ಮಲ್ಯ ಭಾರತಕ್ಕೆ ಬರಲು ಕನಿಷ್ಠ 10 ವರ್ಷವಾದರೂ ಬೇಕು!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಏಪ್ರಿಲ್ 19: ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಕರೆ ತರಲು ಇಲ್ಲಿನ ತನಿಖಾ ಸಂಸ್ಥೆಗಳಿಗೆ ಕನಿಷ್ಟ 10 ರಿಂದ 15 ವರ್ಷಗಳಾದರೂ ಬೇಕು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿವಿಧ ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿ ಸಾಲ ಮಾಡಿ ಇಂಗ್ಲೆಂಡ್ ಗೆ ತೆರಳಿರುವ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆದುಕೊಂಡು ಬರುವುದು ಅಷ್ಟು ಸುಲಭದ ಕೆಲಸವಲ್ಲ. ಹಲವು ಪ್ರಕರಣಗಳ ವಿಚಾರಣೆಗಾಗಿ ಮಲ್ಯರನ್ನು ಭಾರತಕ್ಕೆ ಕಳಿಸಲು ಯುಕೆ ಸರ್ಕಾರ ಒಪ್ಪಿಗೆಯೋ ನೀಡಿದೆ. ಆದರೆ, ಕಾನೂನಿನ ತೊಡಕಿನಿಂದ ಭಾರತದ ಕೈಕಟ್ಟಿ ಹಾಕಿದೆ.

ರೆಡ್ ಕಾರ್ನರ್ ನೋಟಿಸ್, ಸಮನ್ಸ್, ಘೋಷಿತ ಅಪರಾಧಿ, ಎಫ್ ಐಆರ್ ಯಾವುದಕ್ಕೂ ಬಗ್ಗದೆ ನಾನು ಬಂಡ ಅಲ್ಲ ಬಹದ್ದೂರ್ ಎನ್ನುತ್ತಿರುವ ಮಲ್ಯರನ್ನು ಸುಖಾ ಅತ್ಯಂತ ಪುರಾತನ ಕಾನೂನು ಪಾಲಕ ರಾಷ್ಟ್ರ ಇಂಗ್ಲೆಂಡಿಗೂ ಮಲ್ಯರನ್ನು ಭಾರತಕ್ಕೆ ಕಳಿಸಲು ಕಾನೂಸುಮ್ಮನೆ ಗಡಿಪಾರು ಮಾಡುವುದು ಯುಕೆ ಸರ್ಕಾರಕ್ಕೂ ಬೇಕಿಲ್ಲ. ಜಗತ್ತಿನನಿನ ತೊಡಕು ಎದುರಾಗಿದೆ. ಎಲ್ಲದ್ದಕ್ಕೂ ಎಂಎಲ್ ಎಟಿ ಒಪ್ಪಂದವೇ ಮುಖ್ಯವಾಗಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವೆ 1992ರಲ್ಲಿ ಮಾಡಿಕೊಂಡ ಪರಸ್ಪರ ಕಾನೂನು ಸಹಕಾರ ಒಪ್ಪಂದ (ಎಂಎಲ್ ಎಟಿ) ಈಗ ಮಹತ್ವ ಪಡೆಯಲಿದೆ. ತನಿಖೆ ಅಥವಾ ವಿಚಾರಣೆಗಳಲ್ಲಿ ಪರಸ್ಪರ ಸಾಕ್ಷಿ ಒದಗಿಸಲು ಕಸ್ಟಡಿಯಲ್ಲಿದ್ದರೂ ವ್ಯಕ್ತಿಯನ್ನು ಹಸ್ತಾಂತರಿಸಲು ಬದ್ಧರಾಗಿರುವುದೇ ಈ ಒಪ್ಪಂದದ ಪ್ರಮುಖ ಅಂಶ. ಆದರೆ ವಿಜಯ್ ಮಲ್ಯ ಇಂಗ್ಲೆಂಡ್ ನಲ್ಲಿ ಕಸ್ಟಡಿಯಲ್ಲಿ ಇಲ್ಲ ಎಂಬ ತೊಡಕು ಸಹ ಇದೆ.

ಏನಿದು ಎಂಎಲ್ ಎಟಿ ಒಪ್ಪಂದ

ಏನಿದು ಎಂಎಲ್ ಎಟಿ ಒಪ್ಪಂದ

A mutual legal assistance treaty (MLAT) ಎಂದು ಕರೆಯುವ ಒಪ್ಪಂದಕ್ಕೆ ಭಾರತ ಮತ್ತು ಇಂಗ್ಲೆಂಡ್ 1995ರಲ್ಲಿ ಸಹಿ ಮಾಡಿವೆ. ಈ ಪರಸ್ಪರ ಕಾನೂನು ಸಹಕಾರ ಒಪ್ಪಂದದ ಪ್ರಕಾರ ಎರಡು ದೇಶಕ್ಕೆ ಬೇಕಾದ ವ್ಯಕ್ತಿಯನ್ನು ಪರಸ್ಪರ ಹಸ್ತಾಂತರ ಮಾಡಿಕೊಳ್ಳಲು ಅವಕಾಶ ಇದೆ.

ಇಲ್ಲಿ ತನಕ ಈ ಒಪ್ಪಂದ ಬಳಸಿಕೊಂಡು ಒಬ್ಬರನ್ನು ಮಾತ್ರ ಇಂಗ್ಲೆಂಡಿನಿಂದ ಭಾರತಕ್ಕೆ ಕರೆಸಿಕೊಳ್ಳಲಾಗಿದೆ. ವಿನುಭಾಯಿ ಪಟೇಲ್ ಅವರು ಗಡಿಪಾರು ಮಾಡಿದರೂ ನನ್ನ ಅಭ್ಯಂತರವಿಲ್ಲ ಎಂದಿದ್ದರಿಂದ ಕೆಲಸ ಸುಲಭವಾಗಿತ್ತು.

ಎರಡು ದೇಶದ ಲೆಕ್ಕದಲ್ಲಿ ಅಪರಾಧಿಯಾಗಬೇಕು

ಎರಡು ದೇಶದ ಲೆಕ್ಕದಲ್ಲಿ ಅಪರಾಧಿಯಾಗಬೇಕು

ಎಂಎಲ್‌ಎಟಿ ಒಂದು ವೇಳೆ ಒಂದು ದೇಶ ಮತ್ತೊಂದು ದೇಶಕ್ಕೆ ವ್ಯಕ್ತಿಯನ್ನು ಹಸ್ತಾಂತರ ಮಾಡಬೇಕಿದ್ದರೆ ಆ ವ್ಯಕ್ತಿ ಎರಡು ದೇಶದ ಲೆಕ್ಕದಲ್ಲಿ ಅಪರಾಧಿಯಾಗಿರಬೇಕು. ಆದರೆ ಮಲ್ಯ ಸದ್ಯ ಭಾರತದ ಲೆಕ್ಕದಲ್ಲಿ ಮಾತ್ರ ಅಪರಾಧಿ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಮಂಗಳವಾರದಂದು ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರ ಕಸ್ಟಡಿಯಲ್ಲಿದ್ದರಿಂದ ಭಾರತ ತನಿಖಾ ಸಂಸ್ಥೆಗಳಿಗೆ ಮಲ್ಯರನ್ನು ಕರೆತರಲು ಸುಲಭ ಮಾರ್ಗ ಸಿಕ್ಕ ಖುಷಿ ಉಂಟಾಗಿತ್ತು. ನಂತರ, ಜಾಮೀನು ಸಿಕ್ಕಿದ್ದರಿಂದ ಈಗ ಮತ್ತೆ ಎಲ್ಲವೂ ವಿಳಂಬವಾಗಲಿದೆ.

ಕಾನೂನು ಮಲ್ಯರ ಪರವಿದೆ

ಕಾನೂನು ಮಲ್ಯರ ಪರವಿದೆ

ಗಡಿಪಾರು ಮಾಡುವುದಕ್ಕೆ ಸಂಬಂಧಿಸಿದ ಕೇಸ್ ಮೇ 17ರಂದು ವಿಚಾರಣೆಗೆ ಬರಲಿದೆ. ಇದನ್ನೇ ನಿನ್ನೆ ಮಲ್ಯ ಕೂಡಾ ಟ್ವೀಟ್ ಮಾಡಿ ಹೇಳಿದ್ದರು. ಈ ವಿಚಾರಣೆ ಕನಿಷ್ಟವೆಂದರೂ ಒಂದು ವರ್ಷ ನಡೆಯುವ ಸಾಧ್ಯತೆಯಿದೆ. ಒಂದು ವೇಳೆ ಕೆಳಹಂತದ ನ್ಯಾಯಲಯವು ಮಲ್ಯರ ಬಂಧನಕ್ಕೆ ಆದೇಶಿಸಿದರೆ, ಮಲ್ಯ ಅವರು ಬ್ರಿಟಿಷ್ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಬಹುದು. ಯುಕೆ ಗೃಹ ಕಾರ್ಯದರ್ಶಿಗಳಿಗೆ ಮನವಿ ಮಾಡಬಹುದು ಅಥವಾ ಸುಪ್ರೀಂಕೋರ್ಟ್ ಮೊರೆ ಹೊಕ್ಕಬಹುದು.

ಸುಸ್ತಿದಾರನಾದ ಮಲ್ಯ

ಸುಸ್ತಿದಾರನಾದ ಮಲ್ಯ

Sarfesi Act (Securitsation and reconstruction of financial assets and enforcement of security interest act)- 2002 ಕಾಯಿದೆ ಇದೆ. ಮಲ್ಯ ಜಾಣತನದಿಂದ ಇದರ ವ್ಯಾಪ್ತಿ ನಿಲುಕದಂತೆ ಸಾಲ ಮಾಡಿದ್ದಾರೆ. ಮಲ್ಯರ ಕಂಪನಿಗಳ ಮಾರುಕಟ್ಟೆ ಮೌಲ್ಯ 4 ಸಾವಿರ ಕೋಟಿ ರು ಇದ್ದಾಗ ಬ್ಯಾಂಕುಗಳು ಹಣ ಪಡೆಯಲು ಆಗಲಿಲ್ಲ. ಮುಂಬೈನ ಕಿಂಗ್ ಫಿಷರ್ ವಿಲ್ಲಾ, ಕೇಪ್ ಟೌನ್ ನ ಬಂಗಲೆ(ಜಿಂಬಾಬ್ವೆ ಉದ್ಯಮಿಗೆ 40 ಕೋಟಿಗೆ ಸೇಲ್), ಕಿಂಗ್ ಫಿಷರ್ ಏರ್ ಲೈನ್ಸ್ 4ಕೋಟಿ ಷೇರುಗಳು, ಫೋರ್ಸ್ ಇಂಡಿಯಾ ಎಫ್ 1 ಟೀಂ, ರೇಸಿಂಗ್ ಕುದುರೆಗಳ ಮಾರಾಟಕ್ಕೆ ಬ್ಯಾಂಕ್ ಗಳು ಆಗ್ರಹಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Legal experts say that it could be easily another 10 to 15 years before liquor baron, Vijay Mallya is finally extradited to India. India has an extradition treaty signed with the UK which dates back to 1992.
Please Wait while comments are loading...