ಸಿಪಿ ಯೋಗೇಶ್ವರ್ ಬಾವ ನಾಪತ್ತೆ ಪ್ರಕರಣ: ಮೂವರಿಂದ ಕೊಲೆ ಶಂಕೆ
ಚಾಮರಾಜನಗರ, ಡಿಸೆಂಬರ್, 04: ಎಂಎಸ್‌ಸಿ ಸಿ.ಪಿ.ಯೋಗೇಶ್ವರ್ ಬಾವ ಮಹಾದೇವಯ್ಯ ನಾಪತ್ತೆಯಾದ ಪ್ರಕರಣ ತಿರುವು ಪಡೆಯುತ್ತಿದ್ದು, ಕೊಲೆ ಆಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಹನೂರು ತಾಲೂಕಿನ ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಕಾರು ಪತ್ತೆಯಾಗಿತ್ತು. ಕಾರಿದ್ದ ಸ್ಥಳದ ಮುಂಭಾಗದ ಅಂಗಡಿಯೊಂದರ ಸಿಸಿಟಿವಿ ಪರಿಶೀಲನೆ ವೇಳೆ ಮೂವರು ಮುಸುಕುದಾರಿಗಳು ಕಾರಿನಿಂದ ಇಳಿದು ಹೋಗುವುದು ಸೆರೆಯಾಗಿದೆ.

ಕಾರಿನ ಗಾಜು ಒಡೆದಿದ್ದು, ಹಾಗೂ ಕಾರಿನಲ್ಲಿದ್ದ ರಕ್ತದ ಕಲೆಗಳನ್ನು ಗಮನಿಸಿದರೆ ಮಹಾದೇವಯ್ಯ ಕೊಲೆಯಾಗಿರುವ ಸಾಧ್ಯತೆ ಹೆಚ್ಚಿದ್ದು ಈ ಬಗ್ಗೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೊಳ್ಳೇಗಾಲ ಡಿವೈಎಸ್ಪಿ ಹಾಗೂ ರಾಮನಗರ ಪೊಲೀಸರು ಜಂಟಿಯಾಗಿ ನಾಲ್ ರೋಡ್ ಸುತ್ತಮುತ್ತಲು ಮಹದೇವಯ್ಯ ಅವರನ್ನು ಹುಡುಕಾಡುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯೂ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ. ಇನ್ನು, ರಾಮಾಪುರದಲ್ಲೇ ಎಂಎಲ್‌ಸಿ ಯೋಗೇಶ್ವರ್ ಮೊಕ್ಕಾಂ ಹೂಡಿದ್ದಾರೆ ಎಂದು ತಿಳಿದುಬಂದಿದೆ.
ರಾಮಾಪುರಕ್ಕೆ ಸಿ.ಪಿ.ಯೋಗೇಶ್ವರ್ ಭೇಟಿ
ಇನ್ನು ತೋಟದ ಮನೆಯಿಂದ ಕಾಣೆಯಾಗಿರಯವ ಬಾವ ಮಹಾದೇವಯ್ಯ ಕಾರು ಪತ್ತೆಯಾದ ಮಾಹಿತಿ ತಿಳಿದು ಹನೂರು ತಾಲೂಕಿನ ರಾಮಾಪುರಕ್ಕೆ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್ ಅವರು ಭೇಟಿ ನೀಡಿದ್ದರು.
ಭಾನುವಾರ ತಡರಾತ್ರಿ ಮಹಾದೇವಯ್ಯ ಅವರು ಬಳಸುತ್ತಿದ್ದ ಕಾರು ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಪತ್ತೆಯಾಗಿದ್ದು, ಸ್ಥಳಕ್ಕೆ ಸಿ.ಪಿ.ಯೋಗೇಶ್ವರ್ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. ಚನ್ನಪಟ್ಟಣ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದು, ಬೆರಳಚ್ಚು ತಜ್ಞರು ಕೂಡ ಕಾರನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಈ ವೇಳೆ ಕಾರಿನ ಗಾಜು ಒಡೆದಿದ್ದು, ರಕ್ತದ ಕಲೆಗಳು ಕೂಡ ಪತ್ತೆಯಾಗಿದ್ದವು.
ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದ ಮನೆಯಿಂದ ಮಹಾದೇವಯ್ಯ 3 ದಿನಗಳ ಹಿಂದೆ ಕಾಣೆಯಾಗಿದ್ದರು. ಈ ನಾಪತ್ತೆ ಪ್ರಕರಣ ಕಿಡ್ನಾಪ್ ಎಂಬ ತಿರುವು ಪಡೆದಿದೆ. ಕಾರು ಮಾತ್ರ ಪತ್ತೆಯಾಗಿದ್ದು, ಮಹಾದೇವಯ್ಯ ಅವರ ಸುಳಿವು ಇನ್ನು ಪತ್ತೆಯಾಗಿಲ್ಲ.












Click it and Unblock the Notifications