• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾಹೂನಿಂದ ಪಿಂಕ್ ಸ್ಲಿಪ್ ಮೇಳ, ಸಿಇಒ ಮೇಯರ್ ಗೂ ಕುತ್ತು?

By Mahesh
|

ಬೆಂಗಳೂರು, ಫೆ.03: ಫೇಸ್ ಬುಕ್ ಹಾಗೂ ಗೂಗಲ್ ನಿಂದ ಪ್ರತಿಸ್ಪರ್ಧೆ ಎದುರಿಸಲಾಗದೆ ಆತಂಕದ ಸ್ಥಿತಿ ಎದುರಿಸುತ್ತಿರುವ ಇಂಟರ್ನೆಟ್ ದಿಗ್ಗಜ ಯಾಹೂ ಸಂಸ್ಥೆ ಮತ್ತೊಮ್ಮೆ ಪಿಂಕ್ ಸ್ಲಿಪ್ ಮೇಳ ಘೋಷಿಸಿದೆ. ಈ ಬಾರಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಭಾವಿ ಟೆಕ್ ಮಹಿಳೆ ಮರಿಸ್ಸಾ ಮೇಯರ್ ಅವರ ಸ್ಥಾನಕ್ಕೂ ಕುತ್ತುಂಟಾಗಿದೆ.

ಯಾಹೂ ಈಗ ತನ್ನ ಗಮನವನ್ನು ಮಾಧ್ಯಮ ಹಾಗೂ ಜಾಹೀರಾತು ಕ್ಷೇತ್ರದತ್ತ ಹರಿಸಲು ಆರಂಭಿಸಿ ಮೂರು ವರ್ಷಗಳೇ ಕಳೆದಿವೆ. ಕ್ಯಾಲಿಫೋರ್ನಿಯಾ ಮೂಲದ ಯಾಹೂ ಕಂಪನಿಯಲ್ಲಿ ಸುಮಾರು 14,100 ಫುಲ್ ಟೈಮ್ ಉದ್ಯೋಗಿಗಳಿದ್ದಾರೆ. ಈಗ ಸರಿ ಸುಮಾರು ಶೇ 15ರಷ್ಟು ಉದ್ಯೋಗಿಗಳನ್ನು ಮನೆಗೆ ಕಳಿಸಲು ಯೋಜನೆ ಸಿದ್ಧವಾಗಿದೆ.[2016ರಲ್ಲಿ 2.5 ಲಕ್ಷ ಮಂದಿಗೆ ಐಟಿ ಉದ್ಯೋಗಾವಕಾಶ]

ಇಂಟರ್ ನೆಟ್ ದಿಗ್ಗಜ ಯಾಹೂ ಸಂಸ್ಥೆ ನಿರೀಕ್ಷೆಯಂತೆ ಸಾಮೂಹಿಕವಾಗಿ ಸಾವಿರಾರು ಉದ್ಯೋಗಿಗಳನ್ನು ಹೊರ ದಬ್ಬುವುದು ಮುಂದುವರೆದಿದೆ. ಸದ್ಯಕ್ಕೆ 1,700 ಜನರಿಗೆ ಪಿಂಕ್ ಸ್ಲಿಪ್ ವಿತರಣೆಯಾಗಲಿದೆ ಎಂಬ ಸುದ್ದಿಯಿದೆ.[ಯಾಹೂ ತನ್ನ ಬೆಂಗಳೂರು ಕಚೇರಿ ಮುಚ್ಚುತ್ತಿಲ್ಲ]

ಗೂಗಲ್ ನ ಪ್ರಭಾವಿ ಉದ್ಯೋಗಿಯಾಗಿದ್ದ ಮಾರಿಸ್ಸಾ ಮೇಯರ್ ಯಾಹೂ ಸಂಸ್ಥೆ ಸಿಇಒ ಆದಾಗ ಎಲ್ಲರೂ ಕೊಂಡಾಡಿದ್ದರು. ಆದರೆ, ಮಾರಿಸ್ಸಾ ಕೈಲಿ ಬೆತ್ತ ಹಿಡಿದು ಉದ್ಯೋಗಿಗಳಿಗೆ ಕಟ್ಟುನಿಟ್ಟಾದ ನಿಯಮ ಹೇರುತ್ತಿದ್ದಂತೆ ಎಲ್ಲರೂ ತಿರುಗಿ ಬಿದ್ದರು. ಜಾಗತಿಕವಾಗಿ ಯಾವ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಎಂಬ 'ಅಸ್ತಿತ್ವ' ದ ಪ್ರಶ್ನೆಗೆ ಯಾಹೂಗೆ ಕಾಡುತ್ತಿದೆ.

ಯಾಹೂ ಷೇರುಗಳು ಸತತ ಕುಸಿಯುತ್ತಿದ್ದು 2014ರಿಂದ ಶೇ 40ರಷ್ಟು ಕೆಳಗಿಳಿದಿದೆ. ಮೇಯರ್ ಕಾಲದಲ್ಲಿ 3 ಬಿಲಿಯನ್ ಡಾಲರ್ ಖರ್ಚು ಮಾಡಿ 40 ಕಂಪನಿಗಳನ್ನು ಯಾಹೂ ತನ್ನ ತೆಕ್ಕೆಗೆ ಹಾಕಿಕೊಂಡರೂ ಏಳಿಗೆ ಕಂಡಿಲ್ಲ.

ಯಾಹೂ ಖರೀದಿಗೆ ಮುಂದಾದ ಸಂಸ್ಥೆಗಳು

ಯಾಹೂ ಖರೀದಿಗೆ ಮುಂದಾದ ಸಂಸ್ಥೆಗಳು

ಈ ನಡುವೆ ಯಾಹೂ ಸಂಸ್ಥೆ ಖರೀದಿ ಯತ್ನ ಕೂಡಾ ತರೆ ಮರೆಯಲ್ಲಿ ನಡೆದಿದೆ. ವಿಶ್ವದ ಪ್ರಭಾವಿ ತಂತ್ರಜ್ಞಾನ ಮಹಿಳೆಯರ ಪೈಕಿ ಒಬ್ಬರೆನಿಸಿರುವ ಮರಿಸ್ಸಾಗೆ ಯಾಹೂ ಸಂಸ್ಥೆ ಹಾಗೂ ತನ್ನ ಕುರ್ಚಿಯನ್ನು ಉಳಿಸಿಕೊಳ್ಳುವ ಭಾರಿ ಹೊರೆ ಬಿದ್ದಿದೆ.

ವೇರಿಜನ್, ಎಟಿ ಅಂಡ್ ಟಿ, ಕಾಮ್ ಕಾಸ್ಟ್ ಸಂಸ್ಥೆಗಳು ಯಾಹೂ ಖರೀದಿಗೆ ಮುಂದಾಗಬಹುದು ಎಂಬ ನಿರೀಕ್ಷೆಯಿದೆ. ಅದು ಕೂಡಾ ಯಾಹೂ ಸಂಸ್ಥೆಯ ಉದ್ಯೋಗ ಕಡಿತ, ಬದಲಾವಣೆಗಳ ಪ್ರಕ್ರಿಯೆ ಮುಗಿದ ಬಳಿಕ ಮಾತುಕತೆ ನಡೆಯಬಹುದು.

ಮೇಯರ್ ವಿರುದ್ಧ ಹೆಚ್ಚಾದ ಪ್ರತಿಭಟನಾ ಕೂಗು

ಮೇಯರ್ ವಿರುದ್ಧ ಹೆಚ್ಚಾದ ಪ್ರತಿಭಟನಾ ಕೂಗು

ಷೇರುದಾರರು ಸಿಇಒ ಮರಿಸ್ಸಾ ಮೇಯರ್ ತಲೆದಂಡಕ್ಕಾಗಿ ಆಗ್ರಹಿಸುತ್ತಿದ್ದಾರೆ. ಪಿಂಕ್ ಸ್ಲಿಪ್ ಮೇಳ ಮುಕ್ತಾಯವಾದರೂ ಸುಮಾರು 9,000ಕ್ಕೂ ಅಧಿಕ ಉದ್ಯೋಗಗಳಿರುತ್ತಾರೆ. ಇದರ ಬದಲಿಗೆ 3,000 ಉದ್ಯೋಗಿಗಳಿದ್ದರೆ ಸಾಕು ಎಂದು ಷೇರುದಾರರು ಹೇಳಿದ್ದಾರೆ. ಮರಿಸ್ಸಾ ಕೂಡಾ ಬೇಡದ ವಿಭಾಗಗಳನ್ನು ಕತ್ತರಿಸಿ, ಚಿಕ್ಕ ಚೊಕ್ಕ ಯಾಹೂ ಸಂಸ್ಥೆ ನಮಗೆ ಈಗ ಬೇಕಿದೆ ಎಂದು ಹೇಳಿದ್ದಾರೆ.

ಯಾಹೂಗೆ ನಾಲ್ಕನೇ ತ್ರೈಮಾಸಿಕದ ನಷ್ಟ

ಯಾಹೂಗೆ ನಾಲ್ಕನೇ ತ್ರೈಮಾಸಿಕದ ನಷ್ಟ

ಕ್ಯಾಲಿಫೋರ್ನಿಯಾದ ಸನ್ನಿವೇಲ್ ನಲ್ಲಿರುವ ಯಾಹೂ ಸಂಸ್ಥೆ ನಾಲ್ಕನೇ ತ್ರೈಮಾಸಿಕದಲ್ಲಿ 4.4 ಬಿಲಿಯನ್ ಡಾಲರ್ ಕಳೆದುಕೊಂಡಿದೆ. ಇದರಲ್ಲಿ ಮೇಯರ್ ಅವರಿಂದ 1.2 ಬಿಲಿಯನ್ ಡಾಲರ್ ನಷ್ಟವಾಗಿದೆ ಎಂದು ಷೇರುದಾರರು ದೂರಿದ್ದಾರೆ. 2013ರಲ್ಲಿ ಯಾಹೂ ಪಾಲಾದ ಬ್ಲಾಗಿಂಗ್ ಸರ್ವೀಸ್ Tumblr ನಿಂದ ಕೂಡಾ 230 ಮಿಲಿಯನ್ ಡಾಲರ್ ನಷ್ಟವಾಗಿದೆ.

ಯಾಹೂ ಅಧಃಪತನಕ್ಕೆ ಏನು ಕಾರಣ?

ಯಾಹೂ ಅಧಃಪತನಕ್ಕೆ ಏನು ಕಾರಣ?

2005ರಲ್ಲಿ ಚೀನಾದ ಸ್ಟಾರ್ಟ್ ಅಪ್ ಆಗಿದ್ದ ಆಲಿಬಾಬಾ ಸಂಸ್ಥೆ ಮೇಲೆ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಿ, ಶೇ 40ರಷ್ಟು ಪಾಲು ಹೊಂದಿದ್ದ ಯಾಹೂ ಲೆಕ್ಕಾಚಾರ ಉಲ್ಟಾ ಆಯಿತು. 2012ರಲ್ಲಿ 7.6 ಬಿಲಿಯನ್ ಡಾಲರ್ ಮೊತ್ತಕ್ಕೆ ತನ್ನ ಪಾಲನ್ನು ಆಲಿಬಾಬಾಗೆ ನೀಡಿ ಕೈತೊಳೆದುಕೊಂಡಿತು. ಈಗ ಈ ಷೇರುಗಳ ಬೆಲೆ 25 ಬಿಲಿಯನ್ ಡಾಲರ್ ದಾಡುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The long-anticipated purge, announced on Tuesday, will jettison about 15 per cent of Yahoo’s workforce along with an assortment of services.Yahoo is laying off about 1,700 employees and shedding some of its excess baggage in a shake-up likely to determine whether CEO Marissa Mayer can save her own job.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more