ಬಂಡೀಪುರದಲ್ಲಿ ಪ್ರವಾಸಿಗರ ಮುಂದೆ ಮರಿಗೆ ಜನ್ಮ ನೀಡಿದ ಆನೆ

ಚಾಮರಾಜನಗರ, ಜೂನ್‌, 02: ದೇಶದ ಜನಪ್ರಿಯ ಹುಲಿ‌ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ವ್ಯಾಪ್ತಿಯಲ್ಲಿ ಆಗಾಗ ಪ್ರಾಣಿಗಳ ಚಲನವಲನಗಳ ದೃಶ್ಯಗಳನ್ನು ಪ್ರವಾಸಿಗರು ಕ್ಯಾಮೆರಾದಲ್ಲಿ ಸೆರೆಹಿಡುತ್ತಲೇ ಇರುತ್ತಾರೆ. ಹಾಗೆಯೇ ಇದೀಗ ಮತ್ತೆ ಬಂಡೀಪುರದಲ್ಲಿ ಅಪರೂಪದ ಕ್ಷಣವನ್ನು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ.

‌ಬಂಡೀಪುರ ಸಫಾರಿ ಜೋನ್‌ನಲ್ಲಿ ಪ್ರವಾಸಿಗರಿಗೆ ತಾಯಿ ಹುಲಿ ಜೊತೆ ಮೂರು ಹುಲಿ ಮರಿ ಕಾಣಿಸಿಕೊಂಡಿದ್ದವು. ಈಗ ಸಫಾರಿ ಜೋನ್‌ನಲ್ಲಿ ಆನೆಯೊಂದು ಮರಿಗೆ ಜನ್ಮನೀಡಿರುವ ಘಟನೆ ನಡೆದಿದ್ದು, ಪ್ರವಾಸಿಗರು ಗಜ ಪ್ರಸವ ಕಂಡು ಸಂತಸದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

A Elephant gives birth to baby elephant in Bandipur

ಬಂಡೀಪುರದ ಸಫಾರಿ ಝೋನಿನ‌ ಸಫಾರಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಪ್ರವಾಸಿಗರ ಸಫಾರಿ ವಾಹನ‌ ನಿಂತು ನೋಡುತ್ತಿದ್ದ ವೇಳೆ ಕಾಡಾನೆಯೊಂದು ಒಂದು ಸುತ್ತು ಹಾಕಿ ಮರಿಗೆ ಜನ್ಮ ಕೊಟ್ಟಿದೆ. ಇನ್ನು ಈ ಘಟನೆ ಶುಕ್ರವಾರದ ಸಫಾರಿಯಲ್ಲಿ ನಡೆದಿದ್ದು, ಇದು ತಡವಾಗಿ ಬೆಳಕಿಗೆ ಬಂದಿದೆ.

ಮಾವಿನ ಹಣ್ಣಿನ ಮರದ ಮೇಲೆ ಹತ್ತಿದ ಆನೆ: ಮಾವಿನ ಸೀಸನ್ ಬಂತೆಂದರೆ ಸಾಕು ಎಂತಹವರ ಬಾಯಲ್ಲೂ ನೀರು ಬರುವುದರುವುದ ಸಾಮಾನ್ಯ. ಅದರಲ್ಲೂ, ಈ ಹಣ್ಣಿನ ರಾಜನನ್ನು ಕಂಡರೇ ನನಗೂ ಇಷ್ಟ ಎಂಬಂತೆ ಆನೆಯೊಂದು ಮರ ಹತ್ತಿ ಮಾವು ಸವಿದ ಘಟನೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ತಾಳವಾಡಿಯಲ್ಲಿ ಮುಂಜಾನೆ ನಡೆದಿದ್ದಿ, ಈ ವಿಡಿಯೋ ಎಲ್ಲೆಡೆ ಭಾರೀ ವೈರಲ್‌ ಆಗುತ್ತಿದೆ.

ನಟರಾಜು ಎಂಬವವರ ತೋಟಕ್ಕೆ ಆಗಮಸಿದ ಆನೆಯೊಂದು ಎರಡು ಕಾಲು ಮೇಲಕ್ಕೆತ್ತಿ ಮಾವಿನ ಗೊಂಚಲನ್ನು ಬೀಳಿಸಿ ಬಳಿಕ, ಒಂದಾದ ಮೇಲೆ ಒಂದರಂತೆ ಮಾವು ತಿಂದಿದೆ. ಇನ್ನು, ಆನೆ ಮಾವು ತಿನ್ನುವುದನ್ನು ಕಂಡ ಹೌಹಾರಿದ ಕುಟುಂಬ ಶಬ್ಧ ಮಾಡಿ ಆನೆಯನ್ನು ಓಡಿಸಿದ್ದಾರೆ.

ಒಟ್ಟಿನಲ್ಲಿ ಮಾವಿನ ಹಣ್ಣಿನ ಆಸೆ ಗಜರಾಜನಿಗೂ ಬಂದಿದ್ದು, ಇದರಿಂದ ತೋಟದ ಮಾಲೀಕರಿಗೆ ಬೆಳೆಹಾನಿ ನಷ್ಟದ ಬೀತಿ ಉಂಟಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+