• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

e-RUPI ಎಂದರೇನು?, ಬಳಕೆ ಹೇಗೆ, ಯಾವ ಬ್ಯಾಂಕ್‌ಗಳಲ್ಲಿ ಲಭ್ಯ?

|
Google Oneindia Kannada News

ನವದೆಹಲಿ, ಆಗಸ್ಟ್‌ 02: ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಹಣದ ವರ್ಗಾವಣೆಯಲ್ಲಿ ಮಧ್ಯವರ್ತಿಗಳ ಕಾಟವನ್ನು ತಪ್ಪಿಸಲು ಕೇಂದ್ರ ಸರ್ಕಾರ ಇ-ರುಪಿ ಎನ್ನುವ ಹೊಸದೊಂದು ಯೋಜನೆಗೆ ಮುಂದಾಗಿದೆ.

ಇ-ರುಪಿ ಮೂಲಕ ಸರ್ಕಾರದ ಕೋಟ್ಯಂತರ ಫಲಾನುಭವಿಗಳಿಗೆ ಹಣವನ್ನು ವರ್ಗಾಯಿಸಲು ಕೇಂದ್ರ ಮುಂದಾಗಿದೆ, ಕ್ಯೂಟಾರ್ ಕೋಡ್ ಅಥವಾ ಎಸ್‌ಎಂಎಸ್ ಮೂಲಕವಾಗಿ ಯಾವುದೇ ಭೌತಿಕ ಹಸ್ತಕ್ಷೇಪವಿಲ್ಲದೆ ಫಲಾನುಭವಿಗಳು ನೇರವಾಗಿ ಸರ್ಕಾರದಿಂದ ಸಲ್ಲಬೇಕಿರುವ ಸಂಪೂರ್ಣ ಮೊತ್ತವನ್ನು ಪಡೆಯಲು ಇ-ರುಪಿ ನೆರವಾಗಲಿದೆ.

ಭಾರತ ಇಂದು ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಮತ್ತೊಂದು ದೊಡ್ಡ ಹೆಜ್ಜೆ ಇಡಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಇ-ವೋಚರ್ ಆಧಾರಿತ ಡಿಜಿಟಲ್ ಪಾವತಿ ಪರಿಹಾರ ಇ-ರುಪಿ (e-RUPI) ಅನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆರಂಭಿಸಲಿದ್ದಾರೆ.

ಇದರ ಮೂಲಕ, ಫಲಾನುಭವಿಗಳಿಗೆ ಸೋರಿಕೆಯಿಲ್ಲದೆ ಲಾಭಗಳು ತಲುಪಲು ಸಾಧ್ಯವಾಗುತ್ತದೆ. ಈ ವೋಚರ್​ಗಳನ್ನು ಆರೋಗ್ಯಕ್ಕೆ ಸಂಬಂಧಿಸಿದ ಪಾವತಿಗಳಿಗಾಗಿಯೇ ಬಹುತೇಕ ಉಪಯೋಗಿಸಲಾಗುತ್ತದೆ. ಕಾರ್ಪೊರೇಟ್​ಗಳು ತಮ್ಮ ಸಿಬ್ಬಂದಿಗೆ ಇದನ್ನು ವಿತರಿಸಬಹುದು. ಕೇಂದ್ರ ಸರ್ಕಾರ ಈ ಹಿಂದೆ ಹೇಳಿದ ಪ್ರಕಾರ, ಲಸಿಕೆ ಇ-ವೋಚರ್​ ಅನ್ನು ತರುವುದಾಗಿ ತಿಳಿಸಿತ್ತು.

ಆ ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ ಇ-ವೋಚರ್ ಖರೀದಿಸಬಹುದು ಮತ್ತು ಬೇರೆಯವರಿಗೆ ಉಡುಗೊರೆಯಾಗಿ ಕೂಡ ನೀಡಬಹುದಾಗಿದೆ. ಅಷ್ಟೇ ಅಲ್ಲದೆ ಯಾರು ಈ ವೋಚರ್​ಗಳನ್ನು ಖರೀದಿಸಿ, ವಿತರಿಸುತ್ತಾರೋ ಅವರು, ಈ ವೋಚರ್ ಬಳಕೆ ಆಗಿದೆಯೋ ಇಲ್ಲವೋ ಎಂಬುದನ್ನು ಟ್ರ್ಯಾಕ್ ಮಾಡಬಹುದು. ಇನ್ನು ಫಲಾನುಭವಿಗಳು ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಕಾಗಿಲ್ಲ.

ಇ-ರುಪಿ ಎಂಬುದು ಯಾವುದೇ ಪ್ಲಾಟ್​ಫಾರ್ಮ್​ ಅಲ್ಲ. ಇದು ನಿರ್ದಿಷ್ಟ ಸೇವೆಗಾಗಿ ಮಾಡಿರುವಂಥ ವೋಚರ್. ಇ-ರುಪಿ ವೋಚರ್​ಗಳು ನಿರ್ದಿಷ್ಟ ಉದ್ದೇಶವನ್ನು ಒಳಗೊಂಡಿರುವಂಥದ್ದು. ಮತ್ತು ಜತೆಗೆ ಒಬ್ಬ ವ್ಯಕ್ತಿಯ ಬಳಿ ಬ್ಯಾಂಕ್ ಖಾತೆ ಅಥವಾ ಡಿಜಿಟಲ್ ಪೇಮೆಂಟ್ ಅಪ್ಲಿಕೇಷನ್ ಅಥವಾ ಸ್ಮಾರ್ಟ್​ಫೋನ್ ಇಲ್ಲದಿದ್ದರೂ ಈ ವೋಚರ್​​ಗಳ ಅನುಕೂಲಗಳನ್ನು ಪಡೆದುಕೊಳ್ಳಬಹುದು.

ಹಣಕಾಸು ಸೇವೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಇ-ರುಪಿಯನ್ನು ಅಭಿವೃದ್ಧಿಪಡಿಸಿದೆ.

ಈ ತಂತ್ರಾಂಶವು ಯುಪಿಐ ಐಡಿ ವ್ಯವಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದು ಯಾವುದೇ ಮಧ್ಯವರ್ತಿಯ ಸಹಕಾರವಿಲ್ಲದೆ ಸೇವಾ ಪೂರೈಕೆದಾರರಿಗೆ ಸಕಾಲಿಕ ಪಾವತಿ ನೀಡುತ್ತದೆ.

ಕ್ಯುಆರ್ ಕೋಡ್ ಅಥವಾ ಎಸ್​​​ಎಂಎಸ್ ಆಯಾಧಾರಿತ ಇ-ವೋಚರ್ ಫಲಾನುಭವಿಗಳ ಮೊಬೈಲ್​ಗೆ ಬರುತ್ತದೆ. ಬಳಕೆದಾರರ ಕಾರ್ಡ್, ಡಿಜಿಟಲ್ ಪಾವತಿ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಇಲ್ಲದೆ ವೋಚರ್ ಅನ್ನು ರಿಡೀಮ್ ಮಾಡಲು ಸೇವೆ ಒದಗಿಸುವವರಲ್ಲಿ ಸಾಧ್ಯವಾಗುತ್ತದೆ.

ಈ ಸೇವೆಯನ್ನು ತಾಯಿ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳು, ಟಿಬಿ ನಿರ್ಮೂಲನೆ ಕಾರ್ಯಕ್ರಮಗಳು, ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ, ರಸಗೊಬ್ಬರ ಸಬ್ಸಿಡಿಗಳಂತಹ ಯೋಜನೆಗಳ ಅಡಿಯಲ್ಲಿ ಔಷಧಗಳು ಮತ್ತು ಪೌಷ್ಠಿಕಾಂಶದ ಬೆಂಬಲವನ್ನು ಒದಗಿಸುವ ಯೋಜನೆಗಳ ಅಡಿಯಲ್ಲಿ ಸೇವೆಗಳನ್ನು ತಲುಪಿಸಲು ಸಹ ಇದನ್ನು ಬಳಸಬಹುದು ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.

 ನಗದು ರಹಿತ, ಸಂಪರ್ಕವಿಲ್ಲದ ವಿಧಾನ

ನಗದು ರಹಿತ, ಸಂಪರ್ಕವಿಲ್ಲದ ವಿಧಾನ

ಈ ಒಂದು ಬಾರಿಯ ಪಾವತಿ ಕಾರ್ಯವಿಧಾನವಾಗಿದ್ದು ಬಳಕೆದಾರರು ಸೇವಾ ಪೂರೈಕೆದಾರರಲ್ಲಿ ವೋಚರ್ ಅನ್ನು ಪಡೆದುಕೊಳ್ಳಲು ಯಾವುದೇ ಕಾರ್ಡ್, ಡಿಜಿಟಲ್ ಪಾವತಿ (Digital Payments) ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಅಗತ್ಯವಿಲ್ಲ.

ಇ-ರುಪಿ (e-RUPI) ಎಂದರೆ, ವಾಸ್ತವವಾಗಿ ಇದು ನಗದುರಹಿತ (Cashless) ಮತ್ತು ಸಂಪರ್ಕವಿಲ್ಲದ ವಿಧಾನವಾಗಿದೆ. ಇದು ಕ್ಯೂಆರ್ ಕೋಡ್ ಅಥವಾ ಎಸ್‌ಎಂಎಸ್ ಸ್ಟ್ರಿಂಗ್ ಆಧಾರಿತ ಇ-ವೋಚರ್ ಆಗಿದೆ, ಇದನ್ನು ಫಲಾನುಭವಿಗಳ ಮೊಬೈಲ್‌ಗೆ ಕಳುಹಿಸಲಾಗುತ್ತದೆ.

 ಯಾವುದೇ ಮಧ್ಯವರ್ತಿಗಳ ಅಗತ್ಯವಿಲ್ಲ

ಯಾವುದೇ ಮಧ್ಯವರ್ತಿಗಳ ಅಗತ್ಯವಿಲ್ಲ

ಪೂರ್ವಪಾವತಿಯಾಗಿರುವುದರಿಂದ, ಇದು ಯಾವುದೇ ಮಧ್ಯವರ್ತಿಯನ್ನು ಒಳಗೊಳ್ಳದೆ ಸಮಯಕ್ಕೆ ಸೇವಾ ಪೂರೈಕೆದಾರರಿಗೆ ಪಾವತಿಸುತ್ತದೆ. ಸೇವೆಗಳ ಸೋರಿಕೆ-ನಿರೋಧಕ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಇದು ಕ್ರಾಂತಿಕಾರಿ ಹೆಜ್ಜೆಯಾಗಿದೆ.

ಇ-ರುಪಿ (e-RUPI) ಯಾವುದೇ ಭೌತಿಕ ಇಂಟರ್ಫೇಸ್ ಇಲ್ಲದೆ ಫಲಾನುಭವಿಗಳು ಮತ್ತು ಸೇವಾ ಪೂರೈಕೆದಾರರೊಂದಿಗೆ ಸೇವೆಗಳ ಪ್ರಾಯೋಜಕರನ್ನು ಅಂತರ್ಸಂಪರ್ಕಿಸುತ್ತದೆ ಮತ್ತು ವಹಿವಾಟು ಪೂರ್ಣಗೊಂಡ ನಂತರವೇ ಸೇವಾ ಪೂರೈಕೆದಾರರಿಗೆ ಪಾವತಿ ಮಾಡುವುದನ್ನು ಖಾತ್ರಿಪಡಿಸುತ್ತದೆ.

 ಆನ್‌ಲೈನ್ ಪಾವತಿ ಹೆಚ್ಚು ಸುರಕ್ಷಿತ

ಆನ್‌ಲೈನ್ ಪಾವತಿ ಹೆಚ್ಚು ಸುರಕ್ಷಿತ

ವೇದಿಕೆಯನ್ನು ರಾಷ್ಟ್ರೀಯ ಪಾವತಿಗಳ ನಿಗಮವು (NPCI) ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.

ಡಿಜಿಟಲ್ ಪಾವತಿ ಪರಿಹಾರ e-RUPI ಆರಂಭಿಸುವ ಮುಖ್ಯ ಉದ್ದೇಶವೆಂದರೆ ಆನ್‌ಲೈನ್ ಪಾವತಿಯನ್ನು ಹೆಚ್ಚು ಸುಲಭ ಮತ್ತು ಸುರಕ್ಷಿತವಾಗಿಸುವುದು. ರಿಡೀಮ್​ ಮಾಡುವುದಕ್ಕೆ ಕಾರ್ಡ್ ಅಥವಾ ವೋಚರ್​ನ ಹಾರ್ಡ್​ ಕಾಪಿ ಬೇಕಾಗಲ್ಲ. ಸಂದೇಶದ ಮೂಲಕ ಪಡೆಯುವ ಕ್ಯೂಆರ್ ಕೋಡ್ ಸಾಕು.

 ಇ-ರುಪಿ ಎಲ್ಲೆಲ್ಲಿ ಬಳಸಬಹುದು?

ಇ-ರುಪಿ ಎಲ್ಲೆಲ್ಲಿ ಬಳಸಬಹುದು?

ಇ-ರುಪಿ (e-RUPI) ವೇದಿಕೆಯನ್ನು ಅನೇಕ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಬಳಸಬಹುದು. ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ತಾಯಿ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳು, ರಸಗೊಬ್ಬರ ಸಹಾಯಧನ, ಟಿಬಿ ನಿರ್ಮೂಲನೆ ಕಾರ್ಯಕ್ರಮಗಳು, ಔಷಧಗಳು ಮತ್ತು ರೋಗನಿರೋಧಕಗಳಂತಹ ಯೋಜನೆಗಳ ಅಡಿಯಲ್ಲಿ ಸೇವೆಗಳನ್ನು ಒದಗಿಸಲು ಬಳಸಬಹುದು. ಖಾಸಗಿ ವಲಯವೂ ಸಹ ಈ ಡಿಜಿಟಲ್ ವೋಚರ್‌ಗಳನ್ನು ತಮ್ಮ ಉದ್ಯೋಗಿಗಳ ಕಲ್ಯಾಣ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳ ಭಾಗವಾಗಿ ಬಳಸಬಹುದು.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಪ್ರಕಾರ, ಎಂಟು ಬ್ಯಾಂಕ್​​ಗಳಲ್ಲಿ ಈಗಾಗಲೇ ಲಭ್ಯವಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್​ಡಿಎಫ್​ಸಿ, ಆಕ್ಸಿಸ್, ಪಂಜಾಬ್​ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್, ಇಂಡಸ್​ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್​ಗಳಲ್ಲಿ ಲಭ್ಯ ಇದೆ.

English summary
Taking the first step towards having a digital currency in the country, Prime Minister Narendra Modi will launch an electronic voucher based digital payment system “e-RUPI” Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X