ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿಗೆ ಶಾಕ್: ರೆಪೋ ದರ ಹೆಚ್ಚಾದ್ರೆ ಸಾಲದ EMI ಏರುಪೇರು ಆಗುವುದು ಏಕೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 30: ಭಾರತದಲ್ಲಿ ದೀಪಾವಳಿ ಹೊಸ್ತಿಲಿನಲ್ಲೇ ಮಧ್ಯಮ ವರ್ಗಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಶಾಕ್ ಕೊಟ್ಟಿದೆ. ಹಣದುಬ್ಬರದ ಮಧ್ಯ ರೆಪೋ ದರದಲ್ಲಿ 50 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಘೋಷಿಸಿದ್ದಾರೆ.

ಸ್ಥಾಯಿ ಠೇವಣಿ ಸೌಲಭ್ಯವನ್ನು ಶೇಕಡಾ 5.6ಕ್ಕೆ ಹೊಂದಿಸಲಾಗಿದ್ದು, ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ ಮತ್ತು ಬ್ಯಾಂಕ್ ದರವನ್ನು ಶೇಕಡಾ 6.15ಕ್ಕೆ ಹೊಂದಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ. ಈ ಬೆಳವಣಿಗೆಯು ಮಧ್ಯಮ ವರ್ಗದ ಮಂದಿಗೆ ದುಬಾರಿ ಆಗಲಿದೆ.

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‌: ಅಕ್ಟೋಬರ್ 1ರಿಂದ ಈ ಹೊಸ ನಿಯಮಗಳು ಜಾರಿ?ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‌: ಅಕ್ಟೋಬರ್ 1ರಿಂದ ಈ ಹೊಸ ನಿಯಮಗಳು ಜಾರಿ?

ಕಾರಿನಿಂದ ಹಿಡಿದು ಅಡುಗೆ ಎಣ್ಣೆವರೆಗೂ ಅಗತ್ಯ ಸರಕು-ಸೇವೆಗಳ ಬೆಲೆಯಲ್ಲಿ ಏರಿಕೆ ಆಗಲಿದೆ. ಬ್ಯಾಂಕ್ ಆಫ್ ಬರೋಡಾ ನಡೆಸಿದ ಸಮೀಕ್ಷೆಯ ಪ್ರಕಾರ, ಮಧ್ಯಮ ವರ್ಗದ ಕುಟುಂಬದ ಪಾಲಿಗೆ ತೀರಾ ಅತ್ಯಗತ್ಯವಾಗಿರುವ ಸಾಬೂನು, ಟೂತ್ ಬ್ರಷ್, ಬಿಸ್ಕೆಟ್‌ಗಳಂತಹ ದೈನಂದಿನ ವಸ್ತುಗಳ ಉತ್ಪಾದನೆಯಲ್ಲಿ ಗಣನೀಯ ಇಳಿಕೆಯಾಗಿದೆ.

ಮಾಸಿಕ ಕಂತಿನ ಪ್ರಮಾಣ ಹೆಚ್ಚಳ

ಮಾಸಿಕ ಕಂತಿನ ಪ್ರಮಾಣ ಹೆಚ್ಚಳ

ರೆಪೋ ದರದ ಹೆಚ್ಚಳದೊಂದಿಗೆ ಅಸ್ತಿತ್ವದಲ್ಲಿರುವ ಮತ್ತು ಹೊಸ ಸಾಲಗಾರರು ತಮ್ಮ ಗೃಹ ಸಾಲಗಳಿಗೆ ಹೆಚ್ಚಿನ ಸಮಾನ ಮಾಸಿಕ ಕಂತುಗಳನ್ನು (ಇಎಂಐಗಳು) ಪಾವತಿಸಬೇಕಾಗುತ್ತದೆ. ಏಕೆಂದರೆ ಬ್ಯಾಂಕ್‌ಗಳಿಗೆ ಸಾಲದ ವೆಚ್ಚವು ಹೆಚ್ಚಾಗುತ್ತದೆ. ಇದಲ್ಲದೆ, ಕಾರ್ ಲೋನ್‌ಗಳು ಸಹ ಹೆಚ್ಚಾಗುತ್ತವೆ.

ಆರ್‌ಬಿಐ ರೆಪೋ ದರವನ್ನು ಕಡಿತಗೊಳಿಸಿದ ಸಂದರ್ಭಗಳಲ್ಲಿ, ವಾಣಿಜ್ಯ ಬ್ಯಾಂಕ್‌ಗಳಿಗೆ ಸಾಲದ ವೆಚ್ಚವು ಕಡಿಮೆ ಇರುತ್ತದೆ. ಆದ್ದರಿಂದ, ರೆಪೋ ದರವನ್ನು ಕಡಿಮೆಗೊಳಿಸಿದಾಗ ಬ್ಯಾಂಕುಗಳು ಸಾಮಾನ್ಯವಾಗಿ ಗ್ರಾಹಕರಿಂದ ಸಾಲಗಳಿಗೆ ಕಡಿಮೆ ಬಡ್ಡಿದರವನ್ನು ಹಾಕುತ್ತವೆ. ಆದರೆ, ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿರುವುದರಿಂದ ಬ್ಯಾಂಕ್‌ಗಳು ಗೃಹ ಸಾಲ, ಕಾರು ಸಾಲ ಮತ್ತಿತರ ಬಡ್ಡಿದರವನ್ನು ಹೆಚ್ಚಿಸುತ್ತವೆ. ಬ್ಯಾಂಕುಗಳು ಬಡ್ಡಿದರಗಳನ್ನು ಹೆಚ್ಚಿಸಿದರೆ, ಸಮಾನ ಮಾಸಿಕ ಕಂತುಗಳು (ಇಎಂಐಗಳು) ಸಹ ಹೆಚ್ಚಾಗುತ್ತವೆ, ಇದು ಸಾಲ ಪಡೆದಿರುವ ಗ್ರಾಹಕರಿಗೆ ಹೊರೆಯಾಗುತ್ತದೆ.

ಆರ್‌ಬಿಐ ರೆಪೋ ದರದ ಅರ್ಥವೇನು?

ಆರ್‌ಬಿಐ ರೆಪೋ ದರದ ಅರ್ಥವೇನು?

'REPO' ಎಂದರೆ 'ಮರುಖರೀದಿ ಆಯ್ಕೆ' ಅಥವಾ 'ಮರುಖರೀದಿ ಒಪ್ಪಂದ'. ರೆಪೋ ದರವು ಬ್ಯಾಂಕ್‌ಗಳು ಆರ್‌ಬಿಐನಿಂದ ಸಾಲ ಪಡೆಯುವ ದರವನ್ನು ಸೂಚಿಸುತ್ತದೆ. ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಆರ್‌ಬಿಐ ಪ್ರಮುಖ ಸಾಧನಗಳಲ್ಲಿ ರೆಪೋ ದರವೂ ಒಂದು ಎಂದು ಪರಿಗಣಿಸಲಾಗುತ್ತದೆ. ದೇಶದ ವಾಣಿಜ್ಯ ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕ್ ಮೂಲಕ ಪಡೆದುಕೊಳ್ಳುವ ಸಾಲದ ಮೇಲೆ ವಿಧಿಸುವ ಬಡ್ಡಿದರವನ್ನೇ ರೆಪೋ ದರ ಎಂದು ಕರೆಯಲಾಗುತ್ತದೆ.

ಆರ್‌ಬಿಐ ರಿವರ್ಸ್ ರೆಪೋ ದರ ಎಂದರೇನು?

ಆರ್‌ಬಿಐ ರಿವರ್ಸ್ ರೆಪೋ ದರ ಎಂದರೇನು?

ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ವಾಣಿಜ್ಯ ಹಾಗೂ ಇತರೆ ಬ್ಯಾಂಕುಗಳು ತಾವು ಇರಿಸುವ ಹಣದ ಮೇಲೆ ಪಡೆಯುವ ಬಡ್ಡಿದರವನ್ನು ರಿವರ್ಸ್ ರೆಪೋ ದರ ಎಂದು ಕರೆಯಲಾಗುತ್ತದೆ. ಈ ರಿವರ್ಸ್ ರೆಪೋ ದರವನ್ನು ಆಧರಿಸಿಯೇ ಬ್ಯಾಂಕುಗಳಿಗೆ ಬಡ್ಡಿದರವನ್ನು ನಿಗದಿಪಡಿಸಲಾಗುತ್ತದೆ.

ರೆಪೋ ದರದಿಂದ ಇಎಂಐ ಮೇಲೆ ಹೇಗೆ ಪರಿಣಾಮ?

ರೆಪೋ ದರದಿಂದ ಇಎಂಐ ಮೇಲೆ ಹೇಗೆ ಪರಿಣಾಮ?

ಸಾಮಾನ್ಯವಾಗಿ ಬ್ಯಾಂಕ್‌ಗಳು ನಿಧಿಗಳ ಕನಿಷ್ಠ ವೆಚ್ಚದ ಆಧಾರದ ಮೇಲೆ ಸಾಲದ ದರ(MCLR)ವನ್ನು ನಿಗದಿಪಡಿಸಲಾಗುತ್ತಿದೆ. ವಿವಿಧ ರೀತಿಯ ಗ್ರಾಹಕರಿಗೆ ಬೇರೆ ಬೇರೆ ರೀತಿಯಾಗಿ ಬಡ್ಡಿದರವನ್ನು ನಿಗದಿಪಡಿಸಲಾಗುತ್ತದೆ. ರೆಪೊ ದರ ಮತ್ತು ಇತರ ಸಾಲದ ದರಗಳನ್ನು ಪರಿಗಣಿಸಿ, ಬ್ಯಾಂಕ್‌ಗಳು ಮಾಸಿಕ ಆಧಾರದ ಮೇಲೆ MCLR ಅನ್ನು ಪರಿಷ್ಕರಿಸುತ್ತವೆ.

1 ದಿನದಿಂದ 1 ವರ್ಷದವರೆಗಿನ ವಿವಿಧ ಅವಧಿಗಳಿಗೆ ಐದು ಮಾನದಂಡದ ದರಗಳು ಅಗತ್ಯವಿದೆ. 1 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ದರಗಳನ್ನು ನಿಗದಿಪಡಿಸಲು ಬ್ಯಾಂಕುಗಳು ಮುಕ್ತವಾಗಿರುತ್ತವೆ. ಬ್ಯಾಂಕ್‌ಗಳು MCLR ಗಿಂತ ಕಡಿಮೆ ಸಾಲ ನೀಡಲು ಸಾಧ್ಯವಿಲ್ಲ, ಆದರೆ ಕೆಲವು ವಿನಾಯಿತಿಗಳಿವೆ. ಠೇವಣಿಗಳ ಮೇಲಿನ ಸಾಲಗಳು ಮತ್ತು ಆಯಾ ಬ್ಯಾಂಕ್‌ನ ಉದ್ಯೋಗಿಗಳಿಗೆ ನೀಡುವ ಸಾಲಕ್ಕಾಗಿ, ಬ್ಯಾಂಕ್‌ಗಳು ಎಂಸಿಎಲ್‌ಆರ್‌ಗಿಂತ ಕಡಿಮೆ ಸಾಲ ನೀಡಬಹುದು.

English summary
Why Home loan, Car Loans Get Costlier ahead of Deepavali in India: Here Read to Know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X