• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೊಮ್ಯಾಟೋ ಮೂಲಕ ಕಾಶ್ಮೀರದಲ್ಲೂ ಮೈಸೂರು ಪಾಕ್ ಸವಿಯಿರಿ!

|
Google Oneindia Kannada News

ಶ್ರೀನಗರ, ಸೆಪ್ಟೆಂಬರ್‌ 01: ಇನ್ನು ಮುಂದೆ ನೀವು ಮೈಸೂರ್‌ ಪಾಕ್‌ ಅನ್ನು ಕಾಶ್ಮೀರದಲ್ಲಿ ಕುಳಿತುಕೊಂಡು ಆರ್ಡರ್‌ ಮಾಡಿ ತಿನ್ನಬಹುದು. ಇಲ್ಲವೇ ಕೋಲ್ಕತ್ತಾ ರಸಗುಲ್ಲಾವನ್ನು ಕನ್ಯಾಕುಮಾರಿಯ ಮನೆಗೆ ತರಿಸಿಕೊಂಡು ಸವಿಯಬಹುದಾಗಿದೆ.

ಹೈದರಾಬಾದ್‌ ಬಿರಿಯಾನಿಯನ್ನು ದೆಹಲಿಯ ಹಳೆ ರಾಜೇಂದ್ರ ನಗರದಿಂದ ಆರ್ಡರ್‌ ಮಾಡಿ ತರಿಸಿಕೊಂಡು ತಿನ್ನಬಹುದು. ಹೀಗೆ ದೇಶದ ಯಾವುದೇ ನಗರಲ್ಲಿದ್ದರೂ ದೇಶದ ಪ್ರಮುಖ ಬಗೆ ಬಗೆಯ ಖಾದ್ಯಗಳನ್ನು ನೀವು ಇರುವಲ್ಲಿಗೆ ತರಿಸಿಕೊಂಡು ಸವಿಯಬಹುದಾಗಿದೆ. ಅರೇ ಇದು ಹೇಗೆ ಸಾಧ್ಯ?

ರಿಯಲ್ ಹೀರೋ: ಇಬ್ಬರ ಮಕ್ಕಳೊಂದಿಗೆ ತಂದೆಯ ಝೊಮಾಟೊ ಡೆಲಿವರಿ ಕೆಲಸರಿಯಲ್ ಹೀರೋ: ಇಬ್ಬರ ಮಕ್ಕಳೊಂದಿಗೆ ತಂದೆಯ ಝೊಮಾಟೊ ಡೆಲಿವರಿ ಕೆಲಸ

ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಜೊಮ್ಯಾಟೋ ಈಗ ತಮ್ಮ ಇಂಟರ್‌ಸಿಟಿ ಆಹಾರ ವಿತರಣಾ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು, ಇದು ದೇಶದ ವಿವಿಧ ನಗರಗಳ ವಿಶೇಷ ಖಾದ್ಯಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲು ಯೋಜನೆ ಹಾಕಿಕೊಂಡಿದೆ.

ಅದನ್ನು ಇಂಟರ್‌ಸಿಟಿ ಲೆಜೆಂಡ್ಸ್ ಎಂದು ಕರೆಯಲಾಗಿದ್ದು, ಈಗ ಭಾರತದ ಯಾವುದೇ ಸ್ಥಳದಲ್ಲಿದ್ದರೂ ನೀವು ಕೋಲ್ಕತ್ತಾದಿಂದ ಬೇಯಿಸಿದ ರಸಗುಲ್ಲಾ, ಹೈದರಾಬಾದ್‌ನಿಂದ ಬಿರಿಯಾನಿ ಅಥವಾ ಸೊಗಸಾದ ಮೈಸೂರು ಪಾಕ್‌ನಂತಹ ಭಕ್ಷ್ಯಗಳನ್ನು ತರಿಸಿಕೊಂಡು ಸವಿಯಬಹುದಾಗಿದೆ. ಜೊಮ್ಯಾಟೋ ಪೈಲಟ್ ಯೋಜನೆಯು ಭಾರತದ ವಿವಿಧ ನಗರದಿಂದ ದೇಶದ ವಿವಿಧ ಭಾಗಗಳಿಗೆ ಅನನ್ಯ ಆಹಾರವನ್ನು ತಲುಪಿಸುವ ಗುರಿಯನ್ನು ಹೊಂದಿದೆ.

ಬ್ಲಾಗ್ ಪೋಸ್ಟ್‌ನಲ್ಲಿ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಡಿಪಿಂದರ್ ಗೋಯಲ್ ಅವರು ಇಂಟರ್‌ಸಿಟಿ ಆಯ್ಕೆಯನ್ನು ಬಳಸಿಕೊಂಡು, ಗ್ರಾಹಕರು ರಾಷ್ಟ್ರದ ಪ್ರತಿಯೊಂದು ಪ್ರದೇಶದ ವಿವಿಧ ಪಾಕಪದ್ಧತಿಗಳಿಂದ ಎಲ್ಲಾ ಸಂತೋಷಗಳನ್ನು ಪಡೆಯಬಹುದು ಎಂದು ಹೇಳಿದ್ದಾರೆ. ಮೊದಲಿಗೆ ಗುರುಗ್ರಾಮ್ ಮತ್ತು ದಕ್ಷಿಣ ದೆಹಲಿಯಲ್ಲಿ ಆಯ್ದ ಗ್ರಾಹಕರಿಗೆ ಇದನ್ನು ಪ್ರಾರಂಭಿಸಲಾಗುವುದು. ನಂತರ ಜೊಮ್ಯಾಟೋ ಶೀಘ್ರದಲ್ಲೇ ಇದನ್ನು ಇತರ ನಗರಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ.

'ಇಂಟರ್‌ಸಿಟಿ ಲೆಜೆಂಡ್ಸ್' ನಿಂದ ಆರ್ಡರ್

'ಇಂಟರ್‌ಸಿಟಿ ಲೆಜೆಂಡ್ಸ್' ನಿಂದ ಆರ್ಡರ್

ಪ್ರಸ್ತುತ, ತನ್ನ ರೆಸ್ಟೋರೆಂಟ್ ಪಾಲುದಾರರಿಂದ 7 ರಿಂದ 10 ಕಿಲೋಮೀಟರ್ ದೂರದಲ್ಲಿರುವ ಪ್ರದೇಶಗಳಲ್ಲಿ ಜೊಮ್ಯಾಟೋ ಪ್ಲಾಟ್‌ಫಾರ್ಮ್ ಮೂಲಕ ಮಾತ್ರ ಆರ್ಡರ್‌ಗಳನ್ನು ತರಿಸಬಹುದಾಗಿದೆ. ಮುಂದೆ ವಿವಿಧ ನಗರಗಳ ಜನಪ್ರಿಯ ಖಾದ್ಯಗಳನ್ನು ಜೊಮ್ಯಾಟೋ 'ಇಂಟರ್‌ಸಿಟಿ ಲೆಜೆಂಡ್ಸ್' ನಿಂದ ಆರ್ಡರ್ ಮಾಡಬಹುದು ಮತ್ತು ಅದನ್ನು ವಿಮಾನಗಳ ಮೂಲಕವೂ ತರಿಸಿಕೊಡಲಾಗುತ್ತದೆ ಎಂದೂ ಹೇಳಿದೆ.

ಜೊಮಾಟೊ ಜಾಹೀರಾತಿನಲ್ಲಿ ಉಜ್ಜಯಿನಿ ಮಹಾಕಾಳೇಶ್ವರನಿಗೆ ಅವಮಾನ: ಕ್ಷಮೆ ಕೇಳಿದ ಸಂಸ್ಥೆಜೊಮಾಟೊ ಜಾಹೀರಾತಿನಲ್ಲಿ ಉಜ್ಜಯಿನಿ ಮಹಾಕಾಳೇಶ್ವರನಿಗೆ ಅವಮಾನ: ಕ್ಷಮೆ ಕೇಳಿದ ಸಂಸ್ಥೆ

ವಿಮಾನದ ಮೂಲಕವೂ ಸಾಗಣೆ

ವಿಮಾನದ ಮೂಲಕವೂ ಸಾಗಣೆ

ನಿಮ್ಮ ಮೆಚ್ಚಿನ ಖಾದ್ಯವನ್ನು ನೀವು ಸೂಚಿಸದ ರೆಸ್ಟೋರೆಂಟ್‌ನಿಂದಲೇ ಹೊಸದಾಗಿ ತಯಾರಿಸಲಾಗುತ್ತದೆ. ಇದನ್ನು ವಿಮಾನದ ಮೂಲಕವೂ ಸಾಗಣೆ ಮಾಡಲಾಗುತ್ತದೆ. ಈ ಸಾಗಣೆಯ ಸಮಯದಲ್ಲಿ ಅದನ್ನು ಸುರಕ್ಷಿತವಾಗಿರಿಸಲು ಇದನ್ನು ಮರುಬಳಕೆ ಮಾಡಬಹುದಾದ ಮತ್ತು ಟ್ಯಾಂಪರ್ ಪ್ರೂಫ್ ಕಂಟೇನರ್‌ಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ. ಮೊಬೈಲ್ ಶೈತ್ಯೀಕರಣ ತಂತ್ರಜ್ಞಾನವು ಆಹಾರವನ್ನು ಫ್ರೀಜ್ ಮಾಡುತ್ತದೆ. ಇದಕ್ಕೆ ಯಾವುದೇ ರೀತಿಯ ಸಂರಕ್ಷಕಗಳನ್ನು ಸೇರಿಸುವ ಅಗತ್ಯವಿಲ್ಲದೆ ಸಂರಕ್ಷಿಸಲಾಗುತ್ತದೆ ಎಂದು ಸಿಇಒ ಡಿಪಿಂದರ್ ಗೋಯಲ್ ಹೇಳಿದ್ದಾರೆ.

ಯಶಸ್ಸು ನೋಡಿಕೊಂಡು ಸೇವೆಯ ವಿತರಣೆ

ಯಶಸ್ಸು ನೋಡಿಕೊಂಡು ಸೇವೆಯ ವಿತರಣೆ

ಪ್ರಸ್ತುತ ಈ ಜೊಮ್ಯಾಟೋ ಸೇವೆಯು ಗುರುಗ್ರಾಮ್ ಮತ್ತು ದಕ್ಷಿಣ ದೆಹಲಿಯ ಪ್ರದೇಶಗಳಲ್ಲಿ ಮಾತ್ರ ಆಯ್ದ ಗ್ರಾಹಕರಿಗೆ ಇದರ ಸೇವೆ ನೀಡಲಾಗುತ್ತದೆ. ಮುಂದೆ ಅದರ ಯಶಸ್ಸನ್ನು ನೋಡಿಕೊಂಡು ದೇಶದ ಇತರ ನಗರಗಳಿಗೂ ವಿತರಣೆ ಮಾಡಲಾಗುತ್ತದೆ ಎಂದು ಗೋಯಲ್ ಹೇಳಿದ್ದಾರೆ. ಹೊಸ ಯೋಜನೆದ ಬಗ್ಗೆ, ನೀವು ಸಿಹಿತಿಂಡಿಗಳು, ಬಿರಿಯಾನಿಗಳು, ಕಚೋರಿಗಳು ಅಥವಾ ಕಬಾಬ್‌ಗಳನ್ನು ಇಷ್ಟಪಡುತ್ತೀರಾ ಎಂದರೆ ಮುಂದಿನ ಕೆಲವು ವಾರಗಳಲ್ಲಿ ನಾವು ಇದನ್ನು ದೇಶದ ಇತರ ನಗರಗಳಿಗೆ ತ್ವರಿತವಾಗಿ ವಿಸ್ತರಣೆ ಮಾಡುತ್ತೇವೆ ಎಂದರು.

100ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳ ಮೂಲಕ ರವಾನೆ

100ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳ ಮೂಲಕ ರವಾನೆ

ದೇಶದ ಪ್ರತಿಯೊಂದು ಜನಪ್ರಿಯ ಖಾದ್ಯಗಳ ಸಂಭ್ರಮ ನಿಮಗೆ ಲಭ್ಯವಾಗಲಿದೆ. ಭಾರತದ ಮೂಲೆ ಮೂಲೆಯಲ್ಲಿ ಸಿಗುವ ವಿವಿಧ ಜನಪ್ರಿಯ ಖಾದ್ಯಗಳನ್ನು 100ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳ ಮೂಲಕ ಭಾರತದ ಅತ್ಯಂತ ಸಾಂಪ್ರದಾಯಿಕ ಭಕ್ಷ್ಯಗಳ ವಿತರಣೆಗೆ ಇಂಟರ್‌ಸಿಟಿ ಲೆಜೆಂಡ್‌ಗಳು ಈಗ ಸಿದ್ಧವಾಗಿವೆ. ಈಗ ನಮಗೆ ಆಕಾಶವು ಕೂಡ ಮಿತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

English summary
Online food delivery company Zomato has now launched its Intercity Food Delivery range, which plans to deliver the country's urban specialties to your doorstep.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X