ಚಾಮರಾಜನಗರ; ಶಾಸಕ ಮಹೇಶ್ ಬೆಂಗಲಿಗರಿಗೆ ಹೈಕೋರ್ಟ್‌ನಲ್ಲಿ ಹಿನ್ನಡೆ

ಚಾಮರಾಜನಗರ, ಜೂನ್ 14: ಬಹುಜನ ಸಮಾಜವಾದಿ ಪಕ್ಷದ ವಿಪ್ ಉಲ್ಲಂಘಿಸಿ ಬಿಜೆಪಿ ಬೆಂಬಲಿಸಿದ್ದ ಕೊಳ್ಳೇಗಾಲ ನಗರಸಭೆಯ 7 ಮಂದಿ ಸದಸ್ಯರನ್ನು ಅನರ್ಹಗೊಳಿಸಿದ್ದ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶವನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ಎತ್ತಿ ಹಿಡಿದಿದೆ.

ತಮ್ಮನ್ನು ನಗರಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ ಜಿಲ್ಲಾಧಿಕಾರಿ ಆದೇಶ ರದ್ದುಪಡಿಸಬೇಕು ಎಂದು ಕೋರಿ ಕೊಳ್ಳೇಗಾಲ ನಗರಸಭೆ ಸದಸ್ಯರಾಗಿದ್ದ ಪವಿತ್ರ ಹಾಗೂ ಇತರ 6 ಮಂದಿ ರಿಟ್ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಜಿಲ್ಲಾಧಿಕಾರಿ ಆದೇಶ ಎತ್ತಿ ಹಿಡಿದಿದೆ. ಸುಧೀರ್ಘ ವಿಚಾರಣೆಯ ಬಳಿಕ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ನೀಡಿದೆ.

7 BSP Councillors disqualified for violated the whip In Kollegal CMC

ಏನಿದು ರಾಜಕೀಯ ಜಿದ್ದಾಜಿದ್ದಿ?; ಬಿಎಸ್ಪಿಯಿಂದ ಶಾಸಕ ಎನ್. ಮಹೇಶ್ ಉಚ್ಚಾಟನೆಗೊಂಡ ಬಳಿಕ ಕೊಳ್ಳೇಗಾಲ ನಗರಸಭೆ ಚುನಾವಣೆಯಲ್ಲಿ ಆನೆ ಗುರುತಿನಿಂದ ಗೆದ್ದಿದ್ದ 9 ಸದಸ್ಯರಲ್ಲಿ 7 ಮಂದಿ ಸದಸ್ಯರು ಶಾಸಕ ಮಹೇಶ್ ಬಣ ಸೇರಿಕೊಂಡಿದ್ದರು.

ಬಳಿಕ, 2020ರ ಅಕ್ಟೋಬರ್ 29ರಂದು ಕೊಳ್ಳೇಗಾಲ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿತ್ತು. ಇದನ್ನು ಉಲ್ಲಂಘಿಸಿದ ಮಹೇಶ್ ಬಣದ ಬಿಎಸ್​​​ಪಿ​ಯ 7 ಸದಸ್ಯರು ಬಿಜೆಪಿ ಪರ ಮತ ಚಲಾಯಿಸಿದ್ದರು. ಪಕ್ಷದ ವಿಪ್ ಉಲ್ಲಂಘಿಸಿದ್ದ ಸದಸ್ಯರನ್ನು ಹುದ್ದೆಯಿಂದ ಅನರ್ಹಗೊಳಿಸುವಂತೆ ಕೋರಿ ಬಿಎಸ್​​​​ಪಿ ನಗರಸಭೆ ಸದಸ್ಯೆ ಜಿ. ಜಯಮೇರಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.

7 BSP Councillors disqualified for violated the whip In Kollegal CMC

ದೂರಿನ ವಿಚಾರಣೆ ನಡೆಸಿದ್ದ ಚಾಮರಾಜನಗರದ ಅಂದಿನ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಕಾಯ್ದೆ 1987ರ ಅಡಿ 7 ಮಂದಿ ಸದಸ್ಯರನ್ನು ಅನರ್ಹಗೊಳಿಸಿ ಕಳೆದ ಸೆಪ್ಟೆಂಬರ್ 6 ರಂದು ಆದೇಶ ಹೊರಡಿಸಿದ್ದರು.

ಜಿಲ್ಲಾಧಿಕಾರಿ ಆದೇಶದಿಂದ ನಗರಸಭೆ ಸದಸ್ಯ ಸ್ಥಾನ ಕಳೆದುಕೊಂಡ ಗಂಗಮ್ಮ, ನಾಗಮಣಿ, ನಾಗಸುಂದ್ರಮ್ಮ, ಪ್ರಕಾಶ್, ರಾಮಕೃಷ್ಣ, ನಾಸಿರ್ ಷರೀಫ್ ಹಾಗೂ ಪವಿತ್ರಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‌ನಲ್ಲೂ ಕೂಡ 2021 ರ ಸೆಪ್ಟೆಂಬರ್ 25 ರಂದು ಡಿಸಿ ನೀಡಿದ ಆದೇಶವನ್ನು ಎತ್ತಿ ಹಿಡಿಯಲಾಗಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು, ಈಗ ಮೇಲ್ಮನವಿಯಲ್ಲೂ ಹಿನ್ನಡೆ ಉಂಟಾಗಿದೆ.

ಚಾಮುಲ್ ಚುನಾವಣೆ ಫಲಿತಾಂಶ; ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಹಾಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್, ಚುಕ್ಕಾಣಿ ಹಿಡಿಯಬೇಕಿದ್ದ ಕಮಲ ಪಾಳೆಯಕ್ಕೆ ನಿರಾಸೆ ಫಲಿತಾಂಶ ಬಂದಿದೆ.

9 ನಿರ್ದೇಶಕ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನ, ಬಿಜೆಪಿಗೆ 2 , ಜೆಡಿಎಸ್ 1 ಸ್ಥಾನ ಗೆದ್ದಿದ್ದು ಇಬ್ಬರು ಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ. ಕೆ. ರವಿಕುಮಾರ್, ಚಾಮುಲ್ ನ ಇಬ್ಬರು ಹಾಲಿ ನಿರ್ದೇಶಕರು ಸೋಲುಂಡಿದ್ದಾರೆ. ಇನ್ನು, ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ಪುತ್ರಿ ಶೀಲಾ ಜಯ ಸಾಧಿಸುವ ಮೂಲಕ ಪುಟ್ಟರಂಗಶೆಟ್ಟಿ ವರ್ಚಸ್ಸು ಹೆಚ್ಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+