೇಶದಾದ್ಯಂತ ಪ್ರತಿ ಊರುಗಳಲ್ಲಿ ಗಾಂಧಿ ಪ್ರತಿಮೆ ಮತ್ತು ಗಾಂಧಿ ಹೆಸರಿನಲ್ಲಿ ರಸ್ತೆ, ಮಂಟಪ, ಉದ್ಯಾನ, ಸಂಸ್ಥೆಗಳಿವೆ. ಅವರು ಜೀವಿತಾವಧಿಯಲ್ಲಿ ಹಲವು ಊರುಗಳಿಗೆ ಭೇಟಿ ನೀಡಿದ್ದರು ಎನ್ನುವುದು ನೆನಪಾಗಿ ಉಳಿದಿವೆ. ಅದರಂತೆ ಮೈಸೂರಿನಲ್ಲೂ ಅವರ ನೆನಪು ಚಿರವಾಗಿ ಉಳಿದಿದೆ.

ಮೈಸೂರಿಗೆ ಎರಡು ಬಾರಿ ಮಹಾತ್ಮಾಗಾಂಧೀಜಿ ಬಂದಿದ್ದರು ಎಂಬುದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮ ತೀವ್ರಗತಿಯಲ್ಲಿ ನಡೆಯುತ್ತಿರುವಾಗಲೇ ಗಾಂಧೀಜಿ ಅವರು ದೇಶದಾದ್ಯಂತ ಸುತ್ತಾಡಿ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದರು. ಅವರು ಹೋದಲೆಲ್ಲ ಜನ ಸಾಗರ ಹರಿದು ಬರುತ್ತಿತ್ತು. ಅಷ್ಟೇ ಅಲ್ಲದೆ ಹಾಗೆ ಬರುತ್ತಿದ್ದವರು ಸ್ವಾತಂತ್ರ್ಯ ಹೋರಾಟಕ್ಕೆ ಅನುಕೂಲವಾಗುವಂತೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು.

ಇನ್ನು ಗಾಂಧೀಜಿ ಅವರು ಮೈಸೂರಿನ ಆತಿಥ‍್ಯಕ್ಕೆ ಮಾರುಹೋಗಿದ್ದರು. ಅಷ್ಟೇ ಅಲ್ಲದೆ ಮೈಸೂರು ಮಹಾರಾಜರ ಆಡಳಿತವನ್ನು ಶ್ಲಾಘಿಸಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತವನ್ನು ಮೆಚ್ಚಿ ರಾಜರ್ಷಿ ಎಂದು ಬಿರುದು ನೀಡಿದ್ದರು. ಇದರ ಜೊತೆಗೆ ನಗರದ ಸೌಂದರ್ಯ, ವಾತಾವರಣ, ಸಂಸ್ಕೃತಿ, ಸಂಪ್ರದಾಯ, ತಿಂಡಿ- ತಿನಿಸು ಹೀಗೆ ಹತ್ತು ಹಲವು ವಿಚಾರಗಳು ಅವರಿಗೆ ಇಷ್ಟವಾಗಿತ್ತು.

1927ರಲ್ಲಿ ಮೈಸೂರಿಗೆ ಮೊದಲ ಬಾರಿಗೆ ಗಾಂಧೀಜಿ ಭೇಟಿ ನೀಡಿದ್ದರು. ಆಗ ಅವರು ಇವತ್ತಿನ ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿಯಾಗಿರುವ ಆಗಿನ ಶೇಷಾದ್ರಿಹೌಸ್ ಆಗಿತ್ತು. ಅದರಲ್ಲಿ ವಾಸ್ತವ್ಯ ಹೂಡಿದ್ದರು. ಜೊತೆಗೆ ಅಲ್ಲಿಂದ ಬೇರೆ ಊರುಗಳಿಗೆ ಹೋಗಿ ಭಾಷಣ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಅವರು ಅಲ್ಲಿದ್ದುಕೊಂಡೇ ಚರಕದಿಂದ ನೂಲು ನೇಯುತ್ತಾ, ಭಜನೆ, ಪ್ರಾರ್ಥನೆಯಲ್ಲಿ ತಮ್ಮ ಬಿಡುವಿನ ಸಮಯವನ್ನು ಕಳೆಯುತ್ತಿದ್ದರು.

ಇದೇ ವೇಳೆ ಆಗ ತಾನೇ ಸ್ಥಾಪನೆಗೊಂಡಿದ್ದ ಕೃಷ್ಣರಾಜೇಂದ್ರ ಬಟ್ಟೆ ಗಿರಣಿಯನ್ನು ಉದ್ಘಾಟಿಸಿದ್ದರು. ಅವತ್ತು ಮೈಸೂರಿನಿಂದ ಹೋದವರು ಏಳು ವರ್ಷಕ್ಕೆ ಅಂದರೆ 1934ರಲ್ಲಿ ಮತ್ತೊಮ್ಮೆ ಮೈಸೂರಿಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಇಡೀ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಜೋರಾಗಿಯೇ ನಡೆದಿತ್ತು. ಇದೇ ಸಮಯದಲ್ಲಿ ಮೈಸೂರು ನಗರಕ್ಕೆ ಭೇಟಿ ನೀಡಿದ್ದ ಗಾಂಧೀಜಿ ಅವರು ಶೇಷಾದ್ರಿ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದರು.

ಗಾಂಧೀಜಿ ಅವರು ಎರಡು ಬಾರಿ ಬಂದಾಗಲೂ ಶೇಷಾದ್ರಿ ಹೌಸ್‌ನಲ್ಲಿಯೇ ವಾಸ್ತವ್ಯ ಹೂಡಿದ್ದು ವಿಶೇಷವಾಗಿದೆ. ಎರಡನೇ ಬಾರಿಗೆ ಬಂದಾಗ ಅವರು ಉದ್ಘಾಟಿಸಿದ್ದ ಕೃಷ್ಣರಾಜೇಂದ್ರ ಬಟ್ಟೆ ಗಿರಣಿಯ ಕಾರ್ಮಿಕರು ರಾತ್ರಿ ಹಗಲು ಹೆಚ್ಚುವರಿ ಕೆಲಸ ಮಾಡಿ ಅದರಿಂದ ಬಂದ ಹಣವನ್ನು ಗಾಂಧೀಜಿಗೆ ನೀಡಿದ್ದರು.

ಮೈಸೂರಿನಲ್ಲಿ ಗಾಂಧೀಜಿ ಅವರು ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಅಶೋಕಪುರಂಗೆ ತೆರಳಿ, ಜನರ ಯೋಗಕ್ಷೇಮವನ್ನು ವಿಚಾರಿಸಿದ್ದರು. ನಗರದ ಹೃದಯಭಾಗದ ಒಲಂಪಿಯಾ ಟಾಕೀಸ್ ಬಳಿಯ ಹೋಟೆಲ್ ಆನಂದ ಭವನದ ಕಾರ್ಮಿಕರು ತಾವು ದುಡಿದ ಹಣವನ್ನು ಒಟ್ಟು ಸೇರಿಸಿ, ಕರಂಡಕವನ್ನು ಖರೀದಿಸಿ ಅದನ್ನು ಉಡುಗೊರೆಯಾಗಿ ಗಾಂಧೀಜಿಗೆ ನೀಡಿದ್ದರು.

ಒಡವೆಗಳನ್ನು ಸಭೆಯಲ್ಲೇ ಬಹಿರಂಗ ಹರಾಜು ಹಾಕುತ್ತಿದ್ದರು. ಅದನ್ನು ಗಾಂಧೀಜಿ ಟೌನ್‌ಹಾಲ್‌ನಲ್ಲಿ ಹರಾಜು ಹಾಕಿದಾಗ ಹೋಟೆಲ್ ಮಾಲೀಕರು ಅದನ್ನು ಖರೀದಿಸಿದ್ದರು. ನಗರದ ರಂಗಾಚಾರ್ಲು ಪುರಭವನ (ಟೌನ್‌ಹಾಲ್)ದಲ್ಲಿ ಕಾಂಗ್ರೆಸ್‌ನಿಂದ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಸಭೆಯಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಗಾಂಧೀಜಿಯಿಂದ ಪ್ರಭಾವಿತರಾದ ಜನ ಸ್ವಾತಂತ್ರ್ಯ ಹೋರಾಟಕ್ಕೆ ಅಗತ್ಯವಿರುವ ಖರ್ಚು ವೆಚ್ಚವನ್ನು ಭರಿಸಲು ಸ್ವತಃ ತಮ್ಮ ಒಡವೆ, ಹಣಗಳನ್ನು ನೀಡುತ್ತಿದ್ದರು.

ಒಡವೆಗಳನ್ನು ಸಭೆಯಲ್ಲೇ ಬಹಿರಂಗ ಹರಾಜು ಹಾಕಿ ಅದರಿಂದ ಬಂದ ಹಣದ ಖರ್ಚು- ವೆಚ್ಚಗಳನ್ನು ಅವರು ಸ್ಥಳದಲ್ಲೇ ಪ್ರಕಟಿಸುವ ಮೂಲಕ ಎಲ್ಲವನ್ನೂ ಜನರ ಮುಂದೆಯೇ ಗಾಂಧೀಜಿ ತೆರೆದಿಡುತ್ತಿದ್ದರು.

ಗಾಂಧೀಜಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದಾಗ ಅದರಿಂದ ಪ್ರಭಾವಿತರಾದ ಹೆಚ್ಚಿನ ಮಹಿಳೆಯರು ಸ್ವಾತಂತ್ರ್ಯ ಹೋರಾಟಕ್ಕೆ ನಮ್ಮದೊಂದು ಕಾಣಿಕೆಯಿರಲಿ ಎಂದು ತಾವು ಧರಿಸಿದ್ದ ಒಡವೆಗಳನ್ನೇ ಬಿಚ್ಚಿ ಗಾಂಧೀಜಿ ಮುಂದಿಡುತ್ತಿದ್ದರು. ಇದನ್ನು ಸಹಿಸದ ಮತ್ತು ತಮ್ಮ ಪತ್ನಿಯರ ದೇಶಪ್ರೇಮವನ್ನು ಅರ್ಥ ಮಾಡಿಕೊಳ್ಳದ ಕೆಲ ಮಹಿಳೆಯರ ಗಂಡಂದಿರು ಅವರ ವಿರುದ್ಧ ಹರಿಹಾಯ್ದು, ಸಮಾರಂಭದಲ್ಲೇ ಥಳಿಸಿದ್ದರು.

ಈ ಘಟನೆ ಗಾಂಧೀಜಿ ಮನಸ್ಸಿಗೆ ನೋವುಂಟು ಮಾಡಿತ್ತಂತೆ. ಹೀಗಾಗಿ ಅವರು ಸಭೆಯನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಇದೊಂದು ರೀತಿಯಲ್ಲಿ ಗಾಂಧೀಜಿಗೆ ಕಹಿ ಅನುಭವವಾಗಿತ್ತಾದರೂ ಅದರಿಂದ ಅವರು ಇನ್ನು ಮುಂದೆ ಎಲ್ಲರೂ ತಮ್ಮ ಸ್ವ ಇಚ್ಛೆಯಿಂದಷ್ಟೆ ನೀಡಿದರೆ ಸ್ವೀಕರಿಸುವ ತೀರ್ಮಾನ ಮಾಡಿದ್ದರಂತೆ. ಇದು ಎಲ್ಲವೂ ಈಗ ನೆನಪುಗಳಷ್ಟೆ. ಗಾಂಧಿ ಜಯಂತಿಯ ಈ ದಿನ ಮೈಸೂರಿನ ಅವರ ಭೇಟಿಯ ನೆನಪು ಇತಿಹಾಸದ ದಿನಗಳತ್ತ ನಮ್ಮನ್ನು ಕರೆದೊಯ್ಯುತ್ತವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+