ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ ಬ್ಯಾಂಕ್ ಜತೆ ಇನ್ನೆರಡು ಬ್ಯಾಂಕ್ ಹೋಲಿಕೆ, ಇದು ಗೆಲ್ಲೋ ಆಟವಲ್ಲ!

By ಕೆ.ಜಿ.ಕೃಪಾಲ್
|
Google Oneindia Kannada News

ಒಳ್ಳೆಯವರಾಗಿ, ಸಾಧನೆ ಮಾಡಿದರೂ ಅದನ್ನು ಗುರುತಿಸಿ ಶಿಕ್ಷೆ ವಿಧಿಸುವಂತಾಗಿದೆ ಕೇಂದ್ರ ಸರಕಾರದ ತ್ರಿವಳಿ ಬ್ಯಾಂಕ್ ಗಳ ವಿಲೀನದ ನಿರ್ಧಾರ. ಕರ್ನಾಟಕ ತವರಿನ ವಿಜಯ ಬ್ಯಾಂಕ್ ಸರಕಾರಿ ವಲಯದ ಬ್ಯಾಂಕ್ ಗಳಲ್ಲಿ ಉತ್ತಮವಾದ ಸ್ಥಾನ ಗಳಿಸಿದೆ.

ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ವಿಜಯ ಬ್ಯಾಂಕ್ ಒಂದೇ ಹಿಂದಿನ ವರ್ಷ ಡಿವಿಡೆಂಡ್ ಘೋಷಿಸಿ, ವಿತರಿಸಿದ ಬ್ಯಾಂಕ್ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಹಾಗೆ ಇಂಡಿಯನ್ ಬ್ಯಾಂಕ್ ಸಹ ಪ್ರತಿ ಷೇರಿಗೆ 6 ರುಪಾಯಿ ಡಿವಿಡೆಂಡ್ (ಲಾಭಾಂಶ) ಪ್ರಕಟಿಸಿ, ನಂತರ ವಿತರಣೆ ಮಾಡದೆ ಹಿಂಪಡೆಯಿತು. ಇದು ಕಾರ್ಪೊರೇಟ್ ವಲಯದ ನೀತಿ ಪಾಲನೆ ಲೋಪ ಎನ್ನಬಹುದು. ಆದರೆ ಸರಕಾರಿ ವಲಯದ ಬ್ಯಾಂಕ್ ಆದ್ದರಿಂದ ಜಾರಿಕೊಂಡಿತು.

ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ವಿಲೀನವಿಜಯಾ ಬ್ಯಾಂಕ್, ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ವಿಲೀನ

ಬ್ಯಾಂಕ್ ಗಳು ಈ ಹಿಂದೆ ಇದ್ದಂತೆ ಈಗಲೂ ಸೇವಾ ವಲಯ ಎಂದು ಪರಿಗಣಿಸಿದರೂ ಸೇವೆ ಎಂಬುದು ಶುಲ್ಕಾಧಾರಿತ, ಕೆಲವು ವೇಳೆ ಶುಲ್ಕಭರಿತವು ಆಗುತ್ತಿದೆ. ಆದ್ದರಿಂದಲೇ ಷರತ್ತು-ನಿಬಂಧನೆಗಳು ಅನ್ವಯ ಎಂಬುದು ಒಳಗೊಂಡಿರುತ್ತದೆ. ಒಟ್ಟಿನಲ್ಲಿ ಅಗೋಚರವಾದ ರೀತಿಯಲ್ಲಿ ಶುಲ್ಕವನ್ನು ವಿಧಿಸಲಾಗುತ್ತಿದೆ.

ಗ್ರಾಹಕರಿಗೆ ಹಲವು ರೀತಿ ಕಿರಿಕಿರಿ

ಗ್ರಾಹಕರಿಗೆ ಹಲವು ರೀತಿ ಕಿರಿಕಿರಿ

ನೆಟ್ ಬ್ಯಾಂಕಿಂಗ್ ಹೆಸರಿನಲ್ಲಿ ಕೆಲವು ಬಿಲ್ ಪಾವತಿಗೂ "ಕನ್ವಿನಿಯನ್ಸ್ ಫೀ" ಎಂದು ಸಂಗ್ರಹಿಸಲಾಗುವುದು. ಹಣ ವರ್ಗಾವಣೆಗೂ ಶುಲ್ಕ ವಸೂಲು ಮಾಡಲಾಗುವುದು. ಒಂದು ಬ್ಯಾಂಕ್ ನ ಚೆಕ್ ಅನ್ನು ಅದೇ ಬ್ಯಾಂಕ್ ನ ಇನ್ನೊಂದು ಶಾಖೆಯಲ್ಲಿ ಕ್ಲಿಯರಿಂಗ್ ಗೂ ದಿನಗಟ್ಟಲೆ ಕಾಯಬೇಕಾದ ತಾಂತ್ರಿಕತೆಯ ಅಡಚಣೆಯನ್ನು ಸಹ ಗ್ರಾಹಕರು ಅನುಭವಿಸುವಂತಾಗಿದೆ.

ಅಧಿಕಾರಿಗಳಲ್ಲಿ ಜವಾಬ್ದಾರಿ ಕ್ಷೀಣ

ಅಧಿಕಾರಿಗಳಲ್ಲಿ ಜವಾಬ್ದಾರಿ ಕ್ಷೀಣ

ಇಂತಹ ವಾತಾವರಣದಲ್ಲಿ ಗ್ರಾಹಕರನ್ನು ಗುರಿಯಾಗಿಸಿಕೊಂಡು ತಮ್ಮ ಖಾತೆಯಲ್ಲಿನ ಹಣವನ್ನು ಹಿಂಪಡೆದರೂ ಶುಲ್ಕ ನೀಡುವುದು ಸಹ ಕೆಲವು ಬ್ಯಾಂಕ್ ಗಳು ಅಳವಡಿಸಿವೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆ, ತಾಂತ್ರಿಕತೆ ಮತ್ತು ಹೆಚ್ಚಾದ ಬ್ಯಾಂಕ್ ನ ಗಾತ್ರ ಅಧಿಕಾರಿಗಳಲ್ಲಿ ಜವಾಬ್ದಾರಿಯನ್ನು ಕ್ಷೀಣಗೊಳ್ಳುವಂತೆ ಮಾಡುತ್ತಿದೆ. ಸೇವೆ ಎಂಬುದು ಕಣ್ಮರೆಯಾಗುತ್ತಿದೆ ಎಂಬುದು ಎಲ್ಲರ ಅನುಭವ, ಅನಿಸಿಕೆ.

ಕನ್ನಡ ನೆಲದ ವಿಜಯಾ ಬ್ಯಾಂಕ್ ಗೆ ಏಕೆ ಹೀಗೆ ವಿಲೀನದ ಶಿಕ್ಷೆ?ಕನ್ನಡ ನೆಲದ ವಿಜಯಾ ಬ್ಯಾಂಕ್ ಗೆ ಏಕೆ ಹೀಗೆ ವಿಲೀನದ ಶಿಕ್ಷೆ?

ಮೂರೂ ಬ್ಯಾಂಕ್ ಗಳ ಹೋಲಿಕೆ ಇಲ್ಲಿದೆ

ಮೂರೂ ಬ್ಯಾಂಕ್ ಗಳ ಹೋಲಿಕೆ ಇಲ್ಲಿದೆ

ಇಂಥ ಸನ್ನಿವೇಶದಲ್ಲಿ ಮೂರು ವಿಭಿನ್ನ ಸ್ಥಿತಿಯಲ್ಲಿರುವ ಬ್ಯಾಂಕ್ ಗಳ ವಿಲೀನಕ್ಕೆ ಪ್ರಸ್ತಾವ ಮಾಡಲಾಗಿದೆ. ಈಗ ವಿಲೀನಗೊಳ್ಳಲಿರುವ ಮೂರೂ ಬ್ಯಾಂಕ್ ಗಳಲ್ಲಿ ಒಂದೊಂದು ಬ್ಯಾಂಕ್ ಒಂದೊಂದು ರೀತಿಯ ಅಂಕಿ ಅಂಶಗಳನ್ನು ಹೊಂದಿದ್ದು ಸಾಮ್ಯತೆಯನ್ನು ಹೊಂದಿಲ್ಲ ಎಂಬುದನ್ನು ಈ ಮೇಲಿನ ಕೋಷ್ಟಕದಲ್ಲಿ ಕಾಣಬಹುದು.

ವಿಲೀನಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆಯೇ ಇಲ್ಲ

ವಿಲೀನಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆಯೇ ಇಲ್ಲ

ಈಗ ಪ್ರಕಟವಾಗಿರುವುದು ಕೇವಲ ತೇಲಿಬಿಟ್ಟ ಯೋಜನೆಯಾಗಿದೆ. ಮುಂದೆ ಯಾವ ಅನುಪಾತದಲ್ಲಿ ವಿಲೀನಗೊಳಿಸಲಾಗುವುದು, ಯಾವ ಬ್ಯಾಂಕ್ ನ ಹೆಸರಿನಲ್ಲಿ ನಡೆಸಲಾಗುವುದು. ಇದರ ಕೇಂದ್ರ ಕಚೇರಿ ಎಲ್ಲಿರುವುದು ಮುಂತಾದ ಗೊಂದಲಗಳು ಉದ್ಭವಿಸಿರುವುದನ್ನು ಬುಧವಾರದಂದು ವಿಜಯ ಬ್ಯಾಂಕ್ (ರೂ.52.70), ಬ್ಯಾಂಕ್ ಆಫ್ ಬರೋಡ ( ದಿನದ ಕನಿಷ್ಠ ಬೆಲೆ ರೂ.110.50), ದೇನಾ ಬ್ಯಾಂಕ್( ರೂ.17.35ರ ಕನಿಷ್ಠ ) ಗಳು ಕಂಡಿರುವ ಭಾರಿ ಕುಸಿತ ದೃಢಪಡಿಸುತ್ತದೆ.

English summary
There is a proposal by central government about three bank merger (Vijaya Bank, Bank of Baroda and Dena Bank). But this will not benefit Vijaya bank, why? Here is an analytical story by stock broker and columnist K.G.Krupal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X