ಬಂಡೀಪುರಕ್ಕೆ ಬೆಂಕಿ ಇಡಲು ಕಾರಣವೇನು? ಸತ್ಯ ಬಾಯ್ಬಿಟ್ಟ ಆರೋಪಿಗಳು

Recommended Video

      ಬಂಡೀಪುರಕ್ಕೆ ಬೆಂಕಿ ಇಡಲು ಕಾರಣವೇನು ಗೊತ್ತಾ..? | Oneindia Kannada

      ಗುಂಡ್ಲುಪೇಟೆ, ಮಾರ್ಚ್ 4: ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಬೆಂಕಿ ಇಡಲು ಇದ್ದ ಅಸಲಿ ಕಾರಣವನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ.

      ಹುಲಿಗಳ ಕಾಟ ಹೆಚ್ಚಾಗಿದ್ದ ಕಾರಣ ಅವುಗಳು ನಾಡಿನತ್ತ ಬರುವುದು ತಪ್ಪಿಸುವ ಉದ್ದೇಶದಿಂದ ಬಂಡೀಪುರ ಅರಣ್ಯಕ್ಕೆ ಬೆಂಕಿ ಇಟ್ಟಿದ್ದೆವು ಎಂದು ಬಂಧಿತ ಆರೋಪಿಗಳು ಹೇಳಿದ್ದಾರೆ.

      ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಬೆಂಕಿ ತಗುಲಿ 15 ಸಾವಿರ ಎಕತೆಗೂ ಹೆಚ್ಚು ಅರಣ್ಯ ನಾಶವಾಗಿತ್ತು. ಆದರೆ ಬೆಂಕಿ ಹೇಗೆ ತಗುಲಿತು ಎಂಬುದೇ ಅರಣ್ಯ ಅಧಿಕಾರಿಗಳಲ್ಲಿ ಮೂಡಿದ್ದ ಪ್ರಶ್ನೆಯಾಗಿತ್ತು. ಇದೀಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

      Bandipur forest fire culprits reveal reason behind

      ಇದಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿಯ ಹನುಮಯ್ಯ ಹಾಗೂ ಗೋಪಯ್ಯ ಹುಲಿಗಳು ನಾಡಿನತ್ತ ಬರುವುದನ್ನು ತಡೆಯುವ ಉದ್ದೇಶದಿಂದ ಬೆಂಕಿ ಹಚ್ಚಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

      ಮತ್ತೋರ್ವ ಆರೋಪಿ ಕಳ್ಳೀಪುರ ಅರುಣ್‌ ಕುಮಾರ್‌ ತನ್ನ ಮೈಮೇಲೆ ಮಹದೇಶ್ವರ ಬರುತ್ತಾನೆ ಎಂದು ಅಭಿನಯ ಮಾಡಿದ್ದು, ಬೆಂಕಿ ಹಚ್ಚಿರುವ ಬಗ್ಗೆ ಬಾಯಿ ಬಿಟ್ಟಿಲ್ಲ ಎನ್ನಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+