ಚಾಮರಾಜನಗರದಲ್ಲಿ ಪರಿಚಯಸ್ಥರ ಮನೆಯಲ್ಲೇ ಬಂಗಾರ ಕಳ್ಳತನ ಮಾಡಿದ ಮಹಿಳೆ
ಚಾಮರಾಜನಗರ, ಫೆಬ್ರವರಿ, 28: ಇತ್ತೀಚಿನ ದಿನಗಳಲ್ಲಿ ಯಾರನ್ನೂ ನಂಬೋದೋ ಯಾರನ್ನೋ ಬಿಡೋದು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ ಸ್ವಂತದವರೇ ಮನೆಯವರಿಗೆ ಮೋಸ ಮಾಡಿರುವ ಉದಾಹರಣೆಗಳಿವೆ. ಇದೀಗ ಮಹಿಳೆಯೊಬ್ಬರು ತನ್ನ ಪರಿಚಯಸ್ಥರ ಮನೆಯಲ್ಲೇ ಕಳ್ಳತನ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಈ ಘಟನೆ ಬೆಳಕಿಗೆ ಬಂದಿದ್ದು ಹೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಪೊಲೀಸರು ಕಳ್ಳರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಸಹ ಕೆಲವರು ತಮ್ಮ ಚಾಳಿಯನ್ನು ಬಿಡದೇ ಕಳ್ಳತನಕ್ಕೆ ಇಳಿಯುತ್ತಿದ್ದಾರೆ. ಇದು ಇದೀಗ ಸಣ್ಣ ಸಣ್ಣ ನಗರಗಳಲ್ಲೂ ಹೆಚ್ಚಾಗಿಬಿಟ್ಟಿದೆ. ಇದಕ್ಕೆ ಸೂಕ್ತ ಉದಾಹರಣೆಯೇ ಚಾಮರಾಜನಗರದಲ್ಲಿ ನಡೆದಿರುವ ಘಟನೆ.

ಪರಿಚಯಸ್ಥ ಮಹಿಳೆಯೊಬ್ಬರು ವೃದ್ಧೆ ಮನೆಯಲ್ಲಿ ಚಿನ್ನ ಕಳ್ಳತನ ಮಾಡಿರುವ ಘಟನೆ ಚಾಮರಾಜನಗರ ಪಟ್ಟಣದ ಶಂಕರಪುರ ಬಡಾವಣೆಯಲ್ಲಿ ನಡೆದಿದೆ. ಇನ್ನು ಮಹಿಳೆಯ ಕಳ್ಳತನ ಸಿಸಿಟಿವಿಯಿಂದ ಬಹಿರಂಗವಾಗಿದೆ. ಕಾರಿನ ಹಿಂಭಾಗ ನಿಂತು ಕಳ್ಳಬೆಕ್ಕಿನ ರೀತಿಯಲ್ಲಿ ಹೊಂಚು ಹಾಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಅನುಮಾನಗೊಂಡು ಚಾಮರಾಜನಗರ ಪಟ್ಟಣ ಪೊಲೀಸರಿಗೆ ದೂರು ನೀಡಲಾಗಿತ್ತು.
ಈ ದೂರಿನ ಅನ್ವಯ ಪೊಲೀಸರು ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಿದ್ದರು. ಆ ವೇಳೆ ಅಜ್ಜಿಯ ಪರಿಚಯಸ್ಥೆ ಮಹಿಳೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಪೊಲೀಸರು ಕಳ್ಳತನ ಮಾಡಿದ ಮಹಿಳೆಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಂಗಾರ, ನಗದು ಕಳ್ಳತನ: ಸೆಕ್ಯೂರಿಟಿ ಗಾರ್ಡ್ ತನ್ನ ಮಾಲೀಕನ ಮನೆಯಲ್ಲಿ ಸುಮಾರು 15,00,00,000 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ 40,00,000 ರೂಪಾಯಿ ನಗದು ಕಳ್ಳತನ ಮಾಡಿ ಪರಾರಿ ಆಗಿರುವ ಘಟನೆ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಚಿನ್ನದ ವ್ಯಾಪಾರಿ ಸುರೇಂದ್ರ ಕುಮಾರ್ ಜೈನ್ ಅವರ ಜ್ಯುವೆಲರಿ ಶಾಪ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ನೇಪಾಳ ಮೂಲದ ನಮ್ರಾಜ್ ತನ್ನ ಮಾಲೀಕನ ಮನೆಯಲ್ಲೇ ಒಂದಲ್ಲ.. ಎರಡಲ್ಲ.. 15.15 ಕೋಟಿ ರೂಪಾಯಿ ಮೌಲ್ಯದ 18.4 ಕೆ.ಜಿ. ಚಿನ್ನಾಭರಣ ಹಾಗೂ 40 ಲಕ್ಷ ರೂಪಾಯಿ ನಗದು ಕಳ್ಳತನ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿತ್ತು.
ಇನ್ನು ಚಿನ್ನದ ವ್ಯಾಪಾರಿ ಸುರೇಂದ್ರ ಕುಮಾರ್ ಅವರು ನವೆಂಬರ್ 7ರಂದು ಊರಿನಿಂದ ವಾಪಸಾದಾಗ ಈ ಕಳ್ಳತನ ಬೆಳಕಿಗೆ ಬಂದಿದೆ. ಬಳಿಕ ಅವರು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನೇಪಾಳ ಮೂಲದ ನಮ್ರಾಜ್ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಸದ್ಯ ವಿಜಯನಗರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿತ್ತು.
ಚಿನ್ನದ ವ್ಯಾಪಾರಿ ಮನೆಯಲ್ಲಿ 18.4ಕೆಜಿ ಚಿನ್ನ ಆಗಿದೆ. ಈ ಪೈಕಿ ಸುರೇಂದ್ರ ಕುಮಾರ್ ಜೈನ್ ಕುಟುಂಬಕ್ಕೆ 2.8 ಕೆ.ಜಿ. ಚಿನ್ನ ಸೇದಿದ್ದು, ಅವರ 5 ಸಹೋದರಿಯರ ಒಟ್ಟು 2.7 ಕೆ.ಜಿ. ಚಿನ್ನ ಹಾಗೂ ವ್ಯಾಪಾರದ 12.8 ಕೆ.ಜಿ. ಚಿನ್ನ ಕಳ್ಳತನವಾಗಿತ್ತು.
ಅಲ್ಲದೆ, ಮನೆಯಲ್ಲಿದ್ದ ವ್ಯಾಪಾರದ 37.8 ಲಕ್ಷ, ವೈಯಕ್ತಿಕ 3 ಲಕ್ಷ ರೂಪಾಯಿ ಹಣವನ್ನು ಕೂಡ ಎಗರಿಸಿದ್ದಾರೆ. ಒಟ್ಟು 18 ಕೆ.ಜಿ. 437 ಗ್ರಾಂ ಚಿನ್ನ, 40.80 ಲಕ್ಷ ನಗದು ಸೇರಿ ಅಂದಾಜು ಮೌಲ್ಯ 15.15 ಕೋಟಿ ರೂಪಾಯಿ ಕಳ್ಳತನ ಆಗಿದೆ ಎಂದು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿತ್ತು.
ನೇಪಾಳ ಮೂಲದ ನಮ್ರಾಜ್ ಜ್ಯುವೆಲರಿ ಶಾಪ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ. ಆತನಿಗೆ ಮನೆಯಿಲ್ಲದ ಹಿನ್ನೆಲೆ ತಮ್ಮ ನಿವಾಸದ ಬಳಿ ಪಾರ್ಕಿಂಗ್ನಲ್ಲಿ ಸೆಕ್ಯೂರಿಟಿಗೆ ಮನೆ ನೀಡಿದ್ದೆ. ಕಳೆದ 6 ತಿಂಗಳಿನಿಂದ ಪತ್ನಿ ಜೊತೆ ಸೆಕ್ಯೂರಿಟಿ ರೂಂನಲ್ಲಿ ನಮ್ರಾಜ್ ವಾಸ ಇದ್ದ. ಈ ನಡುವೆ ಜ್ಯುವೆಲರಿ ಶಾಪ್ನ ಸೆಕ್ಯೂರಿಟಿ ಕೆಲಸದ ಜೊತೆ ತಮ್ಮ ಮನೆಯಲ್ಲೂ ಕೆಲಸ ಮಾಡುತ್ತಿದ್ದ. ಗಿಡಿಗಳಿಗೆ ನೀರು ಹಾಕುವುದು ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಎಂದು ಮಾಲೀಕ ಪೊಲೀಸರಿಗೆ ತಿಳಿಸಿದ್ದರು.
ನವೆಂಬರ್ 1ರಂದು ಸಂಜೆ 5 ಗಂಟೆಗೆ ಕುಟುಂಬ ಸಮೇತ ಗುಜರಾತ್‌ಗೆ ತೆರಳಿದ್ದ ಚಿನ್ನದ ವ್ಯಾಪಾರಿ ಸುರೇಂದ್ರ ಕುಮಾರ್ ಅವರು ನವೆಂಬರ್ 7ರಂದು ಊರಿನಿಂದ ವಾಪಸಾದಾಗ ಮನೆ ಕಳ್ಳತನವಾಗಿರುವುದು ತಿಳಿದುಬಂದಿದೆ. ಆಗ ನಮ್ರಾಜ್ಗೆ ಕರೆ ಮಾಡಿದ್ದಾರೆ. ಆದರೆ ಆತನ ನಂಬರ್ ಸ್ವಿಚ್ ಆಫ್ ಬಂದಿದೆ. ಆದ್ದರಿಂದ ಆತನೇ ಕಳ್ಳತನ ಮಾಡಿರಬಹುದು ಎಂದು ದೂರು ನೀಡಿದ್ದರು.












Click it and Unblock the Notifications