ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಸಂಸ್ಥೆಯಿಂದ ಸಿಬ್ಬಂದಿಗಳಿಗೆ ಒಂದಂಕಿ ಸಂಬಳ ಏರಿಕೆ

|
Google Oneindia Kannada News

ಬೆಂಗಳೂರು, ನ.9: ಬೆಂಗಳೂರು ಮೂಲದ ಸಾಫ್ಟ್ ವೇರ್ ರಫ್ತು ಸಂಸ್ಥೆ ವಿಪ್ರೋ ತನ್ನ ಉದ್ಯೋಗಿಗಳಿಗೆ ಸಂಬಳ ಏರಿಕೆ ಮಾಡಲು ಮುಂದಾಗಿದೆ. ಉತ್ತಮ ಕಾರ್ಯಕ್ಷಮತೆ ಹೊಂದಿರುವ ಉದ್ಯೋಗಿಗಳಿಗೆ ಡಿಸೆಂಬರ್ 1ರಿಂದ ಸಂಬಳ ಏರಿಕೆ ಸಿಗಲಿದೆ. ಸರಿ ಸುಮಾರು ಶೇ 80ಕ್ಕೂ ಅಧಿಕ ಮಂದಿಗೆ ಈ ಬಾರಿ ಸಂಬಳ ಹೆಚ್ಚಾಗಲಿದೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.

ಕೊವಿಡ್19 ಸಂಕಷ್ಟದ ನಡುವೆ ಆರ್ಥಿಕ ಸಂಕಷ್ಟದಿಂದ ಲಕ್ಷಾಂತರ ಸಿಬ್ಬಂದಿಗಳಿಗೆ ಬಡ್ತಿ, ಸಂಬಳ ಏರಿಕೆ ತಡೆ ಹಿಡಿಯಲಾಗಿತ್ತು. ಬೆಂಗಳೂರು ಮೂಲದ ಐಟಿ ಸಂಸ್ಥೆಯಾಗಿರುವ ವಿಪ್ರೋ, ಜಾಗತಿಕ ಮಟ್ಟದಲ್ಲಿ 1.85ಲಕ್ಷ ಸಿಬ್ಬಂದಿ ಹೊಂದಿದ್ದು ಕೊವಿಡ್ 19 ಸಂಕಷ್ಟದ ನಡುವೆ ಉದ್ಯೋಗ ಕಡಿತ ಮಾಡಿರಲಿಲ್ಲ. ಆದರೆ, ಉದ್ಯೋಗದಲ್ಲಿ ಬಡ್ತಿ, ಸಂಬಳ ಏರಿಕೆಯನ್ನು ತಡೆ ಹಿಡಿಯಲಾಗಿತ್ತು.

ಲಕ್ಷಾಂತರ ಸಿಬ್ಬಂದಿಗೆ ಸಂಬಳ ಏರಿಕೆ, ಬಡ್ತಿ ಘೋಷಿಸಿದ ಇನ್ಫೋಸಿಸ್ ಲಕ್ಷಾಂತರ ಸಿಬ್ಬಂದಿಗೆ ಸಂಬಳ ಏರಿಕೆ, ಬಡ್ತಿ ಘೋಷಿಸಿದ ಇನ್ಫೋಸಿಸ್

ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳಾದ ಇನ್ಫೋಸಿಸ್ ಹಾಗೂ ಟಿಸಿಎಸ್ ಈಗಾಗಲೇ ತಮ್ಮ ಉದ್ಯೋಗಿಗಳಿಗೆ ಸಂಬಳ ಏರಿಕೆ, ವೇರಿಯಬಲ್ ಪೇ ಹೆಚ್ಚಳ, ಬಡ್ತಿ ಘೋಷಿಸಿದ ಬೆನ್ನಲ್ಲೇ ವಿಪ್ರೋ ಕೂಡಾ ಒಂದಂಕಿಯ ಸಂಬಳ ಏರಿಕೆ ಸುಳಿವು ನೀಡಿದೆ. ವಿಪ್ರೋ ಸಿಬ್ಬಂದಿಗಳಲಿ ಎ ಇಂದ ಇ ತನಕ ವಿಭಾಗಿಸಲಾಗಿದೆ. ಬಿ3 ಮಟ್ಟದಲ್ಲಿ ಸುಮಾರು ಶೇ 80ರಷ್ಟು ಉದ್ಯೋಗಿಗಳಿದ್ದು, ಎಲ್ಲರಿಗೂ ಸಂಬಳ ಏರಿಕೆಯಾಗಲಿದೆ.

Wipro To Roll Out Single Digit Salary Hike

Recommended Video

Joe Biden Family Connection with India : ನಮ್ ಕುಟುಂಬದವರು ಇನ್ನೂ ಮುಂಬೈ ಅಲ್ಲಿ ಇದಾರೆ! | Oneindia Kannada

''ಕೊವಿಡ್ ಪೂರ್ವ ಪರಿಸ್ಥಿತಿಗೆ ನಿಧಾನವಾಗಿ ಐಟಿ ಕ್ಷೇತ್ರ ಮರಳುತ್ತಿದೆ. ಜ್ಯೂನಿಯರ್ ಹಾಗೂ ಮಧ್ಯಮ ಮಟ್ಟದ ವೃತ್ತಿಪರರ ನೇಮಕಾತಿ ಆರಂಭವಾಗಿದೆ'' ಎಂದು ಮಾನವ ಸಂಪನ್ಮೂಲ ಸಂಸ್ಥೆXphenoda ಕಮಲ್ ಕಾಮತ್ ಅವರು ಅಭಿಪ್ರಾಯಪಟ್ಟಿದ್ದಾರೆ.

English summary
Bengaluru-headquartered IT services exporter Wipro to roll out single digit pay hike for high performers with promotions effective December 1 reports ET.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X