ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾಪಂ ಅಧ್ಯಕ್ಷೆಯಿಂದ ಒಂದೇ ದಿನದಲ್ಲಿ ಶೌಚಾಲಯ ಸಿದ್ಧ!

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಡಿಸೆಂಬರ್ 9: ಪ್ರತಿ ಗ್ರಾಮದಲ್ಲಿ ಶೌಚಾಲಯ ನಿರ್ಮಾಣದ ಅಗತ್ಯತೆಯನ್ನು ಜನರಿಗೆ ಹೇಳಿ ಅವರು ಶೌಚಾಲಯ ನಿರ್ಮಿಸುವಂತೆ ಮಾಡಬೇಕಾದರೆ ತಮ್ಮಲ್ಲೇ ಶೌಚಾಲಯವಿಲ್ಲದನ್ನು ಮನಗಂಡ ಗ್ರಾಪಂ ಅಧ್ಯಕ್ಷೆಯೊಬ್ಬರು ಒಂದೇ ದಿನದಲ್ಲಿ ಶೌಚಾಲಯ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಸಾಕಮ್ಮ ಒಂದೇ ದಿನದಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಂಡಿರುವ ಫಲಾನುಭವಿ. ಇವರು ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳಾಗಿದ್ದರೂ ಇಲ್ಲಿವರೆಗೆ ಶೌಚಾಲಯ ಕಟ್ಟಿಸಿಕೊಳ್ಳುವ ಮನಸ್ಸು ಮಾಡಿಯೇ ಇರಲಿಲ್ಲ. ಆದರೆ ಜಿಲ್ಲಾ ಪಂಚಾಯಿತಿ ವತಿಯಿಂದ ಅನುಷ್ಠಾನಗೊಂಡಿರುವ ಉಷಾ ಅಭಿಯಾನದಿಂದ ಪ್ರೇರಿತರಾಗಿ ಒಂದೇ ದಿನದಲ್ಲಿ ಶೌಚಾಲಯ ಕಟ್ಟಿಸಿದರು.[ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಕಾಲಿಗೆ ಬಿದ್ದ ಗ್ರಾ.ಪಂ ಅಧ್ಯಕ್ಷ]

Built the toilet in one day in mangala in chamrajnagar

ಸಾಕಮ್ಮನವರ ಪತಿ ಚಿಕ್ಕೂಸಪ್ಪ, ಮಕ್ಕಳಾದ ಕುಮಾರ, ಜಗದೀಶ ಮೂವರು ಸೇರಿ ಕೊಂಡು ಮಂಗಲ ಗ್ರಾಮದ ತಮ್ಮ ಮನೆಯ ಮುಂದೆ ಇದ್ದ ಖಾಲಿ ಜಾಗದಲ್ಲಿ ಗುಂಡಿ ತೆಗೆಯಲು ಮುಂದಡಿ ಇಟ್ಟರು. ಯಡಿಯೂರಿನಿಂದ ಬಂದ ಮೂವರು ಗಾರೆ ಕೆಲಸಗಾರರು ತಳಪಾಯ ನಿರ್ಮಿಸಿಕೊಂಡು ಕಟ್ಟಡ ಕಟ್ಟಲು ಪ್ರಾರಂಭಿಸಿದರು. ನೋಡು ನೋಡುತ್ತಿದ್ದಂತೆ ಇಳಿಸಂಜೆಯ ಹೊತ್ತಿಗೆ ಶೌಚಾಲಯ ಸದ್ದಿಲ್ಲದೆ ಎದ್ದು ನಿಂತಿತು.[ಮೈಸೂರಲ್ಲಿ ಶತಾಯುಷಿ ಬೋರಜ್ಜಿಯ ಶೌಚಾಲಯ ಅಭಿಯಾನ...!]

ಶೌಚಾಲಯ ನಿರ್ಮಾಣ ಕುರಿತು ಮಾತನಾಡಿದ ಸಾಕಮ್ಮ "ಜಿಪಂ ಸಿಇಓ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಹೊಸದಾಗಿ ಅನುಷ್ಠಾನಗೊಳಿಸಿರುವ ಉಷಾ ಕಾರ್ಯಕ್ರಮದ ಅಂಗವಾಗಿ ನಾವು ಪಂಚಾಯಿತಿ ವತಿಯಿಂದ ಜಾಥಾ ಕೈಗೊಂಡೆವು. ಶೌಚಾಲಯ ಇಲ್ಲದ ಶಾಲಾ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಮನೆಗಳಿಗೆ ಭೇಟಿ ನೀಡಿ ಅವರನ್ನು ಮನವೊಲಿಸುವ ಕಾರ್ಯ ಮಾಡಿದೆವು. ಆದರೆ ಜಾಥಾ ಹೊರಡುವಾಗ ಇದ್ದ ಹುಮ್ಮಸ್ಸು ಸ್ವಲ್ಪ ದಾರಿಗೆ ಹೋದ ಮೇಲೆ ಕಡಿಮೆಯಾಯಿತು. ಏಕೆಂದರೆ ಕೆಲವು ಮನೆಯವರು ಅಧ್ಯಕ್ಷರೇ ನಿಮ್ಮ ಮನೆಯಲ್ಲಿಯೇ ಶೌಚಾಲಯವಿಲ್ಲವಲ್ಲ ನೀವು ಯಾವಾಗ ಕಟ್ಟಿಕೊಳ್ಳುತ್ತೀರಿ? ಎಂದು ಪ್ರಶ್ನೆ ಹಾಕಿದರು. ಇದು ನನಗೆ ಮುಜುಗರವನ್ನುಂಟು ಮಾಡಿತು. ಆಗ ಗಟ್ಟಿ ನಿರ್ಧಾರ ಮಾಡಿ ಮನೆಯಲ್ಲಿ ಶೌಚಾಲಯ ಕಟ್ಟಿಸಿಯೇ ಬಿಡಬೇಕು ಎಂದು ತಿರ್ಮಾನಕ್ಕೆ ಬಂದು ಮನೆಯವರೊಡಗೂಡಿ ಶೌಚಾಲಯ ನಿರ್ಮಿಸಿದೆವು."

Built the toilet in one day in mangala in chamrajnagar

ಇನ್ನು ಮುಂದೆ ಯಾವುದೇ ಮುಜುಗರವಿಲ್ಲದೆ ಗ್ರಾಮದಲ್ಲಿ ಓಡಾಡಿ ಶೌಚಾಲಯ ನಿರ್ಮಾಣ ಮಾಡುವಂತೆ ಗ್ರಾಮಸ್ಥರಿಗೆ ಹೇಳಬಹುದು ಎಂಬುದು ಅವರಿಗೆ ನೆಮ್ಮದಿ ತಂದ ವಿಚಾರವಾಗಿದೆ.[ಮೈಸೂರಲ್ಲಿ ಮಂಗಳಮುಖಿಯರ ಶೌಚಾಲಯ, ದೇಶದಲ್ಲೇ ಪ್ರಥಮ?]

ಇದೀಗ ಗ್ರಾಮ ಪಂಚಾಯಿತಿಯ ಮಹಿಳಾ ಸದಸ್ಯರಾದ ನಾಗಲಕ್ಷ್ಮಿ, ಶಶಿಕಲಾ, ಶೃತಿ, ನೀಲಮ್ಮ, ಉಪಾಧ್ಯಕ್ಷರಾದ ಸುಮಾ ಅವರು ಸಾಕಮ್ಮನವರ ಜತೆ ಸೇರಿಕೊಂಡು ಗ್ರಾಮದ ಪ್ರತಿ ಬೀದಿಯಲ್ಲೂ ಸಂಚರಿಸಿ ಮನೆ-ಮನೆಗೆ ಭೇಟಿ ಕೊಟ್ಟು ಶೌಚಾಲಯ ಕಟ್ಟಿಸಿಕೊಳ್ಳುವಂತೆ ಪ್ರೇರೆಪಿಸುವುದರೊಂದಿಗೆ ತಾವು ಶೌಚಾಲಯ ನಿರ್ಮಿಸಿದ ಕಥೆ ಹೇಳಿ ಅವರನ್ನು ಹುರಿದುಂಬಿಸುತ್ತಿದ್ದಾರೆ. ಇದರ ಫಲವಾಗಿ ಗ್ರಾಮದಲ್ಲಿ 60 ಗುಂಡಿಗಳ ನಿರ್ಮಾಣವಾಗಿರುವುದಾಗಿ ಅವರು ತಿಳಿಸಿದರು.

English summary
sakamma grama panchayat president of mangala, chamrajnagar taluk/district. Built the toilet in one day in his village to Usha campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X