ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರದಲ್ಲಿ ಬರ ಪರಿಶೀಲನೆ ನಡೆಸಿದ ಯಡಿಯೂರಪ್ಪ

|
Google Oneindia Kannada News

ಚಾಮರಾಜನಗರ, ಜನವರಿ 24 : ಕರ್ನಾಟಕ ಬಿಜೆಪಿ ಅಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಬರ ಪರಿಶೀಲನೆ ಆರಂಭಿಸಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಯಡಿಯೂರಪ್ಪ ನೇತೃತ್ವದ ತಂಡ ರೈತರ ಹೊಲಗಳಿಗೆ ಭೇಟಿ ನೀಡಿತು.

ಗುರುವಾರ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ನಾಯಕರ ತಂಡ ಮೊದಲು ಹೆಗ್ಗೋಠಾರಾ ಗ್ರಾಮ ಪಂಚಾಯಿತಿಯ ಮುತ್ತಿಗೆ ಗ್ರಾಮಕ್ಕೆ ಭೇಟಿ ನೀಡಿತು. ಪೂರ್ವ ನಿಗದಿಯಂತೆ ಸೋಮವಾರದಿಂದ ಯಡಿಯೂರಪ್ಪ ಪ್ರವಾಸ ಆರಂಭವಾಗಬೇಕಿತ್ತು.

ರೆಸಾರ್ಟ್ ಮೋಜು ಮುಗಿಸಿಬಂದ ಬಿಜೆಪಿ ಬರಗಾಲ ವೀಕ್ಷಣೆಗೆ ಸಜ್ಜುರೆಸಾರ್ಟ್ ಮೋಜು ಮುಗಿಸಿಬಂದ ಬಿಜೆಪಿ ಬರಗಾಲ ವೀಕ್ಷಣೆಗೆ ಸಜ್ಜು

ಆದರೆ, ಶಿವಕುಮಾರ ಶ್ರೀಗಳ ನಿಧನದ ಹಿನ್ನಲೆಯಲ್ಲಿ ಎರಡು ದಿನ ತಡವಾಯಿತು. ಗುರುವಾರ ವಿವಿಧ ಬಿಜೆಪಿ ನಾಯಕರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬರ ಪರಿಶೀಲನೆಯನ್ನು ಆರಂಭಿಸಿದ್ದಾರೆ. ರೈತರ ಹೊಲಕ್ಕೆ ಭೇಟಿ ನೀಡಿ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ.

ಬರ ತಾಲೂಕುಗಳಿಗೆ ಹೆಚ್ಚುವರಿ 50 ಲಕ್ಷ ಅನುದಾನ: ದೇಶಪಾಂಡೆ ಘೋಷಣೆಬರ ತಾಲೂಕುಗಳಿಗೆ ಹೆಚ್ಚುವರಿ 50 ಲಕ್ಷ ಅನುದಾನ: ದೇಶಪಾಂಡೆ ಘೋಷಣೆ

'70 ಸಾವಿರ ರೂ. ಖರ್ಚು ಮಾಡಿ ಎರಡೂವರೆ ಎಕರೆ ಹತ್ತಿ, ಎರಡು ಎಕರೆ ಹುರಳಿ ಹಾಕಿದ್ದೆ. ಆದರೆ ನನಗೆ 3 ಸಾವಿರ ರೂ. ಆದಾಯ ಮಾತ್ರ ಸಿಕ್ಕಿದೆ. ಈ ರೀತಿ ಆದರೆ ಜೀವನ ನಡೆಸುವುದು ಹೇಗೆ?' ಎಂದು ರೈತ ಮಹದೇವೇಗೌಡ ಅಳಲು ತೋಡಿಕೊಂಡರು....

ಕರ್ನಾಟಕ ಬಿಜೆಪಿಯಿಂದ ಬರ ಅಧ್ಯಯನ : ತಂಡಗಳ ವಿವರಕರ್ನಾಟಕ ಬಿಜೆಪಿಯಿಂದ ಬರ ಅಧ್ಯಯನ : ತಂಡಗಳ ವಿವರ

ರೈತರಿಂದ ಮಾಹಿತಿ ಸಂಗ್ರಹ

ರೈತರಿಂದ ಮಾಹಿತಿ ಸಂಗ್ರಹ

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ನಾಯಕರ ನಿಯೋಗ ಬದನಕುಪ್ಪೆ, ಹೆಗ್ಗೋಠಾರಾ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿತು. ಬದನಕುಪ್ಪೆಯಲ್ಲಿ ಪ್ರಕಾಶ್ ಅವರ ತೋಟಕ್ಕೆ ಭೇಟಿ ನೀಡಿ ಸತ್ತು ಹೋಗಿರುವ ತೆಂಗಿನ ಮರಗಳನ್ನು ವೀಕ್ಷಣೆ ಮಾಡಿದರು. ರೈತರು ತಮ್ಮ ಅಹವಾಲುಗಳನ್ನು ಯಡಿಯೂರಪ್ಪ ಅವರಿಗೆ ಹೇಳಿದರು.

ಕಾಲುಬಾಯಿ ಜ್ವರದ ದೂರು

ಕಾಲುಬಾಯಿ ಜ್ವರದ ದೂರು

ಈ ಭಾಗದಲ್ಲಿ ಹೈನುಗಾರಿಕೆ ನಡೆಸುವವರು ಜಾಸ್ತಿ. ಈಗ 18 ಜಾನುವಾರುಗಳಿಗೆ ಕಾಲುಬಾಯಿ ರೋಗ ಬಂದಿದೆ. 2 ಹಸುಗಳು ಸತ್ತಿವೆ, ಇದಕ್ಕೆ ಯಾವುದೇ ಪರಿಹಾರ ನೀಡಿಲ್ಲ. ಸರ್ಕಾರ, ಜಿಲ್ಲಾಡಳಿತ ರೋಗವನ್ನು ನಿಯಂತ್ರಣ ಮಾಡಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ರೈತರು ಆರೋಪ ಮಾಡಿದರು.

ಜಿಲ್ಲಾಧಿಕಾರಿಗಳ ಜೊತೆ ಸಭೆ

ಜಿಲ್ಲಾಧಿಕಾರಿಗಳ ಜೊತೆ ಸಭೆ

ರೈತರ ಜಮೀನಿಗೆ ಭೇಟಿ ನೀಡಿದ ಬಳಿಕ ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದರು. ಜಮೀನುಗಳಲ್ಲಿ ರೈತರು ಹೇಳಿಕೊಂಡ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ, ಸಾಲಮನ್ನಾ ಸೇರಿದಂತೆ ಇತರ ಮಾಹಿತಿಗಳನ್ನು ಪಡೆದುಕೊಂಡರು.

ಮೇವು ಸಂಗ್ರಹಣೆಗೆ ಸಲಹೆ

ಮೇವು ಸಂಗ್ರಹಣೆಗೆ ಸಲಹೆ

ಜಿಲ್ಲೆಯ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಯಡಿಯೂರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದರು. ಸತ್ತು ಹೋಗಿರುವ ತೆಂಗಿನ ಗಿಡಗಳಿಗೆ ನಿಗದಿ ಪಡಿಸಿರುವ (ಪ್ರತಿ ಮರಕ್ಕೆ 400 ರೂ.) ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು, ಮುಂದಿನ ದಿನಗಳಲ್ಲಿ ಬರ ಹೆಚ್ಚಾಗಲಿದ್ದು, ಮೇವು ಸಂಗ್ರಹಕ್ಕೂ ಗಮನ ಕೊಡಬೇಕು ಎಂದು ಯಡಿಯೂರಪ್ಪ ಸಲಹೆ ನೀಡಿದರು.

English summary
Karnataka BJP president and Opposition leader B.S.Yeddyurappa began drought tour from Chamarajanagar on January 24, 2019. After inspecting in farmers land Yeddyurappa met the deputy commissioner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X