India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?

|
Google Oneindia Kannada News

ನವದೆಹಲಿ, ಮೇ 25: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಬಹಳಷ್ಟು ಕಡಿತ ಮಾಡಿರುವ ಕೇಂದ್ರ ಸರಕಾರದಿಂದ ವಿಮಾನ ಇಂಧನ ತೆರಿಗೆ ಇಳಿಸುವ ನಿರೀಕ್ಷೆ ಹುಟ್ಟಿಕೊಂಡಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯ ಅವರು ಜೆಟ್ ಇಂಧನ ಅಥವಾ ಏವಿಯೇಶನ್ ಟರ್ಬೈನ್ ಫುಯೆಲ್ (ಎಟಿಎಫ್) ಮೇಲಿನ ತೆರಿಗೆಯನ್ನು ಕಡಿತ ಮಾಡುವ ಇಚ್ಛೆ ಹೊಂದಿದ್ದಾರೆ. ಆದರೆ, ಹಣಕಾಸು ಸಚಿವಾಲಯದಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ. ಹೀಗಾಗಿ, ವೈಮಾನಿಕ ಇಂಧನ ಸದ್ಯ ದುಬಾರಿಯಾಗಿಯೇ ಉಳಿದಿದೆ. ವಿಮಾನ ಪ್ರಯಾಣ ಕೂಡ ದುಬಾರಿಯಾಗಿಯೇ ಇರಲಿದೆ.

ಪೆಟ್ರೋಲ್‌ನಂತೆ ಜೆಟ್ ಇಂಧನದ ಮೇಲೆ ವಿಪರೀತ ತೆರಿಗೆಗಳಿವೆ. ಇತ್ತೀಚೆಗೆ ಸುಮಾರು 23 ರಾಜ್ಯಗಳು ಜೆಟ್ ಫುಯೆಲ್ ಮೇಲೆ ವ್ಯಾಟ್ ಅನ್ನು ಶೇ. 20-30ರಷ್ಟು ಇಳಿಕೆ ಮಾಡಿವೆ. ಹೀಗಾಗಿ, ಕೇಂದ್ರ ಸರಕಾರದ ಮೇಲೆ ತೆರಿಗೆ ಕಡಿತಕ್ಕೆ ವಿಪರೀತ ಒತ್ತಡ ಬರುತ್ತಿವೆ. ನಾಗರಿಕ ವಿಮಾನಯಾನ ಸಚಿವಾಲಯ ಈ ನಿಟ್ಟಿನಲ್ಲಿ ಹಣಕಾಸು ಸಚಿವಾಲಯಕ್ಕೆ ಮನವಿ ಕೂಡ ಮಾಡಿದೆ. ಆದರೆ, ಯಾವ ನಿರ್ಧಾರಕ್ಕೂ ಸದ್ಯ ಬಂದಿಲ್ಲ ಎಂದು ಎನ್‌ಡಿಟಿವಿ ವಾಹಿನಿ ತನ್ನ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿದೆ.

ಬಂಡವಾಳ ಹೂಡಿಕೆದಾರರನ್ನು ಕರ್ನಾಟಕ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತದೆ: ಸಿಎಂಬಂಡವಾಳ ಹೂಡಿಕೆದಾರರನ್ನು ಕರ್ನಾಟಕ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತದೆ: ಸಿಎಂ

ಏರ್‌ಲೈನ್ ಅಥವಾ ವೈಮಾನಿಕ ಕಂಪನಿಯ ಕಾರ್ಯನಿರ್ವಹಣೆಯ ವೆಚ್ಚದಲ್ಲಿ ಶೇ. 40ರಷ್ಟು ಪಾಲು ಜೆಟ್ ಇಂಧನದ್ದೇ ಆಗಿರುತ್ತದೆ. ಇದೀಗ ಜಾಗತಿಕವಾಗಿ ಪೆಟ್ರೋಲ್, ಡೀಸೆಲ್‌ನಂತೆ ಜೆಟ್ ಇಂಧನದ ದರಗಳೂ ದಾಖಲೆ ಮಟ್ಟಕ್ಕೆ ಹೆಚ್ಚಾಗಿವೆ. ಭಾರತ ತನಗೆ ಬೇಕಾದ ತೈಲದಲ್ಲಿ ಶೇ. 85ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ, ಅಂತರರಾಷ್ಟ್ರೀಯ ತೈಲಮಾರುಕಟ್ಟೆಯ ಮೇಲೆ ಭಾರತದ ಇಂಧನಕ್ಕಾಗಿ ಅವಲಂಬಿತವಾಗಿದೆ. ಭಾರತದಲ್ಲಿ ತೈಲೋತ್ಪನ್ನಗಳ ದರ ತಗ್ಗಿಸಬೇಕಾದರೆ ತೆರಿಗೆ ಕಡಿತ ಅಥವಾ ಸಬ್ಸಿಡಿ ಬಿಟ್ಟರೆ ಅನ್ಯ ಮಾರ್ಗ ಇಲ್ಲವಾಗಿದೆ.

ಭಾರತದಲ್ಲಿ ಸದ್ಯ ಬಿಜೆಪಿ ಆಡಳಿತ ಇರುವ ಬಹುತೇಕ ರಾಜ್ಯಗಳು ಜೆಟ್ ಇಂಧನದ ಮೇಲಿನ ವ್ಯಾಟ್ ತೆರಿಗೆಯನ್ನು ಇಳಿಸಿವೆ. ಆದರೆ, ಬಹಳ ಪ್ರಮುಖವಾಗಿರುವ ಮತ್ತು ಅತಿ ಹೆಚ್ಚು ಕಾರ್ಯನಿರ್ವಹಣೆಯ ವಿಮಾನ ನಿಲ್ದಾಣಗಳೆನಿಸಿರುವ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತಾದಲ್ಲಿ ಜೆಟ್ ಇಂಧನ ದುಬಾರಿಯಾಗಿಯೇ ಇದೆ.

ಬೆಂಗಳೂರಿನ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ದಾಖಲೆ ನಿರ್ಮಿಸಿದ 'Ancestral'ಬೆಂಗಳೂರಿನ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ದಾಖಲೆ ನಿರ್ಮಿಸಿದ 'Ancestral'

ಪೆಟ್ರೋಲ್, ಡೀಸೆಲ್‌ನಂತೆ ಎಟಿಎಫ್ ಅಥವಾ ಜೆಟ್ ಇಂಧನಕ್ಕೆ ಕೇಂದ್ರದ ಅಬಕಾರಿ ಸುಂಕ ಮತ್ತು ರಾಜ್ಯಗಳ ವ್ಯಾಟ್ ತೆರಿಗೆ ಹೇರಲಾಗುತ್ತದೆ. 2017ರಲ್ಲಿ ಜಾರಿಗೆ ಬಂದ ಜಿಎಸ್‌ಟಿ ತೆರಿಗೆ ವ್ಯಾಪ್ತಿಯಿಂದ ಕಚ್ಛಾ ತೈಲ ನೈಸರ್ಗಿಕ ಅನಿಲ, ಪೆಟ್ರೋಲ್, ಡೀಸೆಲ್ ಮತ್ತು ಜೆಟ್ ಇಂಧನ ಈ ಐದು ವಸ್ತುಗಳನ್ನು ಹೊರಗಿಡಲಾಗಿದೆ. ರಾಜ್ಯ ಸರಕಾರಗಳ ತೆರಿಗೆ ಸಂಗ್ರಹಕ್ಕೆ ಇವು ಪ್ರಮುಖ ಮೂಲಗಳಾದ್ದರಿಂದ ಇವುಗಳಿಗೆ ಜಿಎಸ್‌ಟಿ ಅನ್ವಯ ಮಾಡಿಲ್ಲ.

Will Central Govt Cut Jet Fuel Tax

ನಾಗರಿಕ ವಿಮಾನಯಾನ ಸಚಿವಾಲಯ ಬಹಳ ದಿನಗಳಿಂದಲೂ ಜೆಟ್ ಇಂಧನನ್ನು ಜಿಎಸ್‌ಟಿ ವ್ಯಾಪ್ತಿ ತರಬೇಕೆಂದು ಒತ್ತಾಯಿಸುತ್ತಾ ಬಂದಿದೆ. ನೈಸರ್ಗಿಕ ಅನಿಲ ಅಥವಾ ನ್ಯಾಚುರಲ್ ಗ್ಯಾಸ್ ಅನ್ನೂ ಜಿಎಸ್‌ಟಿಗೆ ಸೇರಿಸಬೇಕೆಂಬ ಕೂಗು ಇದೆ. ಅಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ಕೂಡ ಜಿಎಸ್‌ಟಿ ವ್ಯಾಪ್ತಿಗೆ ಬರಬೇಕೆಂಬ ಅನಿಸಿಕೆಗಳೂ ಇವೆ. ಆದರೆ, ವಿವಿಧ ರಾಜ್ಯ ಸರಕಾರಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಜಿಎಸ್‌ಟಿ ವ್ಯಾಪ್ತಿಗೆ ಬಂದರೆ ತೆರಿಗೆಯಲ್ಲಿ ಹೆಚ್ಚಿನ ಪಾಲು ಕೇಂದ್ರಕ್ಕೆ ಹೋಗುತ್ತದೆ. ರಾಜ್ಯ ಸರಕಾರಿಗಳಿಗೆ ಹೆಚ್ಚಿನ ತೆರಿಗೆ ವಿಧಿಸಲು ಅಧಿಕಾರ ಇರುವುದಿಲ್ಲ ಎಂಬ ಆತಂಕ ಇದೆ.

(ಒನ್ಇಂಡಿಯಾ ಸುದ್ದಿ)

English summary
Finance ministry has not yet taken a view on the civil aviation ministry's plea for tax cuts on jet fuel or aviation turbine fuel to bring down prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X