ಬಂಡೀಪುರ ಟೂ ಸಾತ್ಪುರ: ಹೊರರಾಜ್ಯಕ್ಕೆ ತೆರಳಿದ ನಾಲ್ಕು ಗಜಗಳು

ಚಾಮರಾಜನಗರ, ಡಿ. 03: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಸಾಕಾನೆ ಶಿಬಿರದಿಂದ 4 ಸಾಕಾನೆಗಳನ್ನು ಮಧ್ಯಪ್ರದೇಶಕ್ಕೆ ಹಸ್ತಾಂತರಿಸಲಾಗಿದೆ. ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರ ಆದೇಶದ ಮೇರೆಗೆ ಮಧ್ಯಪ್ರದೇಶಕ್ಕೆ ಕಳುಹಿಸಲಾಗಿದೆ.

ರಾಂಪುರ ಸಾಕಾನೆ ಶಿಬಿರದ ಕೃಷ್ಣ, ಗಜ, ಮರ್ಷಿಹ ಮತ್ತು ಪೂಜಾ ಎಂಬ 4 ಆನೆಗಳನ್ನು ರವಾನಿಸಲಾಗಿದೆ. ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ 5 ಸಾಕಾನೆಗಳನ್ನು ಕಳುಹಿಸಲು ಚಿಂತಿಸಲಾಗಿತ್ತು. ಆದರೆ ಗಣೇಶ ಆನೆ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆ ಇದೀಗ ಎರಡು ಗಂಡು ಹಾಗೂ ಎರಡು ಹೆಣ್ಣು ಸೇರಿ ಒಟ್ಟು 4 ಆನೆಗಳನ್ನು ರವಾನಿಸಲಾಗಿದೆ. ಕಳೆದ ತಿಂಗಳು ನಿಸರ್ಗ ಎಂಬ ಸಾಕಾನೆಯನ್ನು ಸಹ ರವಾನಿಸಲಾಗಿತ್ತು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಸಾಕಾನೆ ಶಿಬಿರದ ಹೊರಟ 4 ಸಾಕಾನೆಗಳನ್ನು ಪಶು ವೈದ್ಯಾಧಿಕಾರಿಗಳು ತಪಾಸಣೆ ಒಳಪಡಿಸಿದ್ದು, ನಾಲ್ಕು ಕೂಡ ಆರೋಗ್ಯವಾಗಿದೆ ಎಂದು ದೃಢಪಡಿಸಲಾಗಿದೆ. ಮಧ್ಯಪ್ರದೇಶದ ಭೂಪಾಲ್‍ನಿಂದ ನೇಮಕಗೊಂಡ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಶಿಷ್ ಕೋಬ್ರಾಗಡೆ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.

4 Elephant From Rampur Camp Handed Over To Madhya Pradesh

ಈ ಸಂದರ್ಭದಲ್ಲಿ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್ ಕುಮಾರ್, ಎಪಿಎಫ್ ಪರಮೇಶ್ ಸೇರಿದಂತೆ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+