ಗುಂಡ್ಲುಪೇಟೆ ಬಳಿ ಅಪರೂಪದ ಕರಿ ಚಿರತೆ ಸಾವು
ಚಾಮರಾಜನಗರ, ಫೆಬ್ರವರಿ 15: ಬಂಡೀಪುರ ಅಭಯಾರಣ್ಯದಲ್ಲಿ ಒಂದಲ್ಲ ಒಂದು ವನ್ಯ ಪ್ರಾಣಿ ಸಾವನ್ನಪ್ಪುತ್ತಲೇ ಇರುತ್ತವೆ. ಇದುವರೆಗೂ ಇಲ್ಲಿ ಕಾಡಾನೆ, ಹುಲಿಗಳು ಸಾವನ್ನಪ್ಪಿದ್ದು ಕಂಡುಬಂದಿದ್ದವು. ಚಿರತೆಗಳೂ ಸಾವನ್ನಪ್ಪಿದ ಉದಾಹರಣೆಗಳು ದೊರೆತಿವೆ. ಇದೀಗ ಅಪರೂಪದ ಕರಿಚಿರತೆಯೊಂದು ಗುಂಡ್ಲುಪೇಟೆ ಸಮೀಪ ಸಾವನ್ನಪ್ಪಿದೆ.
ಈ ಹೆಣ್ಣು ಕರಿ ಚಿರತೆ ಸುಮಾರು ಮೂರು ವರ್ಷ ಪ್ರಾಯದ್ದಿರಬಹುದು ಎಂದು ಅಂದಾಜಿಸಲಾಗಿದೆ. ಕರಿ ಚಿರತೆಯ ಮೃತದೇಹ ಇಲ್ಲಿಗೆ ಸಮೀಪದ ತಮಿಳುನಾಡಿನ ಊಟಿ ವ್ಯಾಪ್ತಿಯ ಕೋತಗಿರಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಬಹುಶಃ ಈ ಚಿರತೆ ಮತ್ತೊಂದು ಪ್ರಾಣಿಯೊಂದಿಗೆ ಕಾದಾಡಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಎರಡು ಚಿರತೆಗಳು ಕಾದಾಡಿದ್ದರಿಂದ ಒಂದು ಕರಿ ಚಿರತೆ ಸಾವನ್ನಪ್ಪಿರಬಹುದು ಎನ್ನಲಾಗಿದೆ.












Click it and Unblock the Notifications