ಬಂಡೀಪುರದ ಕೆರೆಯಲ್ಲಿ ಕಾಡಾನೆಗಳ ಚೆಂದದ ಗುದ್ದಾಟ! ಸಫಾರಿ ಗ್ಯಾಂಗ್ ಫುಲ್ ಖುಷ್

ಚಾಮರಾಜನಗರ, ಅಕ್ಟೋಬರ್ 29: ಕಾಡಂಚಿನ ಗ್ರಾಮದಲ್ಲಿ ಕಾಡಾನೆ ಹಾವಳಿ, ಸಫಾರಿ ವೇಳೆ ಅಲ್ಲೊಂದು ಇಲ್ಲೊಂದು ಆನೆಗಳು ರಸ್ತೆಗೆ ಬರುವುದು ನೋಡಿರುತ್ತೀರಾ. ಆದರೆ ಈ ಬಾರಿ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ಹೋದವರಿಗೆ ಆನೆಗಳ ಕಾಳಗ ದರ್ಶನವಾಗಿದೆ. ಅದು ನೀರಿನಲ್ಲಿ ಕಾಡನೆಗಳ ಗುದ್ದಾಟ ಕಂಡು ಬಂದಿರುವುದು ಅಪರೂಪ ಎನ್ನಲಾಗುತ್ತದೆ.

ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಎಂದಿನಂತೆ ಪ್ರವಾಸಿಗರು ಆಗಮಿಸಿದ್ದರು. ಸಫಾರಿ ವಾಹನದಲ್ಲಿ ತೆರಳಿದ್ದರು. ಈ ವೇಳೆ ಅರಣ್ಯದೊಳಗಿದ್ದ ಕೆರೆಯಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿದೆ. ಅವುಗಳು ಮೈ ಉಜ್ಜಿಕೊಂಡಂತೆ ಒಂದಕ್ಕೊಂದು ಗುದ್ದಾಡಿಕೊಂಡಿದ್ದು ನೋಡಿ ಸಫಾರಿಗೆ ತೆರಳಿದ್ದವರು ಫುಲ್ ಖುಷ್ ಆಗಿದ್ದಾರೆ.

Bandipur Tourists Safari They Have saw Rare Elephant Fight in Water then Enjoyed

ಹಸಿರ ಕಾನನ ಮಧ್ಯೆ ನೀರಲ್ಲಿ ಆನೆಗಳ ಕಾದಾಟ

ನಿರಂತರ ಮಳೆಗೆ ಬಂಡೀಪುರ ಅರಣ್ಯದಲ್ಲಿ ಕೆರೆಗಳು ತುಂಬಿಕೊಂಡಿವೆ. ಹಚ್ಚ ಹಸಿರು ನಳ ನಳಿಸುತ್ತಿದೆ. ನೀರಿಗಿಳಿದ ಎರಡು ಮದಗಜಗಳು ಗುದ್ದಾಡಿಕೊಂಡಿವೆ. ಬಂಡೀಪುರದ ಸಫಾರಿಗೆ ತೆರಳಿದವರು ತುಂಬಾ ಹತ್ತಿರದಲ್ಲಿಯ ರೋಮಾಂಚಕ ಫೈಟ್ ನೋಡಿ ಫಿದಾ ಆಗಿದ್ದಾರೆ. ಹೀಗೆ ಆನೆಗಳು ನೀರಿಗಿಳಿದಾಗ ಕಾಣಸಿಗುವುದು ಅಪರೂಪ ಎನ್ನಲಾಗಿದೆ.

ಬಂಡೀಪುರದ ಸಫಾರಿಯಲ್ಲಿ ಸರ್ವೇ ಸಾಮಾನ್ಯವಾಗಿ ಆನೆಗಳ ಹಿಂಡು ಪ್ರವಾಸಿಗರಿಗೆ ದರ್ಶನ ಕೊಡುತ್ತವೆ. ಆದರೆ, ಆನೆಗಳ ಕಾದಾಟ ನೋಡಲು ಸಿಗುವುದು ಬಹಳ ಅಪರೂಪ.‌ ಅಂತಹದರಲ್ಲಿ ಕೆರೆ ನೀರಿನಲ್ಲಿ ಗುದ್ದಾಡಿಕೊಂಡ ಆನೆಗಳನ್ನು ಕಂಡ ಸಫಾರಿಗರು ಸಂತಸಗೊಂಡಿದ್ದು, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ವಿಡಿಯೋ ಮಾಡಿಕೊಂಡಿದ್ದಾರೆ.

ಕೆಲವರು ಸಫಾರಿಯ ವೇಳೆ ತಮಗಾದ ಸಂತಸದ ಅನುಭವವನ್ನು, ಕಾಡಾಣೆಗಳ ಗಜಗಳ ಕಾದಾಟ ಫೋಟೋ, ವಿಡಿಯೋಗಳನ್ನು ಸಾಮಾಜಿಕ‌ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Bandipur Tourists Safari They Have saw Rare Elephant Fight in Water then Enjoyed

ಹೊಗೆನಕಲ್: ಕಾವೇರಿ ನದಿಯಲ್ಲಿ ತೆಪ್ಪ ಓಡಿಸಲು ತಮಿಳುನಾಡು ಖ್ಯಾತೆ

ಹೊಗೆನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರನ್ನು ಸೋಮವಾರ ಕರೆದುಕೊಂಡು ಹೋಗಿದ್ದಾಗ ತಮಿಳುನಾಡು ಪೊಲೀಸರು ತೆಪ್ಪ ಒಡಿಸುವವರಿಂದ ಮೊಬೈಲ್ ಹಾಗೂ ಹುಟ್ಟು ಕಿತ್ತುಕೊಂಡು ತೆಪ್ಪ ಓಡಿಸಲು ಖ್ಯಾತೆ ತೆಗೆದಿದ್ದರು. ಈ ಹಿನ್ನೆಲೆ ತೆಪ್ಪ ಒಡಿಸುವವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಸೋಮವಾರ ಮಧ್ಯಾಹದಿಂದಲೇ ಕರ್ನಾಟಕದ ತೆಪ್ಪ‌ ಓಡಿಸುವವರು ತೆಪ್ಪ ಸಂಚಾರ ಸ್ಥಗಿತಗೊಳಿಸಿ ಆಕ್ರೋಶ ಹೊರಹಾಕಿದ್ದರು.

ಇದರ ಬೆನ್ನಲ್ಲೆ ತಮಿಳುನಾಡು ಕರ್ನಾಟಕ ಉಭಯ ರಾಜ್ಯಗಳ ಅಧಿಕಾರಿಗಳ ಸಂಧಾನದಿಂದ ಕರ್ನಾಟಕ ಭಾಗದಲ್ಲಿ ಮತ್ತೆ ತೆಪ್ಪ ನಡೆಸಲು ರಾಜಿ ಸಂಧಾನ ಮಾತುಕತೆ ಯಶಸ್ವಿಯಾದ ಹಿನ್ನೆಲೆ ವಿವಾದಕ್ಕೆ ತೆರೆ ಬಿದ್ದಿದೆ.

ಕಾವೇರಿ ನದಿ ನೀರು, ಮೇಕೆದಾಟು, ಎರಡನೇ ವಿಮಾನ ನಿಲ್ದಾಣ ಆಯ್ತು ಇದೀಗ ತಮಿಳುನಾಡು ಗಡಿಯಲ್ಲಿ ಕಾವೇರಿ ನದಿ ನೀರಿನಲ್ಲಿ ತೆಪ್ಪದಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗಲು, ಬರುವುದಕ್ಕೆ ತಮಿಳುನಾಡು ತಕರಾರು ತೆಗೆದಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಎಲ್ಲ ಗೊಂದಲ, ವಿವಾದವು ಸುಖಾಂತ್ಯಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+