• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಯೋದಲ್ಲಿ 11,367 ಕೋಟಿ ರು ಹೂಡಿಕೆ ಮಾಡಿದ ಯುಎಸ್ ಕಂಪನಿ

|

ಮುಂಬೈ, ಮೇ 08: ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್ ("ವಿಸ್ಟಾ") 11,367 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ಇಂದು ಘೋಷಿಸಿವೆ.

   ಬಿವೈ ರಾಘವೇಂದ್ರ ಮಾಡಿದ ಕೆಲಸಕ್ಕೆ ನಟ ಅರುಣ್ ಸಾಗರ್ ಹೇಳಿದ್ದೇನು? | B Y Ragvendra | Arun Sagar

   ಈ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದೆ. ವಿಸ್ಟಾ ಹೂಡಿಕೆಯು ಫುಲ್ಲಿ ಡೈಲ್ಯೂಟೆಡ್ ಬೇಸಿಸ್‌ನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ 2.32% ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದ್ದು, ಈ ಮೂಲಕ ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಫೇಸ್‌ಬುಕ್ ನಂತರದ ಅತಿದೊಡ್ಡ ಹೂಡಿಕೆದಾರನ ಸ್ಥಾನವನ್ನು ವಿಸ್ಟಾ ಪಡೆದುಕೊಂಡಿದೆ. ಈ ಹೂಡಿಕೆಯೊಂದಿಗೆ, ಮೂರು ವಾರಕ್ಕೂ ಕಡಿಮೆ ಅವಧಿಯಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್ ಪ್ರಮುಖ ತಂತ್ರಜ್ಞಾನ ಹೂಡಿಕೆದಾರರಿಂದ 60,596.37 ಕೋಟಿ ರೂ. ಹೂಡಿಕೆ ಪಡೆದುಕೊಂಡಿದೆ.

   ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್, ಜಿಯೋದ ಮುಂಚೂಣಿ ಡಿಜಿಟಲ್ ಆಪ್‌ಗಳು, ಡಿಜಿಟಲ್ ಇಕೋಸಿಸ್ಟಂಗಳು ಹಾಗೂ ಭಾರತದ ನಂ.1 ಅತಿವೇಗದ ಸಂಪರ್ಕ ವೇದಿಕೆಯನ್ನು ಒಂದೇ ಛಾವಣಿಯಡಿ ತರುವ ಮೂಲಕ ಭಾರತಕ್ಕಾಗಿ ಡಿಜಿಟಲ್ ಸಮಾಜವನ್ನು ರೂಪಿಸುತ್ತಿರುವ ಮುಂದಿನ ಪೀಳಿಗೆಯ ತಂತ್ರಜ್ಞಾನ ಸಂಸ್ಥೆಯಾಗಿದೆ. 388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರಿಗೆ ಸಂಪರ್ಕ ವೇದಿಕೆಯನ್ನು ಒದಗಿಸುತ್ತಿರುವ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್, ಜಿಯೋ ಪ್ಲಾಟ್‌ಫಾರ್ಮ್‌ಗಳ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿರಲಿದೆ.

   ಡಿಜಿಟಲ್ ಇಂಡಿಯಾಕ್ಕೆ ಸಾಥ್ ನೀಡಿರುವ ಜಿಯೋ

   ಡಿಜಿಟಲ್ ಇಂಡಿಯಾಕ್ಕೆ ಸಾಥ್ ನೀಡಿರುವ ಜಿಯೋ

   1.3 ಶತಕೋಟಿ ಭಾರತೀಯರು ಹಾಗೂ ಭಾರತೀಯ ಉದ್ಯಮಗಳಿಗೆ, ಅದರಲ್ಲೂ ವಿಶೇಷವಾಗಿ ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರಿಗೆ, ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ. ಭಾರತೀಯ ಡಿಜಿಟಲ್ ಸೇವೆಗಳ ಕ್ಷೇತ್ರವನ್ನು ಪರಿವರ್ತಿಸುವ ಬದಲಾವಣೆಗಳನ್ನು ಜಿಯೋ ತಂದಿದೆ ಹಾಗೂ ವಿಶ್ವದ ಪ್ರಮುಖ ಡಿಜಿಟಲ್ ಆರ್ಥಿಕತೆಗಳಲ್ಲಿ ಒಂದಾಗಿ ಜಾಗತಿಕ ತಂತ್ರಜ್ಞಾನ ನಾಯಕತ್ವದ ಸ್ಥಾನ ಪಡೆಯುವತ್ತ ಭಾರತವನ್ನು ಮುನ್ನಡೆಸಿದೆ.

   ವಿಸ್ಟಾ ಒಂದು ಪ್ರಮುಖ ಜಾಗತಿಕ ಹೂಡಿಕೆ

   ವಿಸ್ಟಾ ಒಂದು ಪ್ರಮುಖ ಜಾಗತಿಕ ಹೂಡಿಕೆ

   ವಿಸ್ಟಾ ಒಂದು ಪ್ರಮುಖ ಜಾಗತಿಕ ಹೂಡಿಕೆ ಸಂಸ್ಥೆಯಾಗಿದ್ದು, ಉದ್ಯಮಗಳನ್ನು ಮರುಶೋಧಿಸುತ್ತಿರುವ ಹಾಗೂ ಬದಲಾವಣೆಯ ವೇಗವರ್ಧಿಸುತ್ತಿರುವ ಎಂಟರ್‌ಪ್ರೈಸ್ ತಂತ್ರಾಂಶ, ಡೇಟಾ ಮತ್ತು ತಂತ್ರಜ್ಞಾನ ಸಶಕ್ತ ಸಂಸ್ಥೆಗಳ ಸಬಲೀಕರಣ ಹಾಗೂ ಬೆಳವಣಿಗೆಯತ್ತ ತನ್ನ ಗಮನವನ್ನು ಕೇಂದ್ರೀಕರಿಸಿದೆ. ವಿಸ್ಟಾ 57 ಶತಕೋಟಿ ಡಾಲರುಗಳಿಗಿಂತ ಹೆಚ್ಚಿನ ಸಂಚಿತ ಬಂಡವಾಳ ಬದ್ಧತೆಗಳನ್ನು ಹೊಂದಿದೆ ಮತ್ತು ಅದರ ಜಾಗತಿಕ ಸಂಸ್ಥೆಗಳ ಜಾಲವು ಒಟ್ಟಾರೆಯಾಗಿ ವಿಶ್ವದ 5ನೇ ಅತಿದೊಡ್ಡ ಎಂಟರ್‌ಪ್ರೈಸ್ ತಂತ್ರಾಂಶ ಸಂಸ್ಥೆಯನ್ನು ಪ್ರತಿನಿಧಿಸುತ್ತದೆ. ***

   11,367 ಕೋಟಿ ರು ಹೂಡಿಕೆ ಮಾಡಿದ ಯುಎಸ್ ಕಂಪನಿ

   ಎಂಟರ್‌ಪ್ರೈಸ್ ತಂತ್ರಾಂಶವೊಂದರಲ್ಲೇ 20 ವರ್ಷಗಳ ಹೂಡಿಕೆ ಅನುಭವ ಹೊಂದಿರುವ ವಿಸ್ಟಾ, ತಂತ್ರಜ್ಞಾನದ ಪರಿವರ್ತಕ ಶಕ್ತಿಯು ಆರೋಗ್ಯಕರ ಗ್ರಹ, ಚುರುಕಾದ ಆರ್ಥಿಕತೆ, ವೈವಿಧ್ಯಮಯ ಮತ್ತು ಎಲ್ಲರನ್ನೂ ಒಳಗೊಂಡ ಸಮುದಾಯ ಮತ್ತು ಸಮೃದ್ಧಿಯತ್ತ ವಿಶಾಲ ಮಾರ್ಗವಿರುವ ಇನ್ನೂ ಉತ್ತಮ ಭವಿಷ್ಯದ ಕೀಲಿಯಾಗಿದೆ ಎಂದು ನಂಬುತ್ತದೆ. ಪ್ರಸ್ತುತ, ವಿಸ್ಟಾ ಪೋರ್ಟ್‌ಫೋಲಿಯೋ ಸಂಸ್ಥೆಗಳು ಭಾರತದಲ್ಲಿ 13,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿವೆ.

   ಬ್ರಾಡ್ ಬ್ಯಾಂಡ್ ಸಂಪರ್ಕ ಸಾಧನೆ

   ಬ್ರಾಡ್ ಬ್ಯಾಂಡ್ ಸಂಪರ್ಕ ಸಾಧನೆ

   ಎಂಟರ್‌ಪ್ರೈಸ್ ತಂತ್ರಾಂಶ, ಡೇಟಾ ಮತ್ತು ತಂತ್ರಜ್ಞಾನ ಸಶಕ್ತ ಸಂಸ್ಥೆಗಳತ್ತ ತನ್ನ ಗಮನ ಕೇಂದ್ರೀಕರಿಸುವ ವಿಸ್ಟಾದ ಈ ಹೂಡಿಕೆಯು, ಬ್ರಾಡ್‌ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್‌ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್‌ಚೈನ್‌ನಂತಹ ಮುಂಚೂಣಿ ತಂತ್ರಜ್ಞಾನಗಳಿಂದ ಚಾಲಿತವಾಗಿ ಜಿಯೋ ರೂಪಿಸಿರುವ ವಿಶ್ವದರ್ಜೆಯ ಡಿಜಿಟಲ್ ವೇದಿಕೆಯ ಸಾಮರ್ಥ್ಯಕ್ಕೆ ಇನ್ನಷ್ಟು ಸಾಕ್ಷಿ ಒದಗಿಸುತ್ತಿದೆ.

   ನಿರ್ದೇಶಕ ಮುಖೇಶ್ ಅಂಬಾನಿ

   ನಿರ್ದೇಶಕ ಮುಖೇಶ್ ಅಂಬಾನಿ

   ವಿಸ್ಟಾ ಜೊತೆಗಿನ ವಹಿವಾಟಿನ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, "ವಿಶ್ವದ ಮುಂಚೂಣಿ ಟೆಕ್ ಹೂಡಿಕೆದಾರ ಸಂಸ್ಥೆ ವಿಸ್ಟಾವನ್ನು ಜಾಗತಿಕವಾಗಿ ಮೌಲ್ಯಯುತ ಪಾಲುದಾರರಾಗಿ ಸ್ವಾಗತಿಸಲು ನನಗೆ ಸಂತೋಷವಾಗಿದೆ. ನಮ್ಮ ಇತರ ಪಾಲುದಾರರಂತೆ, ಎಲ್ಲ ಭಾರತೀಯರ ಅನುಕೂಲಕ್ಕಾಗಿ ಭಾರತದ ಡಿಜಿಟಲ್ ಇಕೋಸಿಸ್ಟಂ ಅನ್ನು ಬೆಳೆಸುವ ಹಾಗೂ ಪರಿವರ್ತಿಸುವುದನ್ನು ಮುಂದುವರೆಸುವ ದೃಷ್ಟಿಯನ್ನು ವಿಸ್ಟಾ ಕೂಡ ನಮ್ಮೊಂದಿಗೆ ಹಂಚಿಕೊಳ್ಳುತ್ತದೆ. ಪ್ರತಿಯೊಬ್ಬರಿಗೂ ಇನ್ನೂ ಉತ್ತಮ ಭವಿಷ್ಯದ ಕೀಲಿಯಾಗಬಲ್ಲ ತಂತ್ರಜ್ಞಾನದ ಪರಿವರ್ತಕ ಶಕ್ತಿಯನ್ನು ಅವರು ನಂಬುತ್ತಾರೆ. ಗುಜರಾತ್ ಮೂಲದ ಕುಟುಂಬದಿಂದ ಬಂದಿರುವ ರಾಬರ್ಟ್ ಮತ್ತು ಬ್ರಿಯಾನ್ ಅವರಲ್ಲಿ, ಭಾರತವನ್ನು ಮತ್ತು ಡಿಜಿಟಲ್ ಭಾರತೀಯ ಸಮಾಜದ ಪರಿವರ್ತಕ ಸಾಮರ್ಥ್ಯವನ್ನು ನಂಬುವ ಇಬ್ಬರು ಅತ್ಯುತ್ತಮ ಜಾಗತಿಕ ತಂತ್ರಜ್ಞಾನ ನಾಯಕರನ್ನು ನಾನು ಕಂಡಿದ್ದೇನೆ. ಜಾಗತಿಕವಾಗಿ ತನ್ನ ಹೂಡಿಕೆಗಳಿಗೆ ವಿಸ್ಟಾ ನೀಡುತ್ತಿರುವ ವೃತ್ತಿಪರ ಪರಿಣತಿ ಮತ್ತು ಬಹು-ಹಂತದ ಬೆಂಬಲದ ಪ್ರಯೋಜನವನ್ನು ಜಿಯೋಗಾಗಿಯೂ ಪಡೆಯಲು ನಾವು ಉತ್ಸುಕರಾಗಿದ್ದೇವೆ.'' ಎಂದು ಹೇಳಿದ್ದಾರೆ.

   English summary
   US-based PE firm Vista Equity Partners to invest Rs 11,367 crore in Jio Platforms.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X