ಪೆಟ್ರೋಲ್‌, ಡೀಸೆಲ್ ಬೆಲೆ 137 ದಿನಗಳ ಬಳಿಕ ಏರಿಕೆ ಆಗಿದ್ದೇಕೆ?

ನವದೆಹಲಿ, ಮಾರ್ಚ್ 22: ರಷ್ಯಾ ಹಾಗೂ ಉಕ್ರೇನ್‌ ಯುದ್ಧದ ನಡುವೆ ಭಾರತದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು 80 ಪೈಸೆ ಏರಿಕೆ ಮಾಡಿದೆ. ಸುಮಾರು ನಾಲ್ಕು ತಿಂಗಳುಗಳ ಬಳಿಕ (137 ದಿನ) ಭಾರತದಲ್ಲಿ ಮೂರು ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್‌ ಹಾಗೂ ಡೀಸೆಲ್ ದರವನ್ನು ಏರಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 96.21ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 87.47 ರೂಪಾಯಿ ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 110.82 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95.00 ರೂಪಾಯಿ ಇದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 102.16 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 92.19 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 105.51 ರೂಪಾಯಿ ಹಾಗೂ ಲೀಟರ್ ಡೀಸೆಲ್ ಡೀಸೆಲ್ ದರ 90.62 ರೂಪಾಯಿ ನಿಗದಿಯಾಗಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 101.42 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 85.01 ರೂಪಾಯಿ ದಾಖಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಸುಮಾರು 40% ಏರಿಕೆಯಾಗಿದ್ದು, ಕೈಗಾರಿಕಾ ಡೀಸೆಲ್ ಬೆಲೆ 25 ರು ಏರಿಕೆ ಮಾಡಲಾಗಿತ್ತು. ಈ ಬೆನ್ನಲ್ಲೇ ಈಗ ಪೆಟ್ರೋಲ್, ಡೀಸೆಲ್ ದರ ಕೂಡಾ ಪರಿಷ್ಕರಿಸಲಾಗಿದೆ. ಸರಿ ಸುಮಾರು 137 ದಿನಗಳ ಬಳಿಕ ಭಾರತದ ಪ್ರಮುಖ ನಗರಗಳಲ್ಲಿ ಇಂಧನ ದರದಲ್ಲಿ ಏರಿಕೆ ಕಂಡು ಬಂದಿದೆ. ಹಾಗಾದರೆ ಇಂಧನ ದರವು ಸುಮಾರು 137 ದಿನಗಳ ಬಳಿಕ ಏರಿಕೆ ಕಂಡಿದ್ದು ಏಕೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ...

 ಇಂಧನ ಬೆಲೆ ಹೆಚ್ಚಳವಾಗಿದ್ದು ಏಕೆ?

ಇಂಧನ ಬೆಲೆ ಹೆಚ್ಚಳವಾಗಿದ್ದು ಏಕೆ?

ರಷ್ಯಾ ಹಾಗೂ ಉಕ್ರೇನ್‌ ಯುದ್ಧದ ನಡುವೆ ಜಾಗತಿಕವಾಗಿ ಕಚ್ಚಾ ತೈಲ ಬೆಲೆಯು ತೀವ್ರ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ತೀವ್ರ ಏರಿಕೆಯಾಗಿರುವುದರಿಂದ ತೈಲ ಮಾರುಕಟ್ಟೆ ಕಂಪನಿಗಳು ನಾಲ್ಕು ತಿಂಗಳ ಅಂತರದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 119.2 ಡಾಲರ್‌ನಂತೆ ಶೇಕಡಾ 45 ರಷ್ಟು ಹೆಚ್ಚಾಗಿದೆ. ಭಾರತದ ಮೂರು ಸರ್ಕಾರಿ ತೈಲ ಕಂಪನಿಗಳು ಕೊನೆಯ ಬಾರಿಗೆ ಇಂಧನ ದರವನ್ನು ಏರಿಕೆ ಮಾಡಿದ ಸಂದರ್ಭದಲ್ಲಿ ಜಾಗತಿಕವಾಗಿ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 81.6 ಡಾಲರ್‌ ಆಗಿತ್ತು. ಭಾರತವು ಶೇಕಡಾ 85 ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳುತ್ತದೆ. ಸಾಮಾನ್ಯವಾಗಿ, ಪೆಟ್ರೋಲಿಯಂ ಉತ್ಪನ್ನಗಳ ಬೆಂಚ್‌ಮಾರ್ಕ್ ಬೆಲೆಗಳ 15 ದಿನಗಳ ಬದಲಾವಣೆಯನ್ನು ನೋಡಿಕೊಂಡು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಆದರೂ ನವೆಂಬರ್ 4 ರಿಂದ ಎರಡೂ ಇಂಧನಗಳ ಬೆಲೆಗಳನ್ನು ಸ್ಥಿರವಾಗಿದ್ದವು. ಕೇಂದ್ರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕದಲ್ಲಿ ಪ್ರತಿ ಲೀಟರ್‌ಗೆ ರೂ 5 ಕಡಿತ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ಲೀಟರ್‌ಗೆ ರೂ 10 ಕಡಿತವನ್ನು ಘೋಷಿಸಿತು. ಇನ್ನು ಪ್ರಮುಖವಾಗಿ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳ ಚುನಾವಣೆ ಮುಗಿಯುವವರೆಗೂ ಬೆಲೆಗಳ ಏರಿಕೆಯನ್ನು ತಡೆಯಲಾಗಿತ್ತು.

 ಇಂಧನ ಬೆಲೆಗಳು ಎಷ್ಟು ಏರಿಕೆಯಾಗುವ ನಿರೀಕ್ಷೆ?

ಇಂಧನ ಬೆಲೆಗಳು ಎಷ್ಟು ಏರಿಕೆಯಾಗುವ ನಿರೀಕ್ಷೆ?

ತೈಲ ಕಂಪನಿಗಳು ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಯಲ್ಲಿ ಪ್ರತಿ ಬ್ಯಾರೆಲ್‌ಗೆ ಪ್ರತಿ 1 ಡಾಲರ್‌ ಹೆಚ್ಚಳವಾದಾಗ ಪೆಟ್ರೋಲ್ ಮತ್ತು ಡೀಸೆಲ್ ಎರಡರ ಬೆಲೆಗಳನ್ನು ಸುಮಾರು 0.52 ರೂ.ಗಳಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ. ಈ ಹಿಂದೆ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಪರಿಷ್ಕರಣೆ ಮಾಡಿದ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ ಸುಮಾರು 37 ಡಾಲರ್‌ ಏರಿಕೆ ಕಂಡಿದ್ದ ಹಿನ್ನೆಲೆ ಪೆಟ್ರೋಲ್ ಮತ್ತು ಡೀಸೆಲ್ ಎರಡರ ಬೆಲೆಯನ್ನು ಕೂಡಾ ಲೀಟರ್‌ಗೆ 19 ರೂಪಾಯಿಗಳಷ್ಟು ಏರಿಕೆ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ. ಆದರೂ ಇತರೆ ವೆಚ್ಚಗಳ ಕಾರಣದಿಂದಾಗಿ ಬೆಲೆಯು ಇನ್ನೂ ಅಧಿಕವಾಗುವ ಸಾಧ್ಯತೆ ಇದೆ. ಗ್ರಾಹಕರ ಮೇಲೆ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಬಹುದು. ಕೊರೊನಾ ವೈರಸ್‌ ಸಾಂಕ್ರಾಮಿಕಕ್ಕೂ ಮುನ್ನ ಇದ್ದ ಪೆಟ್ರೋಲ್‌ ಬೆಲೆಗಿಂತ ಈಗಿನ ಪೆಟ್ರೋಲ್‌ ಬೆಲೆಯು 8 ರೂ ಹೆಚ್ಚಾಗಿದ್ದು, ಡೀಸೆಲ್‌ ಬೆಲೆಯು 6 ರೂ. ಹೆಚ್ಚಾಗಿದೆ.

 ಚಿಲ್ಲರೆ ಖರೀದಿದಾರರು, ಇತತರ ಮೇಲೆ ಡಿಸೇಲ್‌ ಬೆಲೆ ಏರಿಕೆ ಪರಿಣಾಮ

ಚಿಲ್ಲರೆ ಖರೀದಿದಾರರು, ಇತತರ ಮೇಲೆ ಡಿಸೇಲ್‌ ಬೆಲೆ ಏರಿಕೆ ಪರಿಣಾಮ

ಡೀಸೆಲ್‌ ಚಿಲ್ಲರೆ ಬೆಲೆ ಹೆಚ್ಚಳದ ಹೊರತಾಗಿಯೂ, ದೇಶಾದ್ಯಂತ ತೈಲ ಮಾರುಕಟ್ಟೆ ಕಂಪನಿಗಳಲ್ಲಿ ಡೀಸೆಲ್‌ ಬೆಲೆಯು ಸುಮಾರು 25 ರೂ.ಯಷ್ಟು ಏರಿಕೆ ಇದೆ. ಮುಂಬೈನಲ್ಲಿ, ತೈಲ ಮಾರುಕಟ್ಟೆ ಕಂಪನಿಗಳ ಮೂಲಗಳ ಪ್ರಕಾರ, ನಗರದ ಚಿಲ್ಲರೆ ವ್ಯಾಪಾರದಲ್ಲಿ ಪ್ರತಿ ಲೀಟರ್‌ಗೆ 94.14 ರೂ. ಇದೆ. ಹೋಲ್‌ಸೇಲ್‌ ಆಗಿ ಲೀಟರ್‌ಗೆ 122 ರೂ.ಗೆ ಆಗಲಿದೆ. ಭಾರತೀಯ ರೈಲ್ವೇ, ಕಾರ್ಖಾನೆಗಳು, ಮಾಲ್‌ಗಳು, ಸಾರಿಗೆ ಕಂಪನಿಗಳು ಸೇರಿದಂತೆ ಡೀಸೆಲ್‌ನ ಪ್ರಮುಖ ಹೋಲ್‌ಸೇಲ್‌ ವ್ಯಾಪಾರಿಗಳು ರಿಟೈಲ್‌ ಅಥವಾ ಚಿಲ್ಲರೆ ಗ್ರಾಹಕರಿಗಿಂತ ಹೆಚ್ಚಿನ ಬೆಲೆಯನ್ನು ಡೀಸೆಲ್‌ಗೆ ತೆರಬೇಕಾಗುತ್ತದೆ.

 ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ತೀವ್ರ ಹೆಚ್ಚಳ

ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ತೀವ್ರ ಹೆಚ್ಚಳ

ಇನ್ನು ಕಳೆದ ವಾರ ಇಂಧನ ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ತೀವ್ರವಾಗಿ ಹೆಚ್ಚಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ. ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ (ಆರ್‌ಬಿಎಂಎಲ್) ವಕ್ತಾರರ ಪ್ರಕಾರ ರೀಟೈಲ್‌ ಹಾಗೂ ಹೋಲ್‌ಸೇಲ್‌ ಪೆಟ್ರೋಲ್‌ ಖರೀದಿದಾರರ ನಡುವೆ ರೂ 25 ಬೆಲೆ ವ್ಯತ್ಯಾಸದಿಂದಾಗಿ ಇಂಧನ ಬೇಡಿಕೆಯಲ್ಲಿ ತೀವ್ರ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. 2008 ರಲ್ಲಿ ಕಚ್ಚಾ ತೈಲದ ಬೆಲೆಯು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದಾಗ, ರಿಲಯನ್ಸ್ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನೀಡುವ ಸಬ್ಸಿಡಿ ಬೆಲೆಗಳನ್ನು ಹೊಂದಿಸಲು ಸಾಧ್ಯವಾಗದ ಕಾರಣ ಇಂಧನ ಚಿಲ್ಲರೆ ವ್ಯಾಪಾರವನ್ನು ಸ್ಥಗಿತ ಮಾಡಿದೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+