ಬಂಡೀಪುರ: ಹುಲಿಯನ್ನೇ ಗುಮ್ಮಿದ ಕಾಡೆಮ್ಮೆ-ವಿಡಿಯೋ ಭಾರೀ ವೈರಲ್
ಚಾಮರಾಜನಗರ, ಸೆಪ್ಟೆಂಬರ್, 12: ಚಾಮರಾಜನಗರ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಮಾಡುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ಹುಲಿಯೊಂದು ಎರಡು ಹಸುಗಳ ರಕ್ತ ಹೀರಿರುವ ಘಟನೆ ಜಿಲ್ಲೆಯ ವಡೆಯನಪುರ ಗ್ರಾಮದಲ್ಲಿ ನಡೆದಿತ್ತು. ಇನ್ನು ಇದೀಗ ಬೇಟೆಯಾಡಲು ಬಂದ ಹುಲಿಯನ್ನೇ ಕಾಡೆಮ್ಮೆಯೊಂದು ಹಿಮ್ಮೆಟ್ಟಿಸಿರುವುದು ಬಂಡೀಪುರ ಸಫಾರಿಯಲ್ಲಿ ನಡೆದಿದೆ.
ಸುಮ್ಮೆನೆ ಯಾವುದೇ ಪ್ರಾಣಿಗರ ತಂಟೆಗೆ ಹೋಗದೇ ಮೇಯುತ್ತಿದ್ದ ಕಾಡೆಮ್ಮೆ ಮೇಲೆ ದಾಳಿ ಹುಲಿ ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ಹುಲಿಗೆ ಕಾಲಿನಿಂದ ಒದ್ದು ಕಾಡೆಮ್ಮೆ ಎದುರಿಸಿ ನಿಂತಿದೆ. ಇನ್ನು ಕಾಡೆಮ್ಮೆಯ ರೌದ್ರಾವತಾರ ಕಂಡ ಹುಲಿ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಸ್ಥಳದಿಂದ ಕಾಲ್ಕಿತ್ತಿದೆ.

ಇನ್ನು, ಈ ರೋಮಾಂಚಕ ಬೇಟೆ ದೃಶ್ಯವನ್ನು ಸಫಾರಿಗೆ ತೆರಳಿದ್ದ ಪ್ರವಾಸಿಗರು ಸೆರೆ ಹಿಡಿದಿದ್ದಾರೆ. ಮಂಗಳವಾರ (ಸೆಪ್ಟೆಂಬರ್ 11) ಸಂಜೆ ಸಫಾರಿಯಲ್ಲಿ ಈ ಬೇಟೆ ಕಾಳಗ ನಡೆದಿದೆ ಎಂದು ತಿಳಿದುಬಂದಿದೆ. ಕಾಡೆಮ್ಮೆ ಬಲಿಷ್ಠ ಪ್ರಾಣಿಯಾದರೂ ಸಹ ಹುಲಿಯ ಪ್ರಮುಖ ಬೇಟೆಗಳಲ್ಲಿ ಒಂದಾಗಿದೆ. ಆದರೆ, ಹುಲಿಯನ್ನು ಎದುರಿಸಿ ಹಿಮ್ಮೆಟ್ಟಿಸಿದ್ದು ಮಾತ್ರ ರೋಮಾಂಚಕಾರಿ ಆಗಿದೆ.
2 ಹಸುಗಳ ರಕ್ತ ಹೀರಿದ ವ್ಯಾಘ್ರ: ಹಾಡಹಗಲೇ ಹುಲಿ ದಾಳಿ ಮಾಡಿ ಎರಡು ಹಸುಗಳನ್ನು ಬಲಿ ಪಡೆದಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ವಡೆಯನಪುರ ಗ್ರಾಮದಲ್ಲಿ ನಡೆದಿದೆ. ಹಾಗಾದರೆ ಈ ಘಟನೆ ನಡೆದಿದ್ದು ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
3 ಹಸುಗಳ ಮೇಲೆ ದಾಳಿ: ವಡೆಯನಪುರ ಗ್ರಾಮದ ರವೀಶ್ ಎಂಬವರಿಗೆ ಸೇರಿದ ಹಸುಗಳು ಇವಾಗಿವೆ. ಮೇಯಲು ಬಿಟ್ಟಿದ್ದ ವೇಳೆ ರೈತನ ಎದುರೇ ಹಾಡಹಗಲು ಹುಲಿ 3 ಹಸುಗಳ ಮೇಲೆ ದಾಳಿ ಮಾಡಿದ್ದು ಎರಡು ಅಸುನೀಗಿದ್ದು, ಒಂದು ಹಸುವಿನ ಸ್ಥಿತಿ ಚಿಂತಾಜನಕವಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ವಡೆಯನಪುರದಲ್ಲಿ ಚಿರತೆಯೊಂದು ಬೋನಿಗೆ ಸೆರೆಯಾಗಿತ್ತು. ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟಿದ್ದ ರೈತರು ಈಗ ಹುಲಿ ದಾಳಿ ಕಂಡು ಬೆಚ್ಚಿಬಿದ್ದಿದ್ದಾರೆ. ಗ್ರಾಮದ ಸಮೀಪವೇ ಹುಲಿ ದಾಳಿ ನಡೆದಿರುವುದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಕೊಟ್ಟಿದ್ದಾರೆ. ಇನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಗುಂಡ್ಲುಪೇಟೆ ಬಫರ್ ವಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.












Click it and Unblock the Notifications