ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ವಾನ ಪ್ರಿಯರೇ ಈ ಶ್ವಾನದ ಬುದ್ಧಿಮತ್ತೆಗೆ ನೀವೇನಂತೀರಿ?

By ಬಿ.ಎಂ. ಲವಕುಮಾರ್
|
Google Oneindia Kannada News

ಚಾಮರಾಜನಗರ, ಏಪ್ರಿಲ್ 24: ಇತ್ತೀಚೆಗೆ ಬಂಡೀಪುರ ಅಭಯಾರಣ್ಯದಲ್ಲಿ ರಾಯಭಾರಿ ಪ್ರಿನ್ಸ್ ಹುಲಿಯ ಮುಖಛಿದ್ರವಾಗಿ ಸಾವನ್ನಪ್ಪಿದಾಗ ಅದರ ಮುಖಭಾಗವನ್ನು ಹುಡುಕಿ ತಂದಿದ್ದು ರಾಣಾ ಎಂದರೆ ಅಚ್ಚರಿಯಾಗಬಹುದು. ಇವತ್ತು ರಾಣಾ ಇರುವುದೇ ಅರಣ್ಯ ಇಲಾಖೆಗೊಂದು ಆನೆಬಲ ಎಂದರೆ ತಪ್ಪಾಗಲಾರದು.

ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಅಧಿಕಾರಿಗಳವರೆಗೆ ಸ್ನೇಹಿತನಾಗಿ ಕಾಡುಗಳ್ಳರು, ಬೇಟೆಗಾರರಿಗೆ ಸಿಂಹಸ್ವಪ್ನವಾಗಿರುವ ರಾಣಾ ತನ್ನದೇ ಆದ ಕಾರ್ಯಗಳಿಂದ ಬಂಡೀಪುರದಲ್ಲಿ ಗಮನಸೆಳೆಯುತ್ತಿದ್ದಾನೆ. ಇಷ್ಟಕ್ಕೂ ಈತ ಯಾರಪ್ಪ ಎಂಬ ಪ್ರಶ್ನೆ ಮೂಡುವುದು ಸಹಜ. ನಾವು ಹೇಳುತ್ತಿರುವ ರಾಣಾ ಬಂಡೀಪುರದಲ್ಲಿರುವ ಪತ್ತೇದಾರ ಶ್ವಾನ.

ಬಂಡೀಪುರಕ್ಕೆ ರಾಣಾ ಬಂದ ಬಳಿಕ ಅರಣ್ಯದಲ್ಲಿ ಕಾಡುಗಳ್ಳರು, ಬೇಟೆಗಾರರು ಅರಣ್ಯ ಸಿಬ್ಬಂದಿ ಕಣ್ಣು ತಪ್ಪಿಸಿ ನಡೆಸುತ್ತಿದ್ದ ದುಷ್ಕøತ್ಯಗಳಿಗೆ ಇತಿಶ್ರೀ ಬಿದ್ದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಣಾ ಶ್ವಾನದ ಬಗ್ಗೆ ಹೇಳುವುದಾದರೆ ಇದು ಮಹಾನ್ ಪತ್ತೆಗಾರನಾಗಿದ್ದು, ಇದಕ್ಕೆ ಮೂರು ವರ್ಷ ಮೂರು ತಿಂಗಳು ಪ್ರಾಯವಾಗಿದ್ದು, ಜರ್ಮನ್ ಶಪರ್ಢ್ ತಳಿಯಾಗಿದೆ.

A Dog working as detective in Bandipur National park

ಮಧ್ಯಪ್ರದೇಶದ ಭೂಪಾಲ್‍ನ 23ನೇ ಬೆಟಾಲಿಯನ್ ಆಫ್ ಸ್ಪೆಷಲ್ ಆಮ್‍ರಿಸರ್ವ ಫೋಸ್ರ್Àನಲ್ಲಿ ಕಠಿಣ ತರಬೇತಿ ಪಡೆದು ಬಂದಿದೆ. ಇದು ಮರಗಳ್ಳರ ಪತ್ತೆ, ಹುಲಿ, ಚಿರತೆ ಚರ್ಮ ಸಾಗಾಣಿಕೆ, ಹುಲಿ ಉಗುರು, ಆನೆ ದಂತ, ಜೆಂಕೆ, ಕಾಡು ಹಂದಿಗಳ ಇನ್ನಿತರ ಪ್ರಾಣಿಗಳನ್ನು ಬೇಟೆಯಾಡುವ ಬೇಟೆಗಾರರನ್ನು ಪತ್ತೆ ಹಚ್ಚುವಲ್ಲಿ ನಿಪುಣತೆ ಪಡೆದುಕೊಂಡಿದೆ.

ಇವನಿಗೆ ಇಂಗ್ಲೀಷೂ ಅರ್ಥ ಆಗುತ್ತೆ!
ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಮೂಲಕ ತನಗೆ ನೀಡುವ ಕಾರ್ಯವನ್ನು ಚಾಚೂ ತಪ್ಪದೆ ಮಾಡುವುದರೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಅರಣ್ಯ ರಕ್ಷಕ ಪ್ರಕಾಶ್ ಎಂಬುವರು ಇದನ್ನು ಜತನದಿಂದ ನೋಡಿಕೊಳ್ಳುತ್ತಿದ್ದಾರೆ. ಬಂಡೀಪುರದ ಮೇಲುಕಾಮನಹಳ್ಳಿಯ ಎಸ್‍ಟಿಎಫ್ ವಸತಿಗೃಹದಲ್ಲಿ ವಾಸ್ತವ್ಯವಿದ್ದು, ಬೆಳಗ್ಗೆ ಒಂದು ಲೀಟರ್ ಹಾಲು ಅಥವಾ ಮೊಸರು, ಸಂಜೆ 250 ಗ್ರಾಂ ಮಾಂಸದ ಜೊತೆಗೆ ರಾಯಲ್ ಡಾಗ್ ಫುಡ್ ನೀಡಲಾಗುತ್ತದೆ.

A Dog working as detective in Bandipur National park

ರಾಣಾ ಬಂದಿದ್ದು ಹೇಗೆ?
ಇಷ್ಟಕ್ಕೂ ರಾಣಾನನ್ನು ಬಂಡೀಪುರಕ್ಕೆ ನೀಡಿದ್ದು ವಿಶ್ವ ವನ್ಯಜೀವಿ ನಿಧಿ ಹಾಗೂ ಟ್ರಾಫಿಕ್ ಇಂಡಿಯಾ ಸಂಸ್ಥೆ. ಬಂಡೀಪುರಕ್ಕೆ ರಾಣಾ ಬಂದ ಬಳಿಕ ಹಲವು ಕೃತ್ಯಗಳು ಪತ್ತೆಯಾಗಿರುವುದನ್ನು ನಾವು ಗಮನಿಸಬಹುದಾಗಿದೆ. ಎನ್.ಬೇಗೂರಿನಲ್ಲಿ ತೇಗದ ಮರ ಕಳ್ಳರ ಮತ್ತು ಬಂಡೀಪುರದ ವಿಂಡ್ ಫ್ಲವರ್ ಬಳಿ ಶ್ರೀಗಂಧದ ಮರಕಳ್ಳರ ಪತ್ತೆ ಹಚ್ಚಿದ್ದರೆ, ತಮಿಳುನಾಡಿನ ಮಧುಮಲೈ ಅರಣ್ಯ ವ್ಯಾಪ್ತಿಯಲ್ಲಿ ಟೀ ಎಸ್ಟೇಟ್‍ನಲ್ಲಿ ಕಾವಲುಗಾರನ ರುಂಡದೊಂದಿಗೆ ಪರಾರಿಯಾಗಿದ್ದ ನರಭಕ್ಷಕ ಹುಲಿಯನ್ನು ಹುಡುಕಿದ್ದು, ಹಂಚೀಪುರ ಗ್ರಾಮದಲ್ಲಿ ಅಪರೂಪದ ಕಪ್ಪು ಚಿರತೆಗೆ ವಿಷಪ್ರಾಶನ ಮಾಡಿದ್ದ ಪ್ರಕರಣ ಬೇಧಿಸಿ ವ್ಯಕ್ತಿಯನ್ನು ಬಂಧಿಸುವಲ್ಲಿಯೂ ಈತನ ಪಾತ್ರವಿತ್ತು. ಇನ್ನು ಶ್ರೀರಂಗಪಟ್ಟಣದ ಬಳಿ 60 ಕೆ.ಜಿ. ಶ್ರೀಗಂಧ ಕದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿಯೂ ಯಶಸ್ವಿಯಾಗಿದ್ದನು.

ಭಾರೀ ಬೇಡಿಕೆ!
ಅರಣ್ಯ ರಕ್ಷಣೆಯಲ್ಲಿ ತನ್ನದೇ ಪಾತ್ರವಹಿಸುತ್ತಿರುವ ರಾಣಾನ ಕಾರ್ಯಕ್ಷಮತೆಯನ್ನು ನೋಡಿದ ಬಳಿಕ ನಾಗರಹೊಳೆ ಅಭಯಾರಣ್ಯ, ಬಿಳಿಗಿರಿರಂಗನಬೆಟ್ಟ ಹಾಗೂ ಕಾಳಿ ಸಂರಕ್ಷಿತ ಪ್ರದೇಶದಲ್ಲಿಯೂ ಶ್ವಾನವನ್ನು ಬಳಸಿಕೊಳ್ಳಲು ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಎಲ್ಲೆಡೆ ಅರಣ್ಯದಲ್ಲಿ ರಾಣಾನಂತಹ ಪತ್ತೆದಾರಿ ಶ್ವಾನವಿದ್ದರೆ ಕಾಡುಕಳ್ಳರ ಕೃತ್ಯಗಳಿಗೆ ಬ್ರೇಕ್ ಹಾಕಲು ಸಾಧ್ಯವಾಗಬಹುದೇನೋ?

English summary
The super dog Rana in Bandipur National Park, is working as a detective and for this he has become adorable for forest officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X