ಗುಂಡ್ಲುಪೇಟೆ: ಕಾಡಂಚಿನ ಗ್ರಾಮ ಮಂಗಲದಲ್ಲಿ ಅಪರೂಪದ ಪ್ರಾಣಿ ಓಡಾಟ-ವಿಡಿಯೋ ವೈರಲ್
ಚಾಮರಾಜನಗರ, ಮೇ, 13: ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ಮಹದೇಶ್ವರ ಕೆರೆ ಹಾಗೂ ಸುತ್ತಮುತ್ತಲಿನ ಜಮೀನಿನಲ್ಲಿ ಕತ್ತೆ ಕಿರುಬ ಓಡಾಟದ ದೃಶ್ಯ ಸೆರೆಯಾಗಿದ್ದು, ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೈನಾ (ಕತ್ತೆಕಿರುಬ) ಅಪರೂಪವಾಗಿ ಕಾಣಸಿಗುತ್ತದೆ. ಇದೀಗ ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ಮಹದೇಶ್ವರ ಕೆರೆ ಹಾಗೂ ಸುತ್ತಮುತ್ತಲಿನ ಜಮೀನಿನಲ್ಲಿ ಈ ಪ್ರಾಣಿ ಓಡಾಡಿದ್ದು, ಈ ಅಪರೂಪದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಇತ್ತೀಚಿನ ದಿನಗಳಲ್ಲಿ ಬಂಡೀಪುರ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳು ರಸ್ತೆಬದಿಯಲ್ಲಿ ಕಾಣಸಿಗುತ್ತಲೇ ಇವೆ. ಹಾಗೆಯೇ ಇದೀಗ ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ಸುತ್ತಮುತ್ತ ಅಪರೂಪದ ಪ್ರಾಣಿಯೊಂದು ಕಾಣಿಸಿಕೊಂಡಿರುವ ದೃಶ್ಯ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
ಪ್ರವಾಸಿಗರಿಗೆ ಹುಲಿರಾಯನ ದರ್ಶನ: ಬಿಸಿಲಿನ ಧಗೆಯ ನಡುವೆಯೂ ಜನರು ಸಫಾರಿಯತ್ತ ಆಸಕ್ತಿ ತೋರುತ್ತಿದ್ದಾರೆ. ಈ ವೇಳೆ ಕಾಡು ಪ್ರಾಣಿಗಳನ್ನು ಕಾಣುವುದಲ್ಲದೆ, ಅವುಗಳ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದು, ಸಖತ್ ವೈರಲ್ ಆಗುತ್ತಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಂಡೀಪುರದಲ್ಲಿ ಅರಣ್ಯ ಪ್ರದೇಶದಿಂದ ಆಚೆ ಹಚ್ಚಾಗಿ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತಲೇ ಇವೆ. ಹಾಗೆಯೇ ಇಂದು ಸಫಾರಿಗೆ ತೆರಳಿದ್ದ ವೇಳೆ ಪ್ರವಾಸಿಗರಿಗೆ ಹುಲಿರಾಯನ ದರ್ಶನವಾಗಿದೆ. ಹಾಗಾದರೆ ಮುಂದೇನಾಯ್ತು ಎಂದು ಇಲ್ಲಿ ತಿಳಿಯಿರಿ.
ಘರ್ಜನೆಯ ಜೊತೆ ಕೊಟ್ಟ ಹುಲಿರಾಯ ದರ್ಶನ ಕೊಟ್ಟಿದ್ದು, ಈ ವೇಳೆ ಪ್ರವಾಸಿಗರು ಬೆಚ್ಚಿಬಿದ್ದ ಘಟನೆ ಚಾಮರಾಜನಗರ ಜಿಲ್ಲೆ ಬಂಡೀಪುರ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಇನ್ನು ಹುಲಿರಾರನ ಘರ್ಜನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಸಫಾರಿಗೆ ತೆರಳಿದ್ದ ವೇಳೆ ಪ್ರವಾಸಿಗರಿಗೆ ದೊಡ್ಡ ಘರ್ಜನೆ ಮೂಲಕ ಹುಲಿರಾಯ ದರ್ಶನ ನೀಡಿದ್ದು, ಇದರಿಂದ ಸ್ವಲ್ಪ ಹೊತ್ತುಪ್ರವಾಸಿಗರು ಆತಂಕಗೊಂಡಿದ್ದರು. ಬಳಿಕ ಹುಲಿರಾಯ ಕಾಡಿನೊಳಗೆ ತೆರಳಿದ್ದು, ಇದರಿಂದ ಪ್ರವಾಸಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಇದೀಗ ಹುಲಿರಾಯನ ಘರ್ಜನೆಯ ವಿಡಿಯೋ ಭಾರೀ ವೈರಲ್ ಆಹುತ್ತಿದೆ.












Click it and Unblock the Notifications