• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊದಲ ತ್ರೈಮಾಸಿಕ ಜಿಡಿಪಿ ನೋಡಿ ಖುಷಿ ಪಡುವ ಮೊದಲು...

|

ಮೊದಲ ತ್ರೈಮಾಸಿಕ (ಏಪ್ರಿಲ್ ನಿಂದ ಜೂನ್ ವರೆಗೆ) ಜಿಡಿಪಿ ಅಭಿವೃದ್ಧಿ ದರದ ಬಗ್ಗೆ ಈಚೆಗೆ ಮಾಹಿತಿ ಹೊರಬಂದಿದ್ದು, ಕಳೆದ ಕೆಲ ವರ್ಷಗಳಲ್ಲೇ ಇದು ಒಳ್ಳೆ ದರ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ ಆರ್ಥಿಕ ತಜ್ಞರು ಹೇಳುವ ಪ್ರಕಾರ ಮೊದಲ ತ್ರೈಮಾಸಿಕದ ಜಿಡಿಪಿ ಸಂಖ್ಯೆಗೆ ಅಂಥ ಪ್ರಾಮುಖ್ಯವೇ ಇಲ್ಲ.

ಹಾಗೆ ನೋಡಿದರೆ ನಾಲ್ಕನೇ ತ್ರೈ ಮಾಸಿಕದ ಸಂಖ್ಯೆ ಹೊರಬಿದ್ದಾಗಲೇ ಇಡೀ ವರ್ಷದ ಸಾಧನೆ ಏನಾಗಬಹುದು ಏನಾಗಿದೆ ಎಂದು ಲೆಕ್ಕ ಮಾಡಬಹುದಷ್ಟೇ. ಆದರೆ ಆರ್ಥಿಕ ತಜ್ಞರು ಮೊದಲ ತ್ರೈ ಮಾಸಿಕದಲ್ಲಿ ಇಂಥಿಂಥ ಬದಲಾವಣೆ ಎಂದು ಗುರುತಿಸಿ, ಅದನ್ನೇ ಮುಖ್ಯವಾಗಿ ಪರಿಗಣಿಸುವುದಿಲ್ಲ.

ಜಿಡಿಪಿ ದರ ಪ್ರಗತಿ ಕಂಡಿದ್ದು ಏಕೆ? ಇದು ನಿಜಕ್ಕೂ ಖುಷಿಯ ವಿಚಾರವೇ?

ಜಿಡಿಪಿ ಸಂಖ್ಯೆಯೊಂದೇ ಎಲ್ಲವೂ ನಿರ್ಧಾರ ಮಾಡುವ ಅಂಶ ಅಲ್ಲ. ಯಾವುದೇ ಒಂದು ನಿರ್ದಿಷ್ಟ ಯೋಜನೆಯಿಂದ ಅಥವಾ ನೀತಿಯಿಂದ ಯಾವ ಪರಿಯ ಅನುಕೂಲ ಆಯಿತು ಎಂಬುದನ್ನು ನಿರ್ಧರಿಸುವುದಕ್ಕೆ ಆಗುವುದಿಲ್ಲ. ಆದ್ದರಿಂದ ಸಂಖ್ಯೆಯಲ್ಲಿ ಭಾರೀ ಬದಲಾವಣೆ ಆಯಿತು ಎಂದು ನೋಡುವ ಬದಲಿಗೆ ಅದರ ಒಳಗನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಇತ್ತೀಚೆಗೆ ಏನಾಗಿದೆ ಅಂದರೆ, ಆರ್ಥಿಕ ತಜ್ಞರು ಸಹ ಮಾತನಾಡಲು ಹಿಂಜರಿಯುವಂಥ ಸಂಗತಿಗಳನ್ನು ರಾಜಕಾರಣಿಗಳೇ ಮಾತನಾಡುತ್ತಿದ್ದಾರೆ. ಜಿಡಿಪಿ ಅಭಿವೃದ್ಧಿ ದರದ ಮಾಹಿತಿ ಬಿಡುಗಡೆ ಆದ ತಕ್ಷಣ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ರಾಜಕೀಯ ಮೇಲಾಟ ಶುರು ಆಗುತ್ತದೆ. ಆದರೆ ಜಿಡಿಪಿಯನ್ನು ಸರಿಯಾಗಿ ವ್ಯಾಖ್ಯಾನ ಮಾಡುವುದಕ್ಕೆ ಅರ್ಥಶಾಸ್ತ್ರಜ್ಞರು ರಾತ್ರಿ-ಹಗಲೆನ್ನದೆ ನಿದ್ದೆಗೆಟ್ಟು ಹೊಸ ವಿಧಾನಗಳ ಅಧ್ಯಯನದಲ್ಲಿ ತೊಡಗುತ್ತಾರೆ.

ಆ ಕಾರಣಕ್ಕೆ ಅಂತಲೇ ಹದಿನೇಳನೇ ಶತಮಾನದ ಖ್ಯಾತ ಅರ್ಥಶಾಸ್ತ್ರಜ್ಞ, ಆಧುನಿಕ ಜಿಡಿಪಿ ಅಂದಾಜಿನ ಪಿತಾಮಹ ವಿಲಿಯಂ ಪೆಟ್ಟಿ, 'ಇದು ರಾಜಕೀಯ ಗಣಿತ' ಎಂದು ಕರೆದರು. ಸಾಮಾಜಿಕ ವಿಜ್ಞಾನಿ ಲೆಪೆನಿಸ್ ತನ್ನ ಪುಸ್ತಕದಲ್ಲಿ, ಅಕ್ಷರಶಃ ಹಾಗೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಇದು ರಾಜಕೀಯ ಅಂಕಗಣಿತ. ಸರಕಾರದ ಪರವಾಗಿ ಇದನ್ನು ಲೆಕ್ಕ ಹಾಕುವುದಷ್ಟೇ ಅಲ್ಲ, ಸರಕಾರದ ಚಟುವಟಿಕೆಗೂ ಇದರಿಂದ ಸಹಾಯ ಆಗುತ್ತದೆ. ಅಂಕಿಗಳ ಸಹಾಯದಿಂದ ಆಡಳಿತ ನಡೆಸಲು ಸಹಾಯ ಆಗುತ್ತದೆ ಎಂದಿದ್ದಾರೆ.

ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಭರ್ಜರಿ ನೆಗೆತ

ಆದ್ದರಿಂದ ಈಗಿನ ಜಿಡಿಪಿ ಸಂಖ್ಯೆಗೂ ಹೆಚ್ಚು ಮಹತ್ವ ನೀಡುವ ಅಗತ್ಯ ಇಲ್ಲ. ಈ ಸಂಖ್ಯೆ ಉತ್ತಮವಾಗಿದೆ ಅನ್ನೋದರಲ್ಲಿ ಅನುಮಾನವಿಲ್ಲ. ಆದರೆ ಮೊದಲ ಮೂರು ತಿಂಗಳ ಫಲಿತಾಂಶದ ಆಧಾರದಲ್ಲಿ ಬಾಕಿ ಇರುವ ಒಂಬತ್ತು ತಿಂಗಳ ಅವಧಿಯಲ್ಲೂ ಹೀಗೇ ಇರುತ್ತದೆ ಎಂದು ಹೇಳಲು ಸಾಧ್ಯವೇ?

2016-17 ಹಾಗೂ 2017-18 ಇಳಿಕೆಯತ್ತಲೇ ಸಾಗಿತ್ತು. ಈ ಎರಡು ವರ್ಷ ಸ್ವಲ್ಪ ವಿಭಿನ್ನವಾದದ್ದು. ಏಕೆಂದರೆ ಅಪನಗದೀಕರಣ ಹಾಗೂ ಜಿಡಿಪಿ ಜಾರಿಯ ಪರಿಣಾಮ ಇತ್ತು ಎನ್ನಬಹುದು. ಈ ಬಾರಿ ಉಳಿದ ಅವಧಿಗೆ ಏನಾಗಬಹುದು ಎಂದು ಕಾದು ನೋಡೋಣ.

English summary
April- June 2018 GDP growth rate looking good. But this number does not have significance. Do you know why? Q4 GDP number will give complete picture. So, that will have importance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X