ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರು ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಬೇಕು?, ಯಾರಿಗೆ ವಿನಾಯಿತಿ

|
Google Oneindia Kannada News

ನವದೆಹಲಿ, ಜುಲೈ 17; ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸುವುದು ಈಗ ಅನಿವಾರ್ಯವಾಗಿದೆ. ವಾರ್ಷಿಕ ಒಟ್ಟು 2.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅಗತ್ಯವಿಲ್ಲ. ಆದರೆ, ವ್ಯಕ್ತಿಯ ಆದಾಯ ಗರಿಷ್ಠ ವಿನಾಯಿತಿ ಮಿತಿಯನ್ನು ಮೀರಿದಾಗ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲೇಬೇಕು.

ವ್ಯಕ್ತಿಯ ವಾರ್ಷಿಕ ಆದಾಯ 2.5 ಲಕ್ಷಗಳಿಗಿಂತ ಹೆಚ್ಚಿದ್ದಾಗ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲೇಬೇಕು. ಹಿರಿಯ ನಾಗರಿಕರು (60 ವರ್ಷಕ್ಕಿಂತ ಹೆಚ್ಚಿನ ವಯಸ್ಸಾದವರು) ವಾರ್ಷಿಕ 3 ಲಕ್ಷ ರುಪಾಯಿಗೂ ಹೆಚ್ಚಿನ ಆದಾಯ ಹೊಂದಿದ್ದರೆ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಬೇಕು. ಸೂಪರ್ ಸೀನಿಯರ್ ಸಿಟಿಜನ್ (80 ವರ್ಷಕ್ಕಿಂತ ಹೆಚ್ಚಿನ ವಯಸ್ಸಾದವರು) ವಾರ್ಷಿಕ 5 ಲಕ್ಷ ರುಪಾಯಿಗೂ ಹೆಚ್ಚಿನ ಆದಾಯ ಹೊಂದಿದ್ದರೆ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಬೇಕು.

 ಐಟಿ ರಿಟರ್ನ್ಸ್- ವಾಯಿದೆಗೆ ಮುಂಚೆ ಫೈಲ್ ಮಾಡಿದರೆ ಆಗುವ ಪ್ರಯೋಜನಗಳು ಐಟಿ ರಿಟರ್ನ್ಸ್- ವಾಯಿದೆಗೆ ಮುಂಚೆ ಫೈಲ್ ಮಾಡಿದರೆ ಆಗುವ ಪ್ರಯೋಜನಗಳು

ಒಟ್ಟು ಆದಾಯವು ಮೂಲ ಮಿತಿಯನ್ನು ಮೀರಬಹುದು. ಆದರೆ ವಿವಿಧ ಕಡಿತಗಳ ನಂತರ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆಯಿದ್ದರೆ ತೆರಿಗೆಯನ್ನು ಪಾವತಿಸಬೇಕಾದ ಅಗತ್ಯವಿಲ್ಲ.

Who Has To File Income Tax Returns Who Is Exempt: Here Are Details

ಆದಾಯ ತೆರಿಗೆ ರಿಟರ್ನ್ಸ್ ಏಕೆ ಸಲ್ಲಿಸಬೇಕು?; ನಿಮ್ಮ ತೆರಿಗೆಯ ಆದಾಯವು ವಿನಾಯಿತಿ ಮಿತಿಯ ಅಡಿಯಲ್ಲಿ ಬಂದರೂ ಸಹ, ನೀವು ಇನ್ನೂ ರಿಟರ್ನ್ ಅನ್ನು ಸಲ್ಲಿಸಬೇಕು. ಅಂತಹ ಆದಾಯವನ್ನು ಶೂನ್ಯ ಆದಾಯ ತೆರಿಗೆ ರಿಟರ್ನ್ (ITR) ಎಂದು ಕರೆಯಲಾಗುತ್ತದೆ. ಅದನ್ನು ಸಲ್ಲಿಸುವ ಮೂಲಕ ಆದಾಯ ತೆರಿಗೆ ಇಲಾಖೆಗೆ ನಿಮ್ಮ ಆದಾಯ ಕಡಿಮೆ ಇರುವ ಕಾರಣ ಆ ವರ್ಷ ನೀವು ತೆರಿಗೆ ಪಾವತಿಸಿಲ್ಲ ಎಂದು ಮಾಹಿತಿ ನೀಡಿದಂತಾಗುತ್ತದೆ.

ಆಹಾರ ಧಾನ್ಯಗಳಿ ಮೇಲೆ ಜಿಎಸ್‌ಟಿಗೆ ವಿರೋಧ: ದಾವಣಗೆರೆಯಲ್ಲಿಅಕ್ಕಿಗಿರಣಿಗಳು ಬಂದ್ ಆಹಾರ ಧಾನ್ಯಗಳಿ ಮೇಲೆ ಜಿಎಸ್‌ಟಿಗೆ ವಿರೋಧ: ದಾವಣಗೆರೆಯಲ್ಲಿಅಕ್ಕಿಗಿರಣಿಗಳು ಬಂದ್

ಈ ಕೆಳಗಿನ ಸಂದರ್ಭಗಳಲ್ಲಿ ರಿಟರ್ನ್ ಸಲ್ಲಿಕೆ ಕಡ್ಡಾಯವಾಗಿದೆ

* ನಿಮ್ಮ ಟಿಡಿಎಸ್ (TDS), ಟಿಸಿಎಸ್ (TCS) 25,000 ರುಪಾಯಿ ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸುವುದು ಕಡ್ಡಾಯವಾಗಿದೆ.

Who Has To File Income Tax Returns Who Is Exempt: Here Are Details

* ಹಣಕಾಸು ವರ್ಷದಲ್ಲಿ ಒಟ್ಟು ಟಿಡಿಎಸ್/ ಟಿಸಿಎಸ್ (ತೆರಿಗೆ ಕಡಿತಗೊಳಿಸಿ / ಮೂಲದಲ್ಲಿ ಸಂಗ್ರಹಿಸಲಾದ ತೆರಿಗೆ) 25,000 ರುಪಾಯಿಗಿಂತ ಹೆಚ್ಚಿದ್ದರೆ ಮತ್ತು ಹಿರಿಯ ನಾಗರಿಕರಿಗೆ 50,000 ರುಪಾಯಿಗಳಿಗಿಂತ ಹೆಚ್ಚಿರುವ ವ್ಯಕ್ತಿಗಳು ತಮ್ಮ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಸೂಚನೆ ನೀಡಿದೆ.

* ವ್ಯಕ್ತಿಯ ಒಂದು ಅಥವಾ ಹೆಚ್ಚಿನ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಒಟ್ಟು ಠೇವಣಿ 50 ಲಕ್ಷ ರುಪಾಯಿಗಳಿಂತ ಹೆಚ್ಚಿದ್ದರೆ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸುವುದು ಕಡ್ಡಾಯವಾಗಿದೆ.

English summary
Every individual must file the return of income if his/her total income exceeds the maximum exemption limit. If a resident individual's income is higher than the exemption limit in a financial year, then the person is asked to file a tax return.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X