ಚಾಮರಾಜನಗರ: ಮಗಳ ಮದುವೆ ಕಾರ್ಯದಲ್ಲಿ ಬ್ಯುಸಿಯಾದ ಶ್ರೀರಾಮುಲು
ಚಾಮರಾಜನಗರ, ನವೆಂಬರ್, 21: ಮಾಜಿ ಸಚಿವ ಬಿ.ಶ್ರೀರಾಮುಲು ತಮ್ಮ ಎರಡನೇ ಪುತ್ರಿಯ ಮದುವೆಯ ಕಾರ್ಯಕ್ಕೆ ಓಡಾಟ ನಡೆಸುತ್ತಿದ್ದು, ಚಾಮರಾಜನಗರದಲ್ಲಿ ಮಂಗಳವಾರ (ನವೆಂಬರ್ 21) ಲಗ್ನ ಪತ್ರಿಕೆಗಳನ್ನು ಹಂಚಿದರು.
ಈ ಹಿಂದೆ ಆರೋಗ್ಯ ಸಚಿವರಾಗಿದ್ದ ವೇಳೆ ಮೊದಲ ಪುತ್ರಿಯ ವಿವಾಹ ನಡೆಸಿದ್ದ ರಾಮುಲು ಈಗ ಎರಡನೇ ಮಗಳ ಮದುವೆ ಮಾಡುತ್ತಿದ್ದು, ಚಾಮರಾಜನಗರದ ಬಿಜೆಪಿ ಕಚೇರಿಗೆ ಬಂದು ಎಲ್ಲಾ ಮುಖಂಡರು, ಅಭಿಮಾನಿಗಳು, ಸಮುದಾಯದವರಿಗೆ ಆಮಂತ್ರಣ ಪತ್ರಿಕೆಗಳನ್ನು ಕೊಟ್ಟು ವಿವಾಹಕ್ಕೆ ಆಹ್ವಾನಿಸಿದ್ದಾರೆ.

ಇನ್ನು, ಮಾಜಿ ಸಚಿವ ರಾಮುಲು ಅವರನ್ನು ಬರಮಾಡಿಕೊಂಡ ಬಿಜೆಪಿ ಮುಖಂಡರು ಅವರಿಗೆ ಸನ್ಮಾನಿಸಿ, ಲಗ್ನ ಪತ್ರಿಕೆಗಳನ್ನು ಪಡೆದಿದ್ದಾರೆ. ಡಿಸೆಂಬರ್ 7ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ನಡೆಯಲಿದೆ.
ಡಿ.ಕೆ.ಶಿವಕುಮಾರ್ ವಿರುದ್ಧ HDK ವಾಗ್ದಾಳಿ
ಟೆಂಟಲ್ಲಿ ಬ್ಲೂ ಫಿಲಂ ತೋರಿಸಿಕೊಂಡು ಜೀವನ ಮಾಡಿಕೊಂಡು ಬಂದವರು ಅವರು, ಆ ಮನಸ್ಥಿತಿಯಲ್ಲಿ ಅವನಿಗೆ ಇನ್ನೇನು ಬರುತ್ತದೆ. ಆತರ ಪೋಸ್ಟರ್ ಪ್ರಿಪೇರ್ ಮಾಡಿಸೋದು ಬಿಟ್ಟು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಪರೋಕ್ಷವಾಗಿ ಏಕವಚನದಲ್ಲಿ ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ಇತ್ತೀಚೆಗಷ್ಟೇ ವಾಗ್ದಾಳಿ ನಡೆಸಿದ್ದರು.
ಇನ್ನು ನಾನು ಆ ಜೀವನ ಮಾಡಿಕೊಂಡು ಬಂದಿಲ್ಲ. ಅದನ್ನೇ ಮುಂದುವರೆಸುತ್ತಿದ್ದಾರೆ. ಅವರು ಬಂದಿರುವುದೇ ಆ ಸಂಸ್ಕೃತಿಯಲ್ಲಿ. ಅಂತಹವರನ್ನ ಈ ರಾಜ್ಯದ ಜನ ಆಯ್ಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ಸಿಗು ಇಂದು ಅಂತವರಿಗೆ ಅಧಿಕಾರ ನೀಡಿದ್ದಾರೆ. ಅವರ ಜೀವನ, ಸಂಸ್ಕೃತಿ, ಬದುಕೇ ಅಷ್ಟು ಏನು ಮಾಡೋದು ಎಂದು ಕಿಡಿಕಾರಿದ್ದರು.
ಬಿಜೆಪಿಯವರು ದೇಶವನ್ನು ನಾಶ ಮಾಡಿದ್ದಾರೆ
ಬಿಜೆಪಿಯವರು ಕಳೆದ ಹತ್ತು ವರ್ಷಗಳಲ್ಲಿ ದೇಶವನ್ನು ನಾಶ ಮಾಡಿದ್ದಾರೆ. ಆರ್ಥಿಕವಾಗಿ ದೇಶ ದಿವಾಳಿಯಾಗಿದ್ದು, ₹165 ಲಕ್ಷ ಕೋಟಿ ಸಾಲ ಇದೆ ಎಂದು ಸಚಿವ ಸಂತೋಷ್ ಲಾಡ್ ಹುಬ್ಬಳ್ಳಿಯಲ್ಲಿ ಟೀಕಿಸಿದ್ದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ವ್ಯಕ್ತಿಯನ್ನು ದೇವರೆಂದು ಪ್ರತಿಬಿಂಬಿಸುವುದು, ಅವರನ್ನೇ ವಿಶ್ವಗುರು ಎಂದು ಹೇಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಳ್ಳೆಯದಲ್ಲ ಎಂದರು. ಇನ್ನು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತು ನರೇಂದ್ರ ಮೋದಿ ಅವರು ಹತ್ತು ವರ್ಷ ಏನು ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಸಬೇಕು. ಇನ್ನು ಆರು ತಿಂಗಳು ರಾಜ್ಯದ ವಿಷಯ ಮಾತನಾಡಬಾರದು ಎಂದು ಹೇಳಿದ್ದರು.
ದೇಶದ ಹಿತಾಸಕ್ತಿ ಕಾಪಾಡುವ ಜೊತೆಗೆ, ಪ್ರಗತಿಯತ್ತ ಮುನ್ನಡೆಸಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಏನು ಮಾಡಿದೆ ಎಂಬುದನ್ನು ಪ್ರಶ್ನೆ ಮಾಡುವ ಸಮಯ ಬಂದಿದೆ ಎಂದು ಎಂದರು. ಇನ್ನು ಪ್ರತಿ ವರ್ಷ ಒಂದಿಲ್ಲೊಂದು ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತವೆ. ಮೋದಿ ಅವರು ಚುನಾವಣೆ ಭಾಷಣ ಮಾಡಿ, ಕಾಂಗ್ರೆಸ್‌ಗೆ ಬೈದಿದ್ದು ಬಿಟ್ಟರೆ ಹತ್ತು ವರ್ಷಗಳಲ್ಲಿ ಏನೂ ಮಾಡಿಲ್ಲ ಎಂದು ಟೀಕಿಸಿದ್ದರು.
ಸ್ಮಾರ್ಟ್ ಸಿಟಿ, ಬುಲೆಟ್ ರೈಲು, ರೈತರ ಆದಾಯ ದ್ವಿಗುಣಗೊಳಿಸುವುದು, 2 ಕೋಟಿ ಉದ್ಯೋಗ ಸೃಷ್ಟಿ, ಮೇಕ್ ಇನ್ ಇಂಡಿಯಾ ಸೇರಿದಂತೆ ಹಲವು ಯೋಜನೆಗಳ ಮೂಲಕ ಸುಳ್ಳು ಭರವಸೆ ನೀಡಿದ್ದರು. ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣದ ಸಾಕ್ಷಿಗಳಾಗಿದ್ದ 44 ಜನರನ್ನು ಕೊಲೆ ಮಾಡಲಾಗಿದೆ. ಅವುಗಳ ಬಗ್ಗೆ ಮಾತನಾಡುತ್ತಿಲ್ಲ. ನೆಹರೂ, ಇಂದಿರಾಗಾಂಧಿ, ಮನಮೋಹನ್‌ಸಿಂಗ್ ಅವರಿಗೆ ಬೈಯುವುದೇ ಕೆಲಸವಾಗಿದೆ ಎಂದು ಹೇಳಿದ್ದರು.
ವಿಜಯೇಂದ್ರ ಅವರ ಹಸ್ತಕ್ಷೇಪ, ಭ್ರಷ್ಟಾಚಾರದ ಕಾರಣಕ್ಕೆ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲಾಯಿತು ಎಂದು ಬಿಜೆಪಿಯವರೇ ಹೇಳಿದ್ದರು. ಈಗ ಅವರನ್ನೇ ಏಕೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ? ಎಂದು ಪ್ರಶ್ನಿಸಿದರು. ಯತೀಂದ್ರ ಅವರ ವಿಡಿಯೊದಲ್ಲಿ ವರ್ಗಾವಣೆ ಬಗ್ಗೆ ಪ್ರಸ್ತಾಪವಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ವಿಜಯೇಂದ್ರ ಬಗ್ಗೆ ಬಿಜೆಪಿಯವರು ಈ ಹಿಂದೆ ಏನು ಹೇಳಿದ್ದರು ಎಂಬುದು ಅವರಿಗೆ ನೆನಪಿಲ್ಲ ಎಂದಿದ್ದರು.












Click it and Unblock the Notifications