ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಬಜೆಟ್ ನಿರೀಕ್ಷೆಗಳೇನು, ಯಾವುದು ಈಡೇರಬಹುದು?

|
Google Oneindia Kannada News

Recommended Video

Budget 2017-18: Expected income tax deductions in this year: KPMG

ಆದಾಯ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಾರಿಯ ಬಜೆಟ್ ನಲ್ಲಿ ನಿರೀಕ್ಷೆಗಳೇನು ಎಂಬುದು ಬಹು ಚರ್ಚಿತ ವಿಷಯ. ಈ ಬಗ್ಗೆ ಒನ್ ಇಂಡಿಯಾ ಕನ್ನಡದ ಸಂಪಾದಕರಾದ ಎಸ್.ಕೆ.ಶಾಮಸುಂದರ್ ಹಾಗೂ ಗುಡ್ ರಿಟರ್ನ್ಸ್. ಇನ್ ನ ಕಾರ್ಯನಿರ್ವಾಹಕ ಸಂಪಾದಕರಾದ ಸುನೀಲ್ ಫರ್ನಾಂಡಿಸ್ ಮಧ್ಯದ ಚರ್ಚೆಯ ಹೂರಣ ಇಲ್ಲಿದೆ.

ಫೆಬ್ರವರಿ ಒಂದರಂದು ಕೇಂದ್ರದ ಬಜೆಟ್ ಮಂಡನೆಯಾಗಲಿದೆ. ಈ ಬಾರಿಯ ಅಧಿಕಾರಾವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಮಂಡನೆಯಾಗುವ ಕೊನೆ ಬಜೆಟ್ ಇದು. ಆದ್ದರಿಂದ ಜನರಲ್ಲಿ ಬಹಳ ನಿರೀಕ್ಷೆ ಇದೆ. ಸದ್ಯಕ್ಕೆ ವೇತನದಾರರಿಗೆ 2,50,000 ದೊಳಗೆ ಆದಾಯ ಇದ್ದರೆ ಯಾವುದೇ ತೆರಿಗೆ ಇಲ್ಲ. ಆ ಪ್ರಮಾಣ ಹೆಚ್ಚಿಸಬಹುದು ಎಂಬ ನಿರೀಕ್ಷೆಯಿದೆ.

ಮನೆ ಕೊಳ್ಳುವವರು ಕೇಂದ್ರ ಬಜೆಟ್ ನಿಂದ ಏನೆಲ್ಲಾ ನಿರೀಕ್ಷಿಸಬಹುದು?ಮನೆ ಕೊಳ್ಳುವವರು ಕೇಂದ್ರ ಬಜೆಟ್ ನಿಂದ ಏನೆಲ್ಲಾ ನಿರೀಕ್ಷಿಸಬಹುದು?

ಜತೆಗೆ ಮುಂದಿನ ವರ್ಷವೇ ಸಂಸತ್ ಚುನಾವಣೆಯೂ ಇರುವುದರಿಂದ ತೆರಿಗೆ ಮಿತಿಯಲ್ಲಿ ಹೆಚ್ಚಳ ಮಾಡಬಹುದು ಎಂಬ ನಿರೀಕ್ಷೆ ಇದೆ. ಇನ್ನು ಸದ್ಯಕ್ಕೆ ತೆರಿಗೆ ವಿನಾಯಿತಿ ಪಡೆಯಲು ಪಿಪಿಎಫ್, ಶಾಲೆ ಟ್ಯೂಷನ್ ಫೀ, ಇನ್ಷೂರೆನ್ಸ್ ನಲ್ಲಿ ಒಂದೂವರೆ ಲಕ್ಷದವರೆಗೆ ಉಳಿತಾಯ ಮಾಡಬಹುದು. ಅದು ಮಿತಿ. ಅದನ್ನು ಎರಡು ಲಕ್ಷಕ್ಕೆ ಏರಿಸಬಹುದು ಎಂಬ ನಿರೀಕ್ಷೆ ಇದೆ.

ಅನುಕೂಲ ಆಗುವಂಥ ನಿಯಮ ಮಾಡಬಹುದೇನೋ

ಅನುಕೂಲ ಆಗುವಂಥ ನಿಯಮ ಮಾಡಬಹುದೇನೋ

ಇನ್ನು ಮೂರನೆಯದು ರೀ ಎಂಬರ್ಸ್ ಮೆಂಟ್ ನಲ್ಲಿ ಬದಲಾವಣೆ ಮಾಡಬಹುದು ಅಂದುಕೊಳ್ಳಲಾಗುತ್ತಿದೆ. ಉದಾಹರಣೆಗೆ ವೈದ್ಯಕೀಯ ವೆಚ್ಚದ ಬಿಲ್ ಅಂಥವಕ್ಕೆ ಈವರೆಗೆ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಈ ಸಲ ಜನರಿಗೆ ಅನುಕೂಲ ಆಗುವಂಥ ನಿಯಮ ಮಾಡಬಹುದೇನೋ!

ಆದಾಯ ತೆರಿಗೆ ತೆಗೆಯಲು ಆಗಲ್ಲವಾ?

ಆದಾಯ ತೆರಿಗೆ ತೆಗೆಯಲು ಆಗಲ್ಲವಾ?

ಈಗಾಗಲೇ ಆದಾಯ ತೆರಿಗೆಯನ್ನೇ ತೆಗೆದುಬಿಡಬೇಕು ಎಂಬ ಮಾತು 'ಅರ್ಥ ಕ್ರಾಂತಿ'ಯ ಅನಿಲ್ ಬೊಕಿಲ್, ಸುಬ್ರಮಣಿಯನ್ ಸ್ವಾಮಿ ಅಂಥವರು ಆಡುತ್ತಿದ್ದಾರೆ. ಅದು ಸಾಧ್ಯವಾ ಅಂತ ನೋಡಿದರೆ, ಸರಕಾರಕ್ಕೆ ಜಿಎಸ್ ಟಿಯಲ್ಲಿನ ಆದಾಯದಲ್ಲಿ ಸ್ಥಿರತೆ ಇಲ್ಲ. ಇಂಥ ಸನ್ನಿವೇಶದಲ್ಲಿ ಆದಾಯ ತೆರಿಗೆಯನ್ನೇ ತೆಗೆದು ಹಾಕಲು ಆಗಲ್ಲ. ಅಂದರೆ ಜಿಎಸ್ ಟಿ ಆದಾಯದಲ್ಲಿ ಸ್ಥಿರತೆ ಬರುವವರೆಗೆ ಏನೂ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಆಗಲ್ಲ.

ದೇಶದ ಆರ್ಥಿಕ ಸ್ಥಿತಿಯ ನಿರ್ಲಕ್ಷ್ಯ ಸರಿಯಲ್ಲ

ದೇಶದ ಆರ್ಥಿಕ ಸ್ಥಿತಿಯ ನಿರ್ಲಕ್ಷ್ಯ ಸರಿಯಲ್ಲ

ವೇತನದಾರರಿಗೆ ಅನುಕೂಲ ಮಾಡಬೇಕು ಅನ್ನೋ ಕಾರಣಕ್ಕೆ ದೇಶದ ಆರ್ಥಿಕ ಸ್ಥಿತಿಯನ್ನು ಮರೆಯಲು ಆಗಲ್ಲ. ಇನ್ನು ಗೃಹ ಸಾಲ ಪಡೆದವರಿಗೆ ತೆರಿಗೆ ಅನುಕೂಲ ಮಾಡಿಕೊಡಬೇಕು ಅನ್ನೋ ಮಾತಿದೆ. ಆದರೆ ಇವತ್ತಿಗೆ ಷೇರು ಮಾರುಕಟ್ಟೆ ಕಡೆ ನೋಡಬೇಕು. ಅಲ್ಲಿನ ಲಾಭಕ್ಕೆ ತೆರಿಗೆ ಹಾಕಲು ಇದು ಸಕಾಲ. ಏಕೆಂದರೆ ಷೇರು ಮಾರುಕಟ್ಟೆ ತುಂಬ ಎತ್ತರದಲ್ಲಿದೆ.

ರಿಯಲ್ ಎಸ್ಟೇಟ್ ಹೂಡಿಕೆ ಉತ್ತಮ ಆಯ್ಕೆ

ರಿಯಲ್ ಎಸ್ಟೇಟ್ ಹೂಡಿಕೆ ಉತ್ತಮ ಆಯ್ಕೆ

ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವವರು ಮೂರು ವರ್ಷದ ನಂತರ ಲಾಭ ತೆಗೆದುಕೊಂಡರೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಅಂತ ಪರಿಗಣಿಸಲಾಗುತ್ತದೆ. ಇನ್ನು ಈಗ ರೇರಾ ಕಾಯ್ದೆ ಬಂದಿರುವುದರಿಂದ ರಿಯಲ್ ಎಸ್ಟೇಟ್ ನಲ್ಲಿನ ಹೂಡಿಕೆ ಸದ್ಯಕ್ಕೆ ಒಳ್ಳೆ ಆಯ್ಕೆ.

English summary
Will finance minister abolish personal income tax or introduce flat tax? Or - Raise the investment limit from the present Rs 1.5 lakh to Rs 3 Lakh, if not Rs 5 Lakhs! And - Please abolish the headaches of producing medical bills, House rent paid receipts etc etc. Here is the discussion about union budget 2018 expectations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X