ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರವಾಸವೀಗ ಪ್ರಯಾಸ!
ಚಾಮರಾಜನಗರ, ನವೆಂಬರ್ 20: ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ನಾಸ್ತಿಕ ಆಸ್ತಿಕರೆನ್ನದೆ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುವ ತಾಣವಾಗಿದ್ದು, ಇಲ್ಲಿಗೆ ದೇಶ ವಿದೇಶಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಅದರಲ್ಲೂ ವೀಕೆಂಡ್ ಗಳಲ್ಲಂತೂ ತಾಣ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ.
ಗುಂಡ್ಲುಪೇಟೆಯಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿರುವ ಕಾರಣದಿಂದ ಎಲ್ಲರೂ ಸಾರಿಗೆ ಬಸ್‍ನಲ್ಲೇ ತೆರಳುವುದು ಅನಿವಾರ್ಯವಾಗಿದೆ. ಹೀಗಾಗಿ ಬಸ್ಸಿಗೆ ಕಾಯುವುದೇ ಪ್ರವಾಸಿಗರಿಗೆ ತಲೆನೋವಾಗಿ ಪರಿಣಮಿಸಿದೆ. ಪ್ರವಾಸಿಗರಿಗೆ ತಕ್ಕಂತೆ ಇಲ್ಲಿ ಬಸ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದೆ ಇರುವುದರಿಂದ ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾದು ತೆರಳಬೇಕಿದೆ.

ಪ್ರತಿ ಶನಿವಾರ ಭಾನುವಾರ ಹಾಗೂ ರಜೆಯ ದಿನಗಳಲ್ಲಿ ಬಂಡೀಪುರ ಊಟಿ ಮುಂತಾದ ಕಡೆಗೆ ಪ್ರವಾಸಕ್ಕೆ ತೆರಳಿದ್ದ ಪ್ರಯಾಣಿಕರು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ದರ್ಶನ ಪಡೆದು ಹೋಗೋಣವೆಂದು ಬರುತ್ತಾರೆ. ಹೀಗೆ ಬರುವವರಿಗೆ ಇಲ್ಲಿಗೆ ತೆರಳಲು ಪಟ್ಟಣದ ಸಾರಿಗೆ ಘಟಕದಿಂದ 5 ಮಿನಿ ಬಸ್ಸುಗಳ ಸೇವೆ ಒದಗಿಸಲಾಗಿತ್ತು. ಆಗ ಯಾವುದೇ ತೊಂದರೆಗಳಿಲ್ಲದೆ ಪ್ರವಾಸಿಗರು ನಿಗದಿತ ಸಮಯಕ್ಕೆ ತಲುಪಬಹುದಾಗಿತ್ತು.
ಆದರೆ ಕಳೆದ 20 ದಿನಗಳಲ್ಲಿ ಎರಡು ಬಸ್ಸುಗಳ ಇಂಜಿನ್ ಸ್ಥಗಿತಗೊಂಡ ಪರಿಣಾಮ ಕೇವಲ ಮೂರು ಬಸ್ಸುಗಳು ಮಾತ್ರ ಸಂಚರಿಸುತ್ತಿವೆ. ಇದರಿಂದ ಬೆಟ್ಟಕ್ಕೆ ತೆರಳುವ ಪ್ರವಾಸಿಗರು ಬಹಳ ಹೊತ್ತು ಸರದಿ ಸಾಲಿನಲ್ಲಿ ಕಾದು ಬಳಿಕ ಬಸ್ಸನ್ನೇರಿಕೊಂಡು ಹೋಗಬೇಕಿದೆ.

ನೆತ್ತಿ ಸುಡುವ ಬಿಸಿಲಿನಲ್ಲಿ ನಿಂತುಕೊಂಡು ಬಸ್ಸಿಗೆ ಕಾಯುವುದು ಕಷ್ಟದ ಕೆಲಸವಾಗಿದ್ದು, 40 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯದ ಬಸ್ಸುಗಳಲ್ಲಿ 60ರಿಂದ70 ಜನರನ್ನು ಕರೆದೊಯ್ಯಲಾಗುತ್ತಿದೆ. ಇದು ಅಪಾಯಕಾರಿ. ಏಕೆಂದರೆ ಈ ರಸ್ತೆಯಲ್ಲಿ ಹಲವುಬಾರಿ ಅವಘಡಗಳು ನಡೆದು ಸ್ವಲ್ಪದರಲ್ಲೇ ಪ್ರಯಾಣಿಕರು ಪಾರಾಗಿದ್ದಾರೆ. ಈಗಿರುವ ಬಸ್ಸುಗಳಲ್ಲೇ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ಬದಲು ಹೆಚ್ಚುವರಿ ಬಸ್ ಗಳನ್ನು ಸಂಬಂಧಿಸಿದ ಅಧಿಕಾರಿಗಳು ಒದಗಿಸಬೇಕಾಗಿದೆ. ಈಗಿರುವ ಬಸ್‍ಗಳು ಗೋಪಾಲಸ್ವಾಮಿ ಬೆಟ್ಟದ ಕಡಿದಾದ ಏರು ರಸ್ತೆಯಲ್ಲಿ ಸಂಚರಿಸಲು ಪ್ರಯಾಸಪಡುತ್ತಿದ್ದು ಕೆಲವೊಮ್ಮೆ ಕೆಟ್ಟು ನಿಲ್ಲುತ್ತಿವೆ.
ಮೂರು ತಿಂಗಳ ಹಿಂದೆ ಮಂಡ್ಯ ಸಾರಿಗೆ ಘಟಕದ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಐದು ಮಿನಿಬಸ್ಸುಗಳನ್ನು ಇಲ್ಲಿಗೆ ನಿಯೋಜಿಸಿ ಸೇವೆಯನ್ನು ಒದಗಿಸುತ್ತಿದ್ದು ಎರಡು ಬಸ್ಸುಗಳು ಕೆಟ್ಟುನಿಂತಿದ್ದು ಇರುವ ಮೂರು ಬಸ್ಸುಗಳನ್ನು 24 ಸಲ ಓಡಿಸಲಾಗುತ್ತಿದೆ ಎನ್ನಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರಯಾಣಿಕರು ಮತ್ತು ಚಾಲಕ ನಿರ್ವಾಹಕರಿಗೂ ಒತ್ತಡವಾಗುತ್ತಿದೆ. ಇದನ್ನು ತಪ್ಪಿಸಬೇಕಾದರೆ ಕೆಟ್ಟು ನಿಂತ ಬಸ್ಸನ್ನು ಶೀಘ್ರವೇ ಸರಿಪಡಿಸಿ ಸಂಚರಿಸಲು ಅನುಕೂಲ ಮಾಡಿಕೊಡಬೇಕಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications