ಬಂಡೀಪುರದ ಅರಣ್ಯ ವೀಕ್ಷಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಚಾಮರಾಜನಗರ, ಮಾರ್ಚ್ 31: ಕಾಡ್ಗಿಚ್ಚಿನಿಂದ ಸುಟ್ಟು ವೃಕ್ಷ ಸಂಪತ್ತು ಕರಕಲಾಗಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ ಚಿತ್ರನಟ ದರ್ಶನ್ ಬೆಂಕಿಯಿಂದ ಭಸ್ಮವಾದ ಅರಣ್ಯ ಪ್ರದೇಶಗಳನ್ನು ವೀಕ್ಷಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ಚಿತ್ರನಟ ದರ್ಶನ್ ಮಾಜಿ ಎಂ.ಎಲ್.ಸಿ ಸಂದೇಶ್ ನಾಗರಾಜು ಅವರೊಂದಿಗೆ ಬಂಡೀಪುರಕ್ಕೆ ಆಗಮಿಸಿ ಹಿಮವದ್ ಗೋಪಾಲಸ್ವಾಮಿಬೆಟ್ಟ, ಕುಂದಕೆರೆ ಹಾಗೂ ಬಂಡೀಪುರ ವಲಯ ಬೆಂಕಿಯಿಂದ ಸುಟ್ಟುಹೋದ ಅರಣ್ಯ ಪ್ರದೇಶಗಳ ವೀಕ್ಷಣೆ ನಡೆಸಿದರು.

ಕುಳ್ಳನಬೆಟ್ಟ, ಟೈಗರ್ ರಸ್ತೆ, ಚಮ್ಮನಹಳ್ಳ ಮುಂತಾದ ಪ್ರದೇಶಗಳಲ್ಲಿ ವೀಕ್ಷಣೆ ನಡೆಸಿದ ನಂತರ ಕಾಫಿಡೇ ರೆಸಾರ್ಟಿಗೆ ತೆರಳಿದಾಗ ಮುತ್ತಿಕೊಂಡ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡರು.

ಎಲ್ಲ ಅಭಿಮಾನಿಗಳೂ ತಮ್ಮ ಫೇಸ್ ಬುಕ್ ಹಾಗೂ ಸ್ಟೇಟಸ್‌ಗಳಿಗೆ ದರ್ಶನ್ ಜತೆ ತಾವು ತೆಗೆಸಿಕೊಂಡ ಫೋಟೋಗಳನ್ನು ಹಾಕಿ ಸಂಭ್ರಮಿಸಿದರು. ದರ್ಶನ್ ಆಗಮಿಸಿದ ವೇಳೆ ಎಸಿಎಫ್ ರವಿಕುಮಾರ್, ಆರ್‌ಎಫ್‌ಒಗಳಾದ ಮಂಜುನಾಥ್, ಶ್ರೀನಿವಾಸನಾಯ್ಕ ಸೇರಿದಂತೆ ಹಲವರು ಇದ್ದರು.












Click it and Unblock the Notifications