Ram Mandir Inauguration: ಚಾಮರಾಜನಗರ ಜಿಲ್ಲೆಯಲ್ಲಿ ಜೈಲು ಹಕ್ಕಿಗಳಿಗೆ ಅಯೋಧ್ಯೆ ಮಂತ್ರಾಕ್ಷತೆ, ಜಪ ಮಾಲೆ ವಿತರಣೆ
ಚಾಮರಾಜನಗರ, ಜನವರಿ, 19: ಇಡೀ ದೇಶವೇ ಕಾತರದಿಂದ ಕಾಯುತ್ತಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಪುಣ್ಯ ಕಾರ್ಯದಲ್ಲಿ ಜೈಲು ಹಕ್ಕಿಗಳಿಗೂ ಒಳಿತಾಗಲಿಂದು ಅಯೋಧ್ಯೆ ಮಂತ್ರಾಕ್ಷತೆ, ರಾಮ ಚರಿತ್ರೆ ಪುಸ್ತಕ ವಿತರಿಸಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜನಾರ್ದನ ಪ್ರತಿಷ್ಠಾನವು ಜಿಲ್ಲಾ ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಆಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಕಾರಾಗೃಹ ಬಂಧಿಗಳಿಗೆ ಮಂತ್ರಾಕ್ಷತೆ, ಜಪಮಾಲೆ, ಪುಸ್ತಕ ವಿತರಿಸಲಾಯಿತು.

ಇನ್ನು, ಜನಾರ್ದನ ದೇಗುಲ ಅರ್ಚಕ ಅನಂತಪ್ರಸಾದ ಅವರು ಕಾರಾಗೃಹ ಬಂಧಿಗಳಿಗೆ ರಾಮತಾರಕ ಮಂತ್ರಗಳನ್ನು ಹೇಳಿಕೊಟ್ಟು ನಿತ್ಯವೂ ಪಠಿಸುವಂತೆ ಮನವಿ ಮಾಡಿದರು.












Click it and Unblock the Notifications