ಪ್ರಿಯಕರನೊಂದಿಗೆ ವಿವಾಹಕ್ಕೆ ಅಡ್ಡಿ, ಯುವತಿ ಆತ್ಮಹತ್ಯೆ

ಚಾಮರಾಜನಗರ, ಆಗಸ್ಟ್ 28 : ತಾನು ಪ್ರೀತಿಸುತ್ತಿದ್ದ ಯುವಕನನ್ನು ಮದುವೆಯಾಗಲು ಪೋಷಕರು ನಿರಾಕರಿಸಿದ ಹಿನ್ನಲೆಯಲ್ಲಿ ಮನನೊಂದು ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಘಟನೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಕೋಟೆಯಲ್ಲಿ ಸೋಮವಾರ ನಡೆದಿದೆ. ಸತ್ತೇಗಾಲ ಗ್ರಾಮದ ವೈರಮುಡಿ ಮತ್ತು ಉಮಾ ದಂಪತಿಗಳ ಪುತ್ರಿ ಸೌಮ್ಯ (27) ಎಂಬಾಕೆಯೇ ಆತ್ಮಹತ್ಯೆಗೆ ಶರಣಾದ ಯುವತಿ.

A Young woman commits suicide after parents refused marry with lover in Chamarajanagar

ಈಕೆ ಬೆಂಗಳೂರಿನಲ್ಲಿ ಕಾರ್ ಶೋರೂಮ್ ನಲ್ಲಿ ಕೆಲಸ ಮಾಡಿಕೊಂಡಿದ್ದಳಲ್ಲದೆ, ತನ್ನದೇ ಗ್ರಾಮದ ಯುವಕ ಕುಮಾರ್ ಎಂಬಾತನನ್ನು ಕಳೆದ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದಳು.

ಈ ವಿಚಾರ ಸೌಮ್ಯಳ ಮನೆಯವರಿಗೆ ತಿಳಿದಿದ್ದು, ಇದಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಆಕೆ ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಈ ನಡುವೆ ಗೌರಿಹಬ್ಬಕ್ಕೆ ಬೆಂಗಳೂರಿನಿಂದ ಸೌಮ್ಯ ಮನೆಗೆ ಬಂದಿದ್ದಳು.

ಈ ವೇಳೆ ಸೌಮ್ಯಳ ಮನೆಗೆ ಕುಮಾರ್ ಪೋಷಕರು ಹೆಣ್ಣು ಕೇಳಲೆಂದು ಬಂದಿದ್ದು, ಆಗ ಸೌಮ್ಯಳ ಹೆತ್ತವರು ಅವರನ್ನು ಅವಮಾನ ಮಾಡಿದ್ದರು. ಇದರಿಂದ ಮನನೊಂದ ಯುವತಿ ಸೌಮ್ಯ ನೇಣಿಗೆ ಶರಣಾಗಿದ್ದಾಳೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪಿಎಸ್ ಐ ವನರಾಜು ಅವರು ತನಿಖೆ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+