ಗುಂಡ್ಲುಪೇಟೆಗೆ ಬಂದ ಅಪರೂಪದ ಬಿಳಿ ಹಾವು: ಅಚ್ಚರಿಯಲ್ಲಿ ಜನತೆ

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಆಗಸ್ಟ್ 9: ಹಲವು ಅಪರೂಪದ ಪ್ರಭೇದದ ಜೀವಿಗಳು ಅಳಿವಿನಂಚಿಗೆ ತೆರಳುತ್ತಿದೆ. ಈ ಹೊತ್ತಿನಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತಾಲೂಕಿನ ಸೋಮಹಳ್ಳಿ ಗ್ರಾಮಪಂಚಾಯಿತಿ ಕಾರ್ಯಾಲಯದ ಅಪರೂಪದ ಹಾವೊಂದು ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.

ಹೈದರಾಬಾದಿನಲ್ಲಿ ಪತ್ತೆಯಾಯ್ತು ಹಳದಿ ಕಂಠದ ಅಪರೂಪದ ಹಾವು

A rare species white snake found in gundlupet taluk

ಸಾಮಾನ್ಯವಾಗಿ ಈ ವ್ಯಾಪ್ತಿಯಲ್ಲಿ ಕೇರೆಹಾವು, ಹಸಿರುಹಾವು, ನಾಗರಹಾವು ಹೀಗೆ ಕೆಲವು ಸಾಮಾನ್ಯ ಹಾವುಗಳನ್ನು ನೋಡಿದ್ದ ಮಂದಿಗೆ ಈ ಹಾವು ವಿಚಿತ್ರವಾಗಿ ಕಂಡು ಅಚ್ಚರಿ ಹುಟ್ಟಿಸಿತ್ತು.

A rare white snake found in Gundlupet region

ಗ್ರಾಪಂ ಕಾರ್ಯಾಲಯದ ಬಳಿ ತೆವಳಿಕೊಂಡು ಹೋಗುತ್ತಿದ್ದ ಬಿಳಿಬಣ್ಣದ ಪುಟ್ಟ ಹಾವನ್ನು ಕಂಡು ಈ ಭಾಗದ ಜನರು ಹೌಹಾರಿದ್ದಾರೆ. ಇದುವರೆಗೆ ಬಿಳಿಬಣ್ಣದ ಹಾವನ್ನೇ ನೋಡಿರದ ಜನರು ಈ ಹಾವನ್ನು ನೋಡಲು ಮುಗಿಬೀಳುತ್ತಿದ್ದರು.

A rare white snake found in Gundlupet region

ಈಗಾಗಲೇ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡುವ ಗುಂಡ್ಲುಪೇಟೆಯ ಸ್ನೇಕ್ ಶಶಿ ಎಂಬುವರನ್ನು ಕರೆಯಿಸಿ ಅದನ್ನು ಹಿಡಿಸಲಾಯಿತು. ಉರಗ ತಜ್ಞ ಶಶಿ ಅವರು ಈ ಹಾವನ್ನು ಉಲ್ಫ್ ಜಾತಿಗೆ ಸೇರಿದ್ದೆಂದು ಹೇಳಿದ್ದಾರೆ.ಸದ್ಯಕ್ಕೆ ಹಾವನ್ನು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A rare species of white snake found in Somahalli region, Gundlupet taluk, Chamarajanagar district. The snake expert of the district snake Shashi has saved the snake and shifted it to forest area.
Please Wait while comments are loading...