ಚಾಮರಾಜನಗರ: ಕಾಡಿನಲ್ಲಿ ಸೆಖೆ ತಾಳಲಾರದೆ ರಸ್ತೆ ತಡೆಗೋಡೆ ಮೇಲೆ ಮಲಗಿದ ಚಿರತೆ, ವಿಡಿಯೋ ಭಾರೀ ವೈರಲ್‌

ಚಾಮರಾಜನಗರ, ಏಪ್ರಿಲ್‌, 08: ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ಗಡಿಭಾಗವಾದ ದಿಂಬಂ ಘಟ್ಟ ಪ್ರದೇಶದ ತಡೆಗೋಡೆ ಮೇಲೆ ಚಿರತೆ ಮಲಗಿ ನಿದ್ರಿಸುತ್ತಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ತಮಿಳುನಾಡಿನಿಂದ ಮೈಸೂರಿಗೆ ಬರುತ್ತಿದ್ದ ವೇಳೆ ದಿಂಬಂನ 27ನೇ ತಿರುವಿನ ತಡೆಗೋಡೆ ಮೇಲೆ ಚಿರತೆಯೊಂದು ಮಲಗಿತ್ತು. ಇದನ್ನು ಕಂಡ ಕಾರಿನ ಚಾಲಕ ವೀಡಿಯೋ ಮಾಡುವ ವೇಳೆ ಎಚ್ಚೆತ್ತ ಚಿರತೆ ತಡೆಗೋಡೆ ಇಳಿದು ಮಾಯಾವಾಗಿದೆ. ಇನ್ನು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲದದ ಆಗುತ್ತಿದೆ.

A leopard sleeping on road barrier near Chamarajanagar district video viral

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪಕ್ಕೆ ನದಿ, ತೊರೆಗಳಲ್ಲಿ ನೀರು ಬತ್ತಿಹೋಗುತ್ತಲೇ ಇದೆ. ಅದರಲ್ಲೂ ಕಾಡಿನ ಮಧ್ಯಭಾಗದಲ್ಲಿರುವ ತೊರೆಗಳಲ್ಲಿಯೂ ನೀರು ಬತ್ತಿಹೋಗುತ್ತಿದ್ದು, ಈ ಹಿನ್ನೆಲೆ ಕಾಡುಪ್ರಾಣಿಗಳು ಬಾಯರಿಕೆ ನೀಗಿಸಿಕೊಳ್ಳಲು ಕಾಡು ಬಿಟ್ಟು ನಾಡಿನತ್ತ ಲಗ್ಗೆ ಇಡುತ್ತಿವೆ. ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲೆಯ ಬಂಡಿಪುರ ಭಾಗದಲ್ಲಿ ಹುಲಿಯೊಂದು ಕಾಡಿನಿಂದ ಹೊರಬಂದು ರಸ್ತೆಯಲ್ಲಿದ್ದ ನೀರನ್ನು ಕುಡಿದು ಬಾಯಾರಿಕೆ ನೀಗಿಸಿಕೊಂಡ ಘಟನೆ ನಡೆದಿತ್ತು.

ಇನ್ನು ಇದೀಗ ತಾಪಮಾನದ ಪ್ರಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಜನರು ಹಗಲಿನ ವೇಳೆ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಇನ್ನು ರಾತ್ರಿ ಆಯಿತೆಂದರೆ ಸಾಕು ಸೆಖೆ ಹಿನ್ನೆಲೆ ಹಳ್ಳಿಗಳಲ್ಲಿ ಜನರು ಗಾಳಿಗಾಗಿ ಹೊರಗಡೆ ಮನೆಯಂಗಳದ ಮೇಲೆಯೇ ಮಲಗಿದರೆ, ನಗರ ಪ್ರದೇಶದಗಳಲ್ಲಿ ರೆರಸ್‌ಗಳ ಮೇಲೆ ಮಲಗು ಶುರು ಮಾಡಿದ್ದಾರೆ. ಹಾಗೆಯೇ ಚಿರತೆಯೊಂದು ಕಾಡಿನಲ್ಲಿನ ಸೆಖೆಯನ್ನು ತಾಳಲಾರದೇ, ರಸ್ತೆ ಬದಿ ಬಂದು ಸೇತುವೆ ಮೇಲೆ ಮಲಗಿರುವ ವಿಡಿಯೋ ಇದೀಗ ಭಾರೀ ಸದ್ದು ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+