ಪ್ರೀಪೇಯ್ಡ್ ಯೋಜನೆಗಳನ್ನು ಬದಲಾಯಿಸಿದ ವೋಡಾಫೋನ್
ಬೆಂಗಳೂರು, ಆಗಸ್ಟ್ 26: ರಿಲಯನ್ಸ್ ಜಿಯೋಗೆ ಪೈಪೋಟಿ ನೀಡಲು ವೋಡಾಫೋನ್ ಸಂಸ್ಥೆ ಸಜ್ಜಾಗಿದೆ. ವೋಡಾಫೋನ್ ತನ್ನ ಪ್ರೀಪೇಯ್ಡ್ ಯೋಜನೆಗಳನ್ನು ಬದಲಾಯಿಸಿದೆ.
ರಿಲಯನ್ಸ್ ಜಿಯೋದ 49 ರೂಪಾಯಿ ಪ್ಲಾನ್ ಗೆ ಸೆಡ್ಡು ಹೊಡೆಯಲು ವೋಡಾಫೋನ್ ಸಜ್ಜಾಗಿದ್ದು, ಹೊಸದಾಗಿ 47 ರೂಪಾಯಿ ಪ್ಲಾನ್ ಹೊರ ತಂದಿತ್ತು. ಈಗ 90 ದಿನಗಳ ಅವಧಿಗೆ 1.5ಜಿಬಿ ಪ್ರತಿದಿನ ಇಂಟರ್ನೆಟ್ ಡೇಟಾ ಸಿಗಲಿದೆ. ವೋಡಾಫೋನ್ ನಿಂದ ಈಗ 209 ರು, 479 ರು, 529ರುಗಳ ಪ್ಯಾಕ್ ಘೋಷಣೆಯಾಗಿದೆ.
ಇದಲ್ಲದೆ, ಪ್ರತಿದಿನ 1.4 ಜಿಬಿ ಡೇಟಾ ನೀಡಲಿರುವ 199ರು, 448ರು ಹಾಗೂ 509ರು ಪ್ಯಾಕ್ ಗಳಿವೆ. 209ರು ಗಳ ರೀಚಾರ್ಜ್ ನಲ್ಲಿ 1.5 ಜಿಬಿ ಡೇಟಾವನ್ನು 28ದಿನಗಳ ತನಕ ಪಡೆಯಬಹುದಾಗಿದೆ.

479 ಹಾಗೂ 529ರು ರೀಚಾರ್ಜ್ ಆಫರ್ ನಲ್ಲಿ ಅಷ್ಟೇ ಡೇಟಾವನ್ನು 84 ಹಾಗೂ 90ದಿನಗಳ ಅವಧಿಗೆ ಪಡೆಯಬಹುದು. ಇದಕ್ಕೆ ಹೋಲಿಸಿದರೆ ಜಿಯೋದಿಂದ 149ರು ರೀಚಾರ್ಜ್ ಗೆ ಪ್ರತಿದಿನ 1.5 ಜಿಬಿ ಡೇಟಾ ಸಿಗಲಿದೆ.
ವೋಡಾಫೋನ್ ನ ಹೊಸ ಪ್ರೀಪೇಯ್ಡ್ ಯೋಜನೆಗಳಲ್ಲಿ ಅನಿಯಮಿತ ಸ್ಥಳೀಯ, ಎಸ್ಟಿಡಿ, ರೋಮಿಂಗ್ ಕಾಲ್ಸ್ ಹಾಗೂ ಪ್ರತಿದಿನ 100 ಎಸ್ಎಂಎಸ್ ಸಿಗಲಿದೆ. ವೋಡಾಫೋನ್ ಪ್ಲೇ ಆಪ್ ಹಾಗೂ 300 ಲೈವ್ ಟಿವಿ, ಸಿನಿಮಾ, ಶೋಗಳನ್ನ್ನು ಪಡೆಯಬಹುದು. ಅನಿಯಮಿತ ಕರೆಗಳನ್ನು 250 ನಿಮಿಷ ಪ್ರತಿದಿನ ಅಥವಾ 1000 ನಿಮಿಷ ಪ್ರತಿ ವಾರಕ್ಕೆ ನಿಗದಿ ಪಡಿಸಲಾಗಿದೆ.
ಸದ್ಯಕ್ಕೆ ಈ ಹೊಸ ಯೋಜನೆಯು ಹರ್ಯಾಣ, ಕರ್ನಾಟಕ, ಕೇರಳ ಹಾಗೂ ಕೋಲ್ಕತ್ತಾ ಟೆಲಿಕಾಂ ಸರ್ಕಲ್ ಗಳಲ್ಲಿ ಲಭ್ಯ.












Click it and Unblock the Notifications