ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರ ಕಾಡಲ್ಲಿ ಕಾನೂನು ಉಲ್ಲಂಘನೆ ಆರೋಪ; ರಾಹುಲ್ ಗಾಂಧಿ, ಸಿದ್ದು ವಿರುದ್ಧ ಬಿಜೆಪಿ ದೂರು

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಅಕ್ಟೋಬರ್ 1: ರಾಹುಲ್‌ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಗುಂಡ್ಲುಪೇಟೆ ಮೂಲಕ ರಾಜ್ಯಕ್ಕೆ ಆಗಮಿಸಿದೆ. ಆದರೆ ‌ರಾಹುಲ್ ಗಾಂಧಿ, ಸಿದ್ದರಾಮಯ್ಯ ವಿರುದ್ದ ಬಂಡೀಪುರ ಕಾಡಲ್ಲಿ ಕಾನೂನು ಉಲ್ಲಂಘಿಸಿದ್ದಾರೆಂದು ಗುಂಡ್ಲುಪೇಟೆ ಬಿಜೆಪಿ ಮಂಡಲ ಆರೋಪಿಸಿದೆ.

ಶುಕ್ರವಾರ ಭಾರತ್ ಜೋಡೋ ಯಾತ್ರೆ ರಾಜ್ಯ ಪ್ರವೇಶಿಸುವಾಗ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹುಣಸೆಮರದ ರಸ್ತೆಯ ಬಳಿ ರಾಹುಲ್ ಗಾಂಧಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಜೆ. ಜಾರ್ಜ್, ಎಚ್ ಸಿ ಮಹದೇವಪ್ಪ ಅರಣ್ಯ ನಿಯಮವನ್ನು ಗಾಳಿಗೆ ತೂರಿ ವಾಹನಗಳನ್ನು ನಿಲ್ಲಿಸಿ ಅವರನ್ನು ಸ್ವಾಗತಿಸಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ.

Bharat Jodo Yatra in Karnataka : ಭಾರತ್‌ ಜೋಡೋ ಯಾತ್ರೆ ಉತ್ತಮ ಸ್ಪಂದನೆ; ಯಾವ ಶಕ್ತಿಯಿಂದಲೂ ನಿಲ್ಲಿಸಲಾಗಲ್ಲ: ರಾಹುಲ್Bharat Jodo Yatra in Karnataka : ಭಾರತ್‌ ಜೋಡೋ ಯಾತ್ರೆ ಉತ್ತಮ ಸ್ಪಂದನೆ; ಯಾವ ಶಕ್ತಿಯಿಂದಲೂ ನಿಲ್ಲಿಸಲಾಗಲ್ಲ: ರಾಹುಲ್

ತಮಿಳುನಾಡಿನಿಂದ ಆಗಮಿಸಿದ ರಾಹುಲ್‌ ಗಾಂಧಿಯನ್ನು ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಉದ್ಯಾನವನದ ಒಳಗಡೆ ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿ ಅರಣ್ಯ ನಡುವೆ ವಾಹನಗಳನ್ನು‌ ಪಾರ್ಕ್ ಮಾಡಿದ್ದಾರೆ ಇದು ಕಾಯ್ದೆಯಡಿ ಅಪರಾಧವಾಗಿದೆ. ಸಾಮಾನ್ಯ ಪ್ರವಾಸಿಗರು ಕಾಡಿನ ರಸ್ತೆಯಲ್ಲಿ ವಾಹನಗಳನ್ನು ಪಾರ್ಕ್ ಮಾಡಿದರೆ ದಂಡ ವಿಧಿಸಲಾಗುತ್ತದೆ ಕೈ ನಾಯಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಅಧಿಕಾರಿಗೆ ಮನವಿ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದ್ದಾರೆ.

BJP leaders lodged a Complaint against Rahul Gandhi for break Forest act During Bharat Jodo enter Karnataka

ಶುಕ್ರವಾರ ರಾಜ್ಯದಲ್ಲಿ ಭಾರತ್‌ ಜೋಡೋ ಯಾತ್ರೆ ಆರಂಭವಾಗಿದ್ದು, 7 ಜಿಲ್ಲೆಗಳಲ್ಲಿ 511 ಕಿಲೋ ಮೀಟರ್ ಸಾಗಲಿದೆ. ಗುಂಡ್ಲುಪೇಟೆ, ನಂಜನಗೂಡು, ಮೈಸೂರು, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಗೆ ಸಂಚಾರ ಮಾಡಲಿದೆ. ನಂತರ ಮೇಲುಕೋಟೆಯಿಂದ ರಂಗನಾಥಪುರದ ಮೂಲಕ ಚಿತ್ರದುರ್ಗ ಜಿಲ್ಲೆಯ ಪ್ರವೇಶ ಮಾಡಲಿದೆ.

ರಂಗನಾಥಪುರದಿಂದ ತುಮಕೂರಿನ ತುರುವೇಕೆರೆ, ಅಲ್ಲಿಂದ ಚಿಕ್ಕನಾಯಕನಹಳ್ಳಿ ಹುಳಿಯಾರ್ ಮೂಲಕ ಚಿತ್ರದುರ್ಗ ಹಿರಿಯೂರಿಗೆ ಪಾದಯಾತ್ರೆ ತೆರಳಲಿದೆ. ಹಿರಿಯೂರಿನಿಂದ ಚಳ್ಳಕೇರೆಗೆ, ಚಳ್ಳಕೆರೆಯಿಂದ ರಾಯಪುರಕ್ಕೆ ಯಾತ್ರೆ ತೆರಳಲಿದ್ದು, ಅಲ್ಲಿಂದ ಆಂಧ್ರಪ್ರದೇಶಕ್ಕೆ ಪ್ರವೇಶಿಸಲಿದೆ.

English summary
BJP Local leader lodged a Complaint against Rahul Gandhi and Leader of the Opposition of the Karnataka Legislative Assembly for break the Forest act during Bharat Jodo yatra enter state in Bandipur,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X