ಇನ್ಫಿ ತೊರೆದ ವಿಶಾಲ್ ಸಿಕ್ಕಾ, ಎಚ್ಪಿ ಸೇರುತ್ತಿದ್ದಾರಂತೆǃ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 25:ಇನ್ಫೋಸಿಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹುದ್ದೆಗೆ ರಾಜೀನಾಮೆ ನೀಡಿದ ವಿಶಾಲ್ ಸಿಕ್ಕಾ ಅವರು ಮುಂದೇನು ಮಾಡಲಿದ್ದಾರೆ? ಎಂಬುದರ ಬಗ್ಗೆ ಇಲ್ಲೊಂದು ಸುದ್ದಿ ಬಂದಿದೆ.

ಹ್ಯೂಲೆಟ್ ಪ್ಯಾಕರ್ಡ್(ಎಚ್ ಪಿ) ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಆಗಿ ವಿಶಾಲ್ ಸಿಕ್ಕಾ ಅವರು ಸೇರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

Vishal Sikka likely to join Hewlett Packard Enterprise as CTO: Report

ಇನ್ಫೋಸಿಸ್ ನ ಸಿಇಒ, ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯಕಾರಿ ಉಪಾಧ್ಯಕ್ಷ ಸ್ಥಾನವನ್ನು ತೊರೆದ ವಿಶಾಲ್ ಸಿಕ್ಕಾ ಅವರು ಎಚ್ ಪಿ ಸೇರುವ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ವಿಶಾಲ್ ಅವರು ಇನ್ಫೋಸಿಸ್ ತೊರೆದ ಬಳಿಕ ಬುಧವಾರದಂದು ಸಂಸ್ಥೆಯ ಮಾಜಿ ಸಿಇಒ ನಂದನ್ ನಿಲೇಕಣಿ ಅವರನ್ನು ನಾನ್ ಎಕ್ಸಿಕ್ಯೂಟಿವ್ ಹುದ್ದೆ ಪಡೆದು ಸಂಸ್ಥೆಗೆ ಮರಳಿದ್ದಾರೆ.

50 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕ ಮೂಲಕದ ಎಚ್ ಪಿ ಎಂಟರ್ ಪ್ರೈಸಸ್ ಸಂಸ್ಥೆಯ ಸಿಟಿಒ ಆಗಲು ವಿಶಾಲ್ ಅವರಿಗೆ ಆಹ್ವಾನ ಬಂದಿದೆ ಎಂಬ ಸುದ್ದಿಯಿದೆ. 2015ರಲ್ಲಿ ಎಚ್ಪಿ ಯಿಂದ ಬೇರ್ಪಟ್ಟು ಸಾಫ್ಟ್ ವೇರ್ ಹಾಗೂ ಹಾರ್ಡ್ ವೇರ್ ಘಟಕವು ಎಚ್ ಪಿ ಎಂಟರ್ ಪ್ರೈಸಸ್ ಆಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former CEO of Infosys Visha Sikka is likely to join Hewlett Packard Enterprise (HPE) IT company as chief technology officer (CTO).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ