Get Updates
Get notified of breaking news, exclusive insights, and must-see stories!

ಕರ್ನಾಟಕದಲ್ಲಿ ವಿ ಗಿಗಾ ನೆಟ್ 4ಜಿ ನೆಟ್‍ವರ್ಕ್ ಸಾಮರ್ಥ್ಯ ಹೆಚ್ಚಳ

ಬೆಂಗಳೂರು, ಸೆಪ್ಟೆಂಬರ್ 29: ಪ್ರಮುಖ ಟೆಲಿಕಾಂ ಆಪರೇಟರ್ ಕಂಪನಿಯಾಗಿರುವ ವಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರಿನ ಬಹುಪಾಲು ಸೈಟ್‍ಗಳಲ್ಲಿ 3 ಜಿ ಸ್ಪೆಕ್ಟ್ರಮ್ ಅನ್ನು 4 ಜಿಗೆ ಸುಧಾರಣೆ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಈ ನಗರಗಳಲ್ಲಿ ಈ ಕ್ರಮವು ಈ ನಗರಗಳಲ್ಲಿ ಗಿಗಾನೆಟ್ 4ಜಿ ಸಾಮರ್ಥ್ಯವನ್ನು ಸುಸ್ಥಿತರವಾಗಿ ಮತ್ತು ಗಣನೀಯವಾಗಿ ಹೆಚ್ಚಿಸಲು ನೆರವಾಗಲಿದೆ.

ಇದು ಕರ್ನಾಟಕ ಟೆಲಿಕಾಂ ವೃತ್ತದಾದ್ಯಂತ ಕಂಪನಿಯು ತನ್ನ 3 ಜಿ ಸ್ಪೆಕ್ಟ್ರ್ರಮ್ ಅನ್ನು 4 ಜಿ ಗೆ ಸ್ಥಳಾಂತರಿಸುವ ಒಂದು ದೊಡ್ಡ ಉಪಕ್ರಮದ ಭಾಗವಾಗಿದೆ. ಈ ನಗರಗಳಲ್ಲಿ ಅಸ್ತಿತ್ವದಲ್ಲಿರುವ 4ಜಿ ಮೂಲಸೌಕರ್ಯವನ್ನು ಬಲಪಡಿಸುವ ದೃಷ್ಟಿಯಿಂದ 5 ಎಂಎಚ್‍ಝೆಡ್ 900 ಎಂಎಚ್‍ಝೆಡ್ ಹಾಗೂ 2100 ಎಂಎಚ್‍ಝೆಡ್ ಬ್ಯಾಂಡ್ ಸ್ಪೆಕ್ಟ್ರ್ರಮ್ ಅನ್ನು ನಿಯೋಜಿಸಲಾಗಿದೆ. ಇದರಿಂದಾಗಿ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರಿನ ವಿಐ ಗ್ರಾಹಕರು ಉತ್ತಮ ಒಳಾಂಗಣ ಕವರೇಜ್‍ನ ಜತೆಗೆ ಹೆಚ್ಚಿನ ಡೌನ್‍ಲೋಡ್ ಮತ್ತು ಅಪ್‍ಲೋಡ್ ವೇಗವನ್ನು ಪಡೆಯಲಿದ್ದಾರೆ.

ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರಿನಲ್ಲಿ ಈಗಿರುವ 4 ಜಿ ಮೂಲಸೌಕರ್ಯವನ್ನು 3ಜಿ ಸ್ಪೆಕ್ಟ್ರಮ್‍ನಿಂದ 4 ಜಿಗೆ ವಲಸೆ ಹೋಗುವ ಮೂಲಕ ವಿಸ್ತರಿಸಲಾಗಿದೆ. ವಿ ಗಿಗಾನೆಟ್ 4ಜಿ ಜಾಲವು ವಿಶಾಲ ವ್ಯಾಪ್ತಿ, ನೆಟ್‍ವರ್ಕ್ ಗುಣಮಟ್ಟ ಹಾಗೂ ಬಲವಾದ ಟ್ರಾಫಿಕ್ ಕ್ಯಾರೇಜ್ ಸಾಮಥ್ರ್ಯದ ತ್ರಿವಳಿ ಅನುಕೂಲಗಳನ್ನು ನೀಡಲಿದೆ. ಈ ನಗರಗಳಲ್ಲಿ ಸರಾಸರಿ ಮೊಬೈಲ್ ಡೇಟಾ ಟ್ರಾಫಿಕ್ ಸಾಮರ್ಥ್ಯವನ್ನು ಸುಮಾರು ಶೇಕಡ 75ರಷ್ಟು ಹೆಚ್ಚಿಸಲಾಗಿದೆ.

Vi Ramps Up Giganet 4G Network Capacity In Karnataka

ವಿ ಗ್ರಾಹಕರು 4 ಜಿ ಹ್ಯಾಂಡ್‍ಸೆಟ್‍ನಲ್ಲಿ 4 ಜಿ ಸಿಮ್ ಬಳಸುವಾಗ ಉತ್ತಮ 4 ಜಿ ಅನುಭವವನ್ನು ಆನಂದಿಸಬಹುದು. ವಿಐ 3 ಜಿ ಗ್ರಾಹಕರು ಉಚಿತವಾಗಿ 4 ಜಿ ಸಿಮ್‍ಗೆ ಅಪ್‍ಗ್ರೇಡ್ ಮಾಡಬಹುದು ಮತ್ತು ವಿ ಜಿಗಾನೆಟ್‍ನ ಸಂಪೂರ್ಣ ಸಾಮಥ್ರ್ಯವನ್ನು ಬಳಸಿಕೊಳ್ಳಬಹುದು.

ಈ ಬಗ್ಗೆ ವಿವರ ಹಂಚಿಕೊಂಡ ವೊಡಾಫೋನ್ ಐಡಿಯಾದ ಕರ್ನಾಟಕ, ಎಪಿ ಮತ್ತು ತೆಲಂಗಾಣ ಕ್ಲಸ್ಟರ್ ಬಿಸಿನೆಸ್ ಹೆಡ್ ಅರವಿಂದ ನೆವತಿಯಾ "ಇತ್ತೀಚಿನ ನೆಟ್‍ವರ್ಕ್ ವರ್ಧನೆ ಉಪಕ್ರಮವು ನಮ್ಮ ಗ್ರಾಹಕರಿಗೆ ಹೆಚ್ಚುತ್ತಿರುವ ಡೇಟಾ ಬೇಡಿಕೆಗೆ ಪೂರಕವಾಗಿ 4ಜಿ ಅನುಭವವನ್ನು ನೀಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವಾಗಿದೆ. ಈಗಿರುವ 4ಜಿ ಮೂಲಸೌಕರ್ಯವನ್ನು 900 ಹಾಗೂ 2100 ಎಂಎಚ್‍ಝೆಡ್ ಪದರಗಳ ವಿಸ್ತರಣೆಯೊಂದಿಗೆ ಪೂರಕಗೊಳಿಸುವುದರಿಂದ ಡೇಟಾ ವೇಗ ವರ್ಧನೆಯಾಗಲಿದೆ.

ಜೊತೆಗೆ ಕರ್ನಾಟಕದ ಕೆಲವು ಪ್ರಮುಖ ನಗರಗಳಲ್ಲಿ ವಿ ಗ್ರಾಹಕರಿಗೆ ಉತ್ತಮ ಒಳಾಂಗಣ ನೆಟ್‍ವರ್ಕ್ ಅನುಭವವನ್ನು ತರಲಿದೆ. 3 ಜಿ ಯಿಂದ 4 ಜಿ ಸುಧಾರಣೆ ಮಾಡುವ ಕ್ರಮವು ಮುಗಿದ ನಂತರ ಈ
ನಗರಗಳಲ್ಲಿ ಗಣನೀಯ ಡೇಟಾ ಟ್ರಾಫಿಕ್ ಬೆಳವಣಿಗೆಯನ್ನು ನಾವು ನೋಡಿದ್ದೇವೆ. ಕರ್ನಾಟಕದ ಉಳಿದ ಭಾಗಗಳಲ್ಲಿ ಈ ಕ್ರಮವನ್ನು ಶೀಘ್ರವೇ ಪೂರ್ಣಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ" ಎಂದು ನುಡಿದರು.

ಕಳೆದ ವರ್ಷ ಗ್ರಾಹಕರ ನಡವಳಿಕೆಯಲ್ಲಿ ಭಾರೀ ಬದಲಾವಣೆಗಳು ಕಂಡು ಬಂದಿವೆ. ಡೇಟಾ ಬೇಡಿಕೆಯು ಬಹುಮುಖಿಯಾಗಿ ಬೆಳೆದಿದ್ದರೂ, ಟೆಲಿಕಾಂ ನೆಟ್‍ವರ್ಕ್‍ಗಳು ಡಿಜಿಟಲ್ ಸಮಾಜದಲ್ಲಿ ಅಸ್ತಿತ್ವದಲ್ಲಿರಲು ಕಡ್ಡಾಯ ಪದರವಾಗಿದೆ. ಇದು ವಾಣಿಜ್ಯ ಹಾಗೂ ವಸತಿ ಪ್ರದೇಶಗಳಲ್ಲಿ 24/7 ಹೈಸ್ಪೀಡ್ ಮೊಬೈಲ್ ನೆಟ್‍ವರ್ಕ್ ಸಂಪರ್ಕದ ಪ್ರಾಮುಖ್ಯದ ಬಗ್ಗೆ ಗಮನ ಸೆಳೆದಿದೆ- ಇತ್ತೀಚಿನ 3ಜಿ ಯಿಂದ 4ಜಿ ಸ್ಪೆಕ್ಟ್ರಮ್ ಸುಧಾರಣಾ ಕ್ರಮವು ವೈಯಕ್ತಿಕ ಗ್ರಾಹಕರ ಹಾಗೂ ಕರ್ನಾಟಕದ ಉದ್ಯಮಗಳ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ವಿ ಗೆ ತಂತ್ರಜ್ಞಾನದ ಅತ್ಯುತ್ತಮ ಲಭ್ಯತೆ ಮತ್ತು ಸ್ಪೆಕ್ಟ್ರಮ್ ಬಳಕೆಯ ಪ್ರಯೋಜನವನ್ನು ಒದಗಿಸಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+