Challakere Elections: ಚಳ್ಳಕೆರೆಯಲ್ಲಿ ಹ್ಯಾಟ್ರಿಕ್ ಹೊಡೆಯುತ್ತಾರಾ ಟಿ ರಘುಮೂರ್ತಿ..?
ಬಿಜೆಪಿಚಿತ್ರದುರ್ಗ, ಮಾರ್ಚ್ 24: ಚಳ್ಳಕೆರೆ ಚಿತ್ರದುರ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿದೆ. ಕರ್ನಾಟಕದ ಮುಂಬೈ ಎಂದು ಕರೆಸಿಕೊಳ್ಳುವ ಈ ತಾಲೂಕಿನಲ್ಲಿ 70ಕ್ಕೂ ಹೆಚ್ಚು ಎಣ್ಣೆ ಮಿಲ್ಲುಗಳು ಕಾರ್ಯ ನಿರ್ವಹಿಸುತ್ತವೆ. ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಕಡಲೆಕಾಯಿಯಾಗಿದ್ದು, ಇದನ್ನು ಆಯಿಲ್ ಸಿಟಿ ಎಂತಲೂ ಕರೆಯುತ್ತಾರೆ. ರಾಜ್ಯದಲ್ಲಿ ಅತ್ಯಂತ ಕಡಿಮೆ ಮಳೆ ಬೀಡಲು ಈ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದೆರಡು ಬಾರಿಯಿಂದ ಗೆಲುವು ದಾಖಲಿಸಿರುವ ಕಾಂಗ್ರೆಸ್ ನಾಯಕ ಟಿ ರಘುಮೂರ್ತಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿ ಸೋಲು ಕಂಡಿದ್ದ ಎಂ ರವೀಶ್ ಕುಮಾರ್ ಈ ಸಲವು ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಅದರೆ, ಕಾಂಗ್ರೆಸ್ ಓಟಕ್ಕೆ ಬ್ರೇಕ್ ಹಾಕುವ ರಣತಂತ್ರ ರೂಪಿಸುತ್ತಿರುವ ಬಿಜೆಪಿ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿದೆ.

*ಚಳ್ಳಕೆರೆ ಬಗ್ಗೆ ಮಾಹಿತಿ*
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕಂಬಳಿ ಯಾರಿಗೆ ತಾನೇ ಗೊತ್ತಿಲ್ಲ. ಮಲೆನಾಡಿನ ಮಾರುಕಟ್ಟೆಗೆ ಕ೦ಬಳಿ ರಫ್ತು ಆಗುವುದು ಕೂಡ ಇದೇ ತಾಲೂಕಿನಿಂದ. ಇಲ್ಲಿನ ಕುರುಬ ಜನಾ೦ಗದ ಜನರು ನೇಯುವ ಕ೦ಬಳಿಗೆ ರಾಜ್ಯಾದ೦ತ ಬೇಡಿಕೆ ಇದೆ. ಚಳ್ಳಕೆರೆಯಿ೦ದ ಗ್ರಾಮದಿಂದ ಕೆಲವೇ ಕಿ.ಮೀ ದೂರದಲ್ಲಿ ಹೆಗ್ಗರೆ ಎಂಬ ಪ್ರಾಚೀನ ಕಾಲದ ಹಾಳು ಊರು ಇದೆ. ಇಲ್ಲಿ ಸಾಕಷ್ಟು ನಿಧಿಗಳು ಸಿಕ್ಕಿರುವ ಉದಾಹರಣೆಹಗಳು ಇದ್ದು, ಹೆಚ್ಚು ಸಂಶೋಧನೆಗಳನ್ನು ನಡೆಸಲಾಗಿದೆ ಎನ್ನಲಾಗುತ್ತದೆ.
ಚಳ್ಳಕೆರೆಯ ನಾಯಕನಹಟ್ಟಿ ಶ್ರೀ ತಿಪ್ಪೆಸ್ವಾಮಿ ದೇವಸ್ಥಾನ ಬಹಳ ಪ್ರಸಿದ್ಡ. ಇಲ್ಲಿ ನಡೆಯುವ ವೀರಭದ್ರ ಸ್ವಾಮಿ ಜಾತ್ರೆಯು ಸುಪ್ರಸಿದ್ದ ಜಾತ್ರೆಯಾಗಿದೆ. ಚಳ್ಳಕೆರೆಯಲ್ಲಿ 3 ವರ್ ಕೊಮ್ಮೆ ನಡೆಯುವ ಚಳ್ಳಕೇರಮ್ಮ ಜಾತ್ರೆಯು ಇಲ್ಲಿನ ಇತಿಹಾಸ, ಸಂಸ್ಕೃತಿಯನ್ನು ಪರಿಚಯಿಸುತ್ತದೆ. ಚಳ್ಳಕೆರೆ ತಾಲೂಕಿನಲ್ಲಿ ನಡೆಯುವ ಗೌರಸಮುದ್ರ ಮಾರಮ್ಮನ ಜಾತ್ರೆ, ಕ್ಯಾತಪ್ಪನ ಪರಿಷೆ ತುಂಬ ವಿಶಿಷ್ಟ.

*ಚಳ್ಳಕೆರೆ ರಾಜಕೀಯ*
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಯಿಂದ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಚಿತ್ರದುರ್ಗ ಜಿಲ್ಲೆಯ ಈ ವಿಧಾನಸಭಾ ಕ್ಷೇತ್ರದಲ್ಲಿ 1972ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ ಮಾಸಿಯಪ್ಪ 23,643 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಬಳಿಕ 1978 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್ ಜಯಣ್ಣ 38, 411 ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದರು. 1983 ಕಾಂಗ್ರೆ ಬಿಟ್ಟು ಜೆಎನ್‌ಪಿಯ ಎಚ್ ಸಿ ಶಿವಶಂಕರಪ್ಪ 38,146 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರು.
1985 ರಲ್ಲಿಯೂ ಜೆಎನ್‌ಪಿಯ ತಿಪ್ಪೇಸಾಮಿ 36,163 ಮತಗಳನ್ನು ಪಡೆದು ಶಾಸಕರಾಗಿದ್ದರು. ಇದಾದ ನಂತರ 1989ರಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ಎನ್ ಜಯಣ್ಣ ಆಯ್ಕೆಯಾದರು. 1994ರಲ್ಲಿ ಜನತಾದಳದ ಅಭ್ಯರ್ಥಿ ತಿಪ್ಪೇಸ್ವಾಮಿ 39, 560 ಮತಗಳನ್ನು ಪಡೆದು ಆಯ್ಕೆಯಾದರು. 1999 ರಲ್ಲಿ ಜಿ ಬಸವರಾಜ ಮಂಡಿಮುತ್ತು 26,517 ಮತಗಳನ್ನು ಪಡೆಯುವ ಮೂಲಕ ಬಿಜೆಪಿಯನ್ನು ಮೊದಲ ಬಾರಿ ಕ್ಷೇತ್ರಕ್ಕೆ ತಂದರು.

ಬಳಿಕ 2004ರಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ಸುಧಾಕರ್ ಡಿ ಚಳ್ಳಕೆರೆಯಲ್ಲಿ ಶಾಸಕರಾದರು. ಇದಾದ ಮೇಲೆ ಮತ್ತೆ 2008ರಲ್ಲಿ ತಿಪ್ಪೇಸ್ವಾಮಿ ಬಿಜೆಪಿಯಿಂದ ಸ್ವರ್ಧಿಸಿ ಅಧಿಕಾರಕ್ಕೆ ಬಂದರು. ನಂತರ ನಡೆದ ಎರಡು ಚುನಾವಣೆಗಳಲ್ಲಿ ಅಂದರೆ, 2013 ಮತ್ತು 2018ರಲ್ಲಿ ಕಾಂಗ್ರೆಸ್‌ನ ಟಿ ರಘುಮೂರ್ತಿ 60197 ಮತ್ತು 72874 ಮತಗಳನ್ನು ಪಡೆಯುವ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ.
*ಚಳ್ಳಕೆರೆಯಲ್ಲಿ ಕಾಂಗ್ರೆಸ್*
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಲವು ಬಾರಿ ಅಧಿಕಾರಕ್ಕೆ ಏರಿದೆ. ಇಲ್ಲಿ ಕಾಂಗ್ರೆಸ್‌ಗೆ ಇರುವ ಮತದಾರರಷ್ಟೇ ಜೆಡಿಎಸ್‌ಗೂ ಇದ್ದಾರೆ. ಇದಕ್ಕೆ ಎರಡು ಬಾರಿ ಬಿಜೆಪಿ ಮತ್ತು ಜೆಡಿಎಸ್ ಅಧಿಕಾರಕ್ಕೆ ಬಂದಿರುವುದು ಸಾಕ್ಷಿಯಾಗಿದೆ. ಈ ಕ್ಷೇತ್ರದಲ್ಲಿ ಎರಡು ಅವಧಿಯಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ತಮ್ಮ ಮತಗಳನ್ನು ಭದ್ರಪಡಿಸಿಕೊಳ್ಳುವಲ್ಲಿ ಪ್ರಯತ್ನ ನಡೆಸುತ್ತಿದೆ.
ಇನ್ನು, ಕ್ಷೇತ್ರದಲ್ಲಿ ಈ ಬಾರಿಯು ಹಾಲಿ ಶಾಸಕ ಟಿ ರಘುಮೂರ್ತಿ ಕಣಕ್ಕೆ ಇಳಿಯಲಿದ್ದು, ಅವರಿಗೆ ಕಾಂಗ್ರೆಸ್‌ನಲ್ಲಿ ಯಾವ ಪೈಪೋಟಿಯು ಇಲ್ಲ. ಇದಕಕೆ ಸಾಕ್ಷಿಯಾಗಿ ಯಾರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ತಮ್ಮ ವರ್ಚಸ್ಸು ಮತ್ತು ಕಾಂಗ್ರೆಸ್ ಪಕ್ಷದ ಹೆಸರಲ್ಲಿ ಜನರನ್ನು ಸಂಪರ್ಕಿಸುತ್ತಿದ್ದು, ಇವರ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯ ಕೂಡ ಇದೆ. ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವ ಟಿ ರಘುಮೂರ್ತಿ ಅವರು ಹ್ಯಾಟ್ರಿಕ್ ಸಾಧಿಸುತ್ತಾರಾ ಎಂಬುದು ಫಲಿತಾಂಶದ ನಂತರ ತಿಳಿಯಲಿದೆ.
*ಚಳ್ಳಕೆರೆಯಲ್ಲಿ ಬಿಜೆಪಿ ಸ್ಥಿತಿಗತಿ*
ಈ ಕ್ಷೇತ್ರದಲ್ಲಿ ಬಿಜೆಪಿಗೆ ಅಷ್ಟು ಗಟ್ಟಿಯಾದ ನೆಲೆಯಿಲ್ಲ. ಬಿಜೆಪಿಯಲ್ಲಿ ಈಗಾಗಲೇ ಟಿಕೆಟ್‌ಗೆ ಹಲವು ಆಕಾಂಕ್ಷಿಗಳು ಸಜ್ಜಾಗಿದ್ದಾರೆ. ಆದರೆ, ಟಿ ರಘುಮೂರ್ತಿ ವಿರುದ್ಧ ನಿಲ್ಲಬಲ್ಲ ಪ್ರಬಲ ಅಬ್ಯರ್ಥಿಯ ಹುಡುಕಾಟದಲ್ಲಿ ಬಿಜೆಪಿ ತಲ್ಲಿನವಾಗಿದೆ. 2008 ಬಿಜೆಪಿ ಅಭ್ಯರ್ಥಿ ತಿಪ್ಪೇಸ್ವಾಮಿ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕೆಲವೇ ಮತಗಳ ಅಂತರದಲ್ಲಿ ಸೋಲು ಕಂಡಿದ್ದ ನಟ ಶಶಿಕುಮಾರ್ ಈ ಬಾರಿ ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ.
ಇವರ ಜೊತೆಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಯಪಾಲಯ್ಯ, ನಿವೃತ್ತ ಉಪ ವಿಭಾಗಾಧಿಕಾರಿ ಅನಿಲ್‌ಕುಮಾರ್, ಸಹಕಾರ ಇಲಾಖೆಯ ನಿವೃತ್ತ ಅಧಿಕಾರಿ ಜಯರಾಮ್, ಮಾಜಿ ಸಚಿವ ತಿಪ್ಪೇಸ್ವಾಮಿ ಅವರ ಪುತ್ರ ಕುಮಾರಸ್ವಾಮಿ, ಬಾಳೆಕಾಯಿ ರಾಮದಾಸ್ ಟಿಕೆಟ್ ಕೇಳಿದ್ದಾರೆ. ಈಗಾಗಲೇ ಹಲವರು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದು, ಟಿಕೆಟ್ ಸಿಗದಿದ್ದರೇ ಸ್ವತಂತ್ರ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಇದು ಬಿಜೆಪಿಯ ಮತಗಳನ್ನು ವಿಭಜಿಸಬಹುದು.
*ಚಳ್ಳಕೆರೆಯಲ್ಲಿ ಜೆಡಿಎಸ್ ಸ್ಥಿತಿಗತಿ*
ಇನ್ನು, ಜೆಡಿಎಸ್‌ನಿಂದ ಕಳೆದ ಬಾರಿ ಸೋಲು ಕಂಡಿದ್ದ ಎಂ ರವೀಶ್ ಕುಮಾರ್ ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ. 1994ರಲ್ಲಿ ಈ ಕ್ಷೇತ್ರದಲ್ಲಿ ಜಿಡಿಎಸ್ ಅಧಿಕಾರಕ್ಕೆ ಬಂದಿತ್ತು. ಈ ಕಾರಣದಿಂದ ಜೆಡಿಎಸ್ ಮತಗಳು ಇಲ್ಲೂ ಇವೆ ಎಂಬುದು ಕಂಡು ಬರುತ್ತದೆ. ಆದರೆ ಅವುಗಳನ್ನು ಒಟ್ಟು ಮಾಡುವ ಸಮರ್ಥ ನಾಯಕ ಬೇಕಾಗಿದೆ. ಹೀಗಾಗಿ ಮೂಲತಃ ಬೆಂಗಳೂರಿನವರಾದ ಎಂ ರವೀಶ್ ಕುಮಾರ್ 2018ರ ಚುನಾವಣೆಯಲ್ಲಿ ಇಲ್ಲಿಂದ ಕಣಕ್ಕಿಳಿದು ಸೋಲು ಕಂಡಿದ್ದರು. ಅಂದಿನಿಂದ ಕ್ಷೇತ್ರದಲ್ಲಿ ಪಕ್ಷ ಕಟ್ಟುವ ಕೆಲಸದಲ್ಲಿದ್ದು, ಜೆಡಿಎಸ್ ಮತಗಳನ್ನು ಒಟ್ಟು ಮಾಡುವ ಕೆಲಸದಲ್ಲಿದ್ದಾರೆ.
*ಮತದಾರರು*
ಚಳ್ಳಕೆರೆ ಕ್ಷೇತ್ರದಲ್ಲಿ ಸಾಮಾನ್ಯ ಮತದಾರರು, ಅನಿವಾಸಿ ಭಾರತೀಯರು ಮತ್ತು ಸೇವಾನಿರತ ಮತದಾರರು ಸೇರಿ ಒಟ್ಟು 2,06,504 ಮತದಾರರಿದ್ದಾರೆ. ಸಾಮಾನ್ಯ ಮತದಾರರಲ್ಲಿ 1,04,045 ಪುರುಷರು, 1,02,423 ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ಮೂವರಿದ್ದಾರೆ. ಕ್ಷೇತ್ರದಲ್ಲಿ ಮತದಾರರ ಲಿಂಗ ಅನುಪಾತ 98.41 ಮತ್ತು ಅಂದಾಜು ಸಾಕ್ಷರತೆಯ ಪ್ರಮಾಣ 72% ಇದೆ.
| 2018 | ಟಿ ರಘುಮೂರ್ತಿ | ಕಾಂಗ್ರೆಸ್ | 72,874 | 43.00% | 13,539 |
| 2013 | ಟಿ ರಘುಮೂರ್ತಿ | ಕಾಂಗ್ರೆಸ್ | 60,197 | 62% | 23,123 |
| 2008 | ತಿಪ್ಪೇಸ್ವಾಮಿ | ಬಿಜೆಪಿ | 42,591 | 50% | 289 |
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications