ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿಗೂ ಯುಬಿ ಗ್ರೂಪ್‌ಗೆ ವಿಜಯ್ ಮಲ್ಯರೇ ಬಾಸ್!

By Madhusoodhan
|
Google Oneindia Kannada News

ನವದೆಹಲಿ, ಸೆಪ್ಟೆಂಬರ್, 19: 9 ಸಾವಿರ ಕೋಟಿ ರು. ಸಾಲ ಮಾಡಿ ವಿದೇಶಕ್ಕೆ ವಿಜಯ್ ಮಲ್ಯ ಹಾರಿದ್ದರೂ ಭಾರತದಲ್ಲಿ ಮಾತ್ರ ಅವರ ಪ್ರಭಾವ ಕಡಿಮೆ ಆಗಿಲ್ಲ. ಈಗಲೂ ಯುಬಿ ಗ್ರೂಪ್ ಗೆ ವಿಜಯ್ ಮಲ್ಯರೇ ಬಾಸ್.

ಯುಬಿ ಸಂಸ್ಥೆ ಮಲ್ಯರಿಗೆ ವಾರ್ಷಿಕ 1.6 ಕೋಟಿ ರೂ. ವೇತನ ಪಾವತಿ ಮಾಡುತ್ತಿದೆ. ಇದರ ಜತೆಗೆ ಯುಬಿ ಸಮೂಹದ ಪಾಲುದಾರ ಹೈನಕೆನ್ ಕೂಡಾ ಮಲ್ಯರಿಗೆ 2.86 ಕೋಟಿ ರೂ. ಗೌರವಧನ ನೀಡುತ್ತಿದೆ. ಮಲ್ಯ ಲಂಡನ್‌ನಲ್ಲಿದ್ದರೂ, ಭಾರತದಲ್ಲಿನ ಯುಬಿ ಕಂಪನಿಯ ವಿವಿಧ ಉದ್ಯಮಗಳ ಮೇಲೆ ಪೂರ್ಣ ಹಿಡಿತ ಹೊಂದಿದ್ದು, ಕಂಪನಿಯ ಎಲ್ಲ ಆಗುಹೋಗುಗಳನ್ನು ಮಲ್ಯ ಗಮನಿಸುತ್ತಲೇ ಇದ್ದಾರೆ.[ಬಾಕಿ ಇದ್ದರೂ ಮಲ್ಯಗೆ ಹೆಚ್ಚಿನ ಸಾಲ ಸಿಕ್ಕಿದ್ದು ಹೇಗೆ?]

ಸೆಪ್ಟೆಂಬರ್ ಆರಂಭದಲ್ಲಿ ಮಲ್ಯಗೆ ಸೇರಿದ 6,600 ಕೋಟಿ ರು. ಆಸ್ತಿಯನ್ನು ಜಪ್ತಿ ಮಾಡಿದ್ದ ಜಾರಿ ನಿರ್ದೇಶನಾಲಯ ಶಾಕ್ ನೀಡಿತ್ತು. ಇದೀಗ ಯುಬಿ ಗ್ರೂಪ್ ಸಭೆ ನಡೆಯಲಿದ್ದು ಮುಂದೆ ಯಾವ ಬದಲಾವಣೆಗೆ ಕಾರಣವಾಗುತ್ತದೆ ನೋಡಬೇಕಿದೆ.

ಸೆಪ್ಟೆಂಬರ್ 29

ಸೆಪ್ಟೆಂಬರ್ 29

ಯುಬಿ ಗ್ರೂಪ್ ಮೇಲೆ ಮಲ್ಯ ಯಾವ ಪ್ರಮಾಣದ ನಿಯಂತ್ರಣ ಹೊಂದಿದ್ದಾರೆ ಎಂಬುದು ಮತ್ತೆ ವಿಚಾರಕ್ಕೆ ಬರಲು ಸೆಪ್ಟೆಂಬರ್ 29 ಕಾರಣ. ಸೆಪ್ಟೆಂಬರ್ 29ರಂದು ಯುಬಿಯ ವಾರ್ಷಿಕ ಮಹಾಸಭೆ ನಡೆಯಲಿದ್ದು, ಈ ಸಂಬಂಧ ತನ್ನ ಷೇರುದಾರರಿಗೆ ಯುಬಿ ಕಂಪನಿ ತನ್ನ ವಾರ್ಷಿಕ ವರದಿ ಸಲ್ಲಿಕೆ ಮಾಡಿದ್ದು ಮಲ್ಯ ಯಾವ ಪ್ರಮಾಣದ ಪ್ರಭಾವ ಹೊಂದಿದ್ದಾರೆ ಎಂಬುದನ್ನು ಉಲ್ಲೇಖ ಮಾಡಲಾಗಿದೆ.

ಗೋವಾ ಮನೆ ಹರಾಜು

ಗೋವಾ ಮನೆ ಹರಾಜು

ವಿಜಯ್ ಮಲ್ಯ ಅವರ ಗೋವಾ ದಲ್ಲಿರುವ ಮನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹರಾಜಿ ಗಿಟ್ಟಿದೆ. ಗೋವಾದಲ್ಲಿ ಮಲ್ಯ ಅವರ ಕಿಂಗ್ ಫಿಶರ್ ವಿಲ್ಲಾ ಇದ್ದು, ಅದನ್ನು 85.29ಕೋಟಿಗೆ ಹರಾಜು ಇಡಲಾಗಿದೆ.

ನೀವು ಸಲ್ಲಿಕೆ ಮಾಡಬಹುದು

ನೀವು ಸಲ್ಲಿಕೆ ಮಾಡಬಹುದು

ಇ ಹರಾಜು ಮುಖೇನ ಮಲ್ಯ ಮನೆಯನ್ನು ಖರೀದಿ ಮಾಡಲು ಅವಕಾಶ ಇದೆ. ಇ ಹರಾಜಿನಲ್ಲಿ ವಿಲ್ಲಾದ ಒಳಗಿರುವ ಎಲ್ಲಾ ಚರಾಸ್ತಿಗಳನ್ನು ಸೇರಿಸುವುದಿಲ್ಲ. ವಿಲ್ಲಾ ಕೊಳ್ಳಲು ಇಚ್ಛಿಸುವವರು ಸೆಪ್ಟಂಬರ್ 26-27 ಹಾಗೂ ಅಕ್ಟೋಬರ್ 5-6 ರಂದು ಇದರ ಒಳಗೆ ಪರಿಶೀಲನೆ ನಡೆಸಬಹುದು ಎಂದು ಎಸ್ ಬಿ ಐ ತಿಳಿಸಿದೆ.

6, 600 ಕೋಟಿ ರು. ಆಸ್ತಿ ಜಪ್ತಿ

6, 600 ಕೋಟಿ ರು. ಆಸ್ತಿ ಜಪ್ತಿ

ಸೆಪ್ಟೆಂಬರ್, 3 ರಂದು ಘೋಷಿತ ಅಪರಾಧಿ ವಿಜಯ್ ಮಲ್ಯಗೆ ಸೇರಿದ 6, 600 ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶಾನಲಯ(ಇಡಿ) ಜಪ್ತಿ ಮಾಡಿತ್ತು. ಮಲ್ಯಗೆ ಸೇರಿದ ಒಟ್ಟು 8,044 ಕೋಟಿ ರು. ಆಸ್ತಿಯನ್ನು ವಶಕ್ಕೆ ಪಡೆಯಲಾಗುವುದು ವಿವರವನ್ನು ಇಂಗ್ಲೆಂಡ್ ಸರ್ಕಾರಕ್ಕೆ ಕಳಿಸಿಕೊಡಲಾಗುವುದು ಎಂದು ಜಾರಿ ನಿರ್ದೇಶನಾಲಯ ತಿಳಿಸಿತ್ತು.

English summary
UB group holding firm United Breweries Holdings Ltd has said that Vijay Mallya remains in "full control" even after relocating to the UK, and disclosed his remuneration totalling Rs 1.6 crore. Group company United Breweries Ltd, in which co-promoter Heineken has been hiking stake, has also disclosed a total remuneration of about Rs 2.86 crore to Mallya, who moved to the UK earlier this year amid a furore over various cases involving erstwhile Kingfisher Airlines including about huge loan defaults.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X